ಟೊಕಿಯೋ: ಭೂಕಂಪ, ಸುನಾಮಿ, ಪ್ರವಾಹ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳ ಕುರಿತು ಖ್ಯಾತ ಜ್ಯೋತಿಷಿ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗಿದೆ. ಜುಲೈ 3 ರಂದು ಬಾಬಾ ವಂಗಾ ಭೂಕಂಪದ ಭವಿಷ್ಯ ನುಡಿದಿದ್ದರು. ದ್ವೀಪದಲ್ಲಿ ಭೂಕಂಪ ಸಂಭವಿಸಲಿದೆ ಎಂಬ ಅವರ ಭವಿಷ್ಯ ನಿಜವಾಗಿದೆ.
ಜಪಾನ್ನ ಟೊಕಾರ ದ್ವೀಪದಲ್ಲಿ ಜುಲೈ 3 ರಂದು 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಬಾಬ ವಂಗಾ ಜುಲೈ 5 ರಂದು ಸುನಾಮಿ ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಭೂಕಂಪ ಭವಿಷ್ಯ ನಿಜವಾಗಿರುವ ಕಾರಣ ಇದೀಗ ಜುಲೈ 5ರ ಸುನಾಮಿ ಭವಿಷ್ಯ ಜಪಾನ್ ಜನರ ಆತಂಕ ಹೆಚ್ಚಿಸಿದೆ.
ಜುಲೈ 5ಕ್ಕೆ ಭೂಕಂಪ ಅಥವಾ ಸುನಾಮಿ
ಬಾಬಾ ವಂಗಾ ನುಡಿದ ಭವಿಷ್ಯ ಇದೀಗ ಜಪಾನ್ನಲ್ಲಿ ತೀವ್ರ ಆತಂಕ ಹೆಚ್ಚಿಸಿದೆ. ಪ್ರಮುಖವಾಗಿ ಜುಲೈ 5 ರಂದು ಭೂಕಂಪ ಅಥವಾ ಸುನಾಮಿ ಅಪ್ಪಳಸಲಿದೆ ಎನ್ನುವ ಭವಿಷ್ಯಕ್ಕೆ ಪೂರಕವಾಗಿ 2011ರಲ್ಲಿ ಜಪಾನ್ ಎದುರಿಸಿದ ಸುನಾಮಿ ರೀತಿಯಲ್ಲೇ ಈಗಲ ಪಿಲಫೈನ್ಸ್ ಹಾಗೂ ಜಪಾನ್ ಆಳ ಸಮುದ್ರದಲ್ಲಿ ಭೂಕಂಪದ ಸೂಚನೆಗಳು ರೂಪುಗೊಳ್ಳುತ್ತಿದೆ ಎಂದು ವಿಜ್ಞಾನಿಗಳು ಸುಳಿವು ನೀಡಿದ್ದಾರೆ. ಇದು ಆತಂಕ ಹೆಚ್ಚಿಸಿದೆ.
ವಂಗಾ ನುಡಿದ ಭವಿಷ್ಯವೇನು
ಜುಲೈ 5ರಂದು ಜಪಾನ್ ಹಾಗೂ ಪಿಲಿಫೈನ್ಸ್ ಆಳ ಸಮುದ್ರದಲ್ಲಿ ಬಾಯಿ ತೆರೆದುಕೊಳ್ಳಲಿದೆ. ಇದರಿಂದ ಭಾರಿ ಗಾತ್ರದ ಅಲೆಗಳು, ನೀರು ಜಪಾನ್ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ. ಇದು 2011ರಲ್ಲಿ ಅಪ್ಪಳಿಸಿದ ಸುನಾಮಿಗಿಂತ ಮೂರು ಪಟ್ಟು ದೊಡ್ಡದಾಗಲಿದೆ. ಹೀಗಾಗಿ ಇದು ಸೃಷ್ಟಿಸುವ ಅಪಾಯ ಹಾಗೂ ಅವಾಂತರದ ಪ್ರಮಾಣ ಹೆಚ್ಚಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಬಾಬಾ ವಂಗಾ ಹೇಳಿದಂತೆ ವಿಜ್ಞಾನಿಗಳು ಕೆಲ ಸಂಜ್ಞೆಗಳನ್ನು ಪತ್ತೆ ಹಚ್ಚಿದ್ದಾರೆ. ಆಳ ಸಮುದ್ರದಲ್ಲಿ 2011ರ ಸಂದರ್ಭದಲ್ಲೇ ಮಾಪಕಗಳು ನೀಡಿದ್ದ ಸಂಜ್ಞೆಗಳು ಈಗಲೂ ನೀಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಇದು ಭೂಕಂಪ ಅಥವಾ ಸುನಾಮಿಯ ಸೂಚನೆ ಎನ್ನುವದು ಸ್ಪಷ್ಟವಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತೀರ ಪ್ರದೇಶದ ಜನರಿಗೆ ಎಚ್ಚರಿಕೆ
ಜಪಾನ್ ಹಾಗೂ ಪಿಲಿಫೈನ್ಸ್ ಆಳ ಸಮುದ್ರದಲ್ಲಿ ಈ ಸುನಾಮಿ ಅಲೆಗಳು ಸೃಷ್ಟಿಯಾಗಲಿದೆ. ಇದರಿಂದ ಜಪಾನ್ ತೀರ ಪ್ರದೇಶಕ್ಕೆ ಭಾರಿ ಗಾತ್ರದ ಅಲೆಗಳು ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿರುವ ಕಾರಣ ಈಗಾಲೇ ತೀರ ಪ್ರದೇಶದ ಜಪಾನ್ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ. ಬಾಬಾ ವಂಗಾ ಹೇಳಿದಂತೆ ಸುನಾಮಿ ಅಪ್ಪಳಿಸಿದರೆ ಪರಿಣಾಮ ಗಂಭೀರವಾಗುವ ಸಾಧ್ಯತೆ ಕಾರಣ ಜನರೇ ಖುದ್ದಾಗಿ ಜಾಗ ಖಾಲಿ ಮಾಡುತ್ತಿದ್ದಾರೆ. ಇತ್ತ ತೀರ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಇಷ್ಟೆ ಅಲ್ಲ ಕಡಲ ತೀರಕ್ಕೆ ಭೇಟಿ ನೀಡದಂತೆ ಸೂಚನೆ ನೀಡಲಾಗಿದೆ.
ಇತ್ತೀಚಿನ ಅಧ್ಯಯನ ವರದಿ ಪ್ರಕಾರ ನನ್ಕೈ ವಲಯದಲ್ಲಿ ಭೂಪದರಗಳ ಘರ್ಷಣೆಯಾಗುತ್ತಿರುತ್ತದೆ. ಇದು ಸಾಮಾನ್ಯವಾಗಿದೆ. ಈ ವಲಯ ಎರಡು ಭೂಪದರಗಳ ಘರ್ಷಣೆಯಿಂದ ಸಣ್ಣ ಸಣ್ಣ ಸುನಾಮಿ ಅಲೆಗಳು ಸೃಷ್ಟಿಯಾಗಲಿದೆ. ಆದರೆ ಈ ರೀತಿ ಘರ್ಷಣೆ ಹೆಚ್ಚಾದರೆ ದೊಡ್ಡ ಅನಾಹುತಕ್ಕೂ ಕಾರಣವಾಗಲಿದೆ ಎಂದಿದೆ. 1946ರಲ್ಲಿ ನಾನ್ಕೈ ವಲಯದಲ್ಲಿ ಭಾರಿ ಗಾತ್ರದ ಭೂಕಂಪ ಸಂಭವಿಸಿತ್ತು. ಇದು ರಿಕ್ಚರ್ ಮಾಪಕದಲ್ಲಿ 8.1 ರಿಂದ 8.4ರ ವರೆಗೆ ದಾಖಲಾಗಿತ್ತು. ಇದೀಗ ಇದೆ ವಲಯದಲ್ಲಿ ಸುನಾಮಿ ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.