ಪೆಟ್ರೋಲ್ ಬಂಕ್ ಎಡವಟ್ಟು: ಸಿಎಂ ಬೆಂಗಾವಲು ಪಡೆ 19 ವಾಹನಕ್ಕೆ ಡಿಸೇಲ್ ಬದಲು ನೀರು

ರಾಷ್ಟೀಯ

ಮಧ್ಯಪ್ರದೇಶ: ಸಿಎಂ ಬೆಂಗಾವಲು ವಾಹನಕ್ಕೆ ಡಿಸೇಲ್ ಬದಲು ನೀರು ತುಂಬಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪ್ರಾದೇಶಿಕ ಕೈಗಾರಿಕೆ, ಕೌಶಲ್ಯ ಮತ್ತು ಉದ್ಯೋಗ ಸಮಾವೇಶದಲ್ಲಿ (RISE 2025) ಭಾಗವಹಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ ಯಾದವ್ ಬೆಂಗಾವಲುಪಡೆ ವಾಹನ ಮಧ್ಯದಲ್ಲಿ ನಿಂತಿದೆ. ಏನಾಯಿತೆಂದು ನೋಡಿದಾಗ, ಡಿಸೇಲ್ ಬದಲು ನೀರು ಇರೋದು ಬೆಳಕಿಗೆ ಬಂದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರು ಹಾಕಲಾಗಿದೆ. ಎಲ್ಲ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಮತ್ತೊಂದು ರಸ್ತೆಯಲ್ಲಿ ನಿಂತಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಗೊಂದಲದ ವಾತಾವರಣ ಮನೆ ಮಾಡಿತ್ತು. ವಿಚಾರಣೆ ನಂತರ ವಾಹನಗಳಿಗೆ ಡಿಸೇಲ್ ಬದಲು ನೀರು ತುಂಬಿರುವದು ಬೆಳಕಿಗೆ ಬಂದಿದೆ. ಕೂಡಲೇ ಆ ಪೆಟ್ರೋಲ್ ಪಂಪ್ ಸೀಲ್ ಮಾಡಿ, ವಿಚಾರಣೆ ಮುಂದುವರೆದಿದೆ.

ಗುರುವಾರ ರಾತ್ರಿ 10 ಗಂಟೆಯಗೆ, ಸಿಎಂ ಬೆಂಗಾವಲಿನ 19 ಕಾರುಗಳು ಡೀಸೆಲ್ ತುಂಬಲು ರತ್ಲಂ ನಗರ ಮಿತಿಯ ದೋಸಿಗಾಂವ್ನಲ್ಲಿರುವ ಭಾರತ ಪೆಟ್ರೋಲಿಯಂನ ಶಕ್ತಿ ಇಂಧನ ಪೆಟ್ರೋಲ್ ಪಂಪ್’ಗೆ ತೆರಳಿತ್ತು. ವಾಹನಗಳಿಗೆ ಡೀಸೆಲ್ ತುಂಬಿದ ಸ್ವಲ್ಪ ಸಮಯದ ನಂತರ, ಎಲ್ಲಾ ಕಾರುಗಳು ಸ್ವಲ್ಪ ದೂರದಲ್ಲಿ ನಿಲ್ಲಲು ಶುರುವಾಯ್ತು. ಅವುಗಳನ್ನು ತಳ್ಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಯಿತು. ಸ್ಥಳದಲ್ಲಿ ಗೊಂದಲ ಮನೆ ಮಾಡಿತ್ತು.

20 ಲೀಟರ್ ಡೀಸೆಲ್ ನಲ್ಲಿ 10 ಲೀಟರ್ ನೀರು: ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ವಾಹನಗಳಿಗೆ 20 ಲೀಟರ್ ಡೀಸೆಲ್ ತುಂಬಿಸಲಾಗಿತ್ತು. ತನಿಖೆ ವೇಳೆ ಇದರಲ್ಲಿ 10 ಲೀಟರ್ ನೀರು ಎಂಬುದು ಬಹಿರಂಗವಾಗಿದೆ. ಬಹುತೇಕ ಎಲ್ಲಾ ವಾಹನಗಳಲ್ಲಿ ಇದೆ ಪರಿಸ್ಥಿತಿ ಕಂಡುಬಂದಿದೆ. ಸಿಎಂ ಗುರಿಯಾಗಿಸಿಕೊಂಡು ನಡೆದ ಕೃತ್ಯ ಇದಲ್ಲ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ. ಬರಿ ಸಿಎಂ ಬೆಂಗಾವಲು ವಾಹನ ಮಾತ್ರವಲ್ಲ ಪೆಟ್ರೋಲ್ ಬಂಕ್ ನಲ್ಲಿ ಡಿಸೇಲ್ ತುಂಬಿಸಿದ್ದ ಟ್ರಕ್ ಚಾಲಕನಿಗೂ ಇದೆ ಅನುಭವ ಆಗಿದೆ. ಟ್ರಕ್ ಚಾಲಕ 200 ಲೀಟರ್ ಡೀಸೆಲ್ ತುಂಬಿಸಿದ್ದ. ಅದು ಸ್ವಲ್ಪ ದೂರ ಹೋಗಿ ನಿಂತಿದೆ.

ನೀರು ಸೇರಲು ಕಾರಣ ಏನು ?

ಸ್ಥಳಕ್ಕೆ ಬಂದ ಅಧಿಕಾರಿಗಳು ಭಾರತ್ ಪೆಟ್ರೋಲಿಯಂನ ಪ್ರದೇಶ ವ್ಯವಸ್ಥಾಪಕ ಶ್ರೀಧರ್ ಅವರಿಗೆ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಮಳೆಯಿಂದಾಗಿ ಪೆಟ್ರೋಲ್ ಟ್ಯಾಂಕ್ನಲ್ಲಿ ನೀರು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಶ್ರೀಧರ್ ಹೇಳಿದ್ದಾರೆ.

ಶಕ್ತಿ ಫ್ಯೂಯೆಲ್ಸ್ ಪೆಟ್ರೋಲ್ ಬಂಕ್, ಇಂದೋರ್ ನಿವಾಸಿ ಶಕ್ತಿ ಅವರ ಪತಿ ಎಚ್‌ಆರ್ ಬುಂದೇಲಾ ಅವರ ಹೆಸರಿನಲ್ಲಿದೆ. ಆಹಾರ ಮತ್ತು ಸರಬರಾಜು ಇಲಾಖೆ ರಾತ್ರಿಯೇ ಪೆಟ್ರೋಲ್ ಪಂಪ್’ಗೆ ಸೀಲ್ ಹಾಕಿದೆ. ಇಂದು ನಡೆಯಲಿರುವ ಎಂಪಿ ರೈಸ್ ಕಾನ್ಕ್ಲೇವ್ನಲ್ಲಿ ಯಾವುದೆ ಅಡಚಣೆಯಾಗದಂತೆ ಇಂದೋರ್ನಿಂದ ಹೊಸ ವಾಹನಗಳನ್ನು ವ್ಯವಸ್ಥೆ ಮಾಡಿ ರತ್ಲಂಗೆ ಕಳುಹಿಸಲಾಗಿದೆ. ಮಳೆಯಿಂದಾಗಿ ಪೆಟ್ರೋಲ್ ಟ್ಯಾಂಕ್ನಲ್ಲಿ ನೀರು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಹೇಳಿದ್ದಾರೆ.

ರೈಸ್ 2025 ಸಮಾವೇಶದಲ್ಲಿ ಸಿಎಂ ಡಾ. ಮೋಹನ್ ಯಾದವ್ ಸೇರಿದಂತೆ ಅನೇಕ ವಿಐಪಿಗಳು ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *