ಕಲಬುರಗಿ: ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಸಮನ್ವಯತೆ ತರಲು ಶ್ರಮಿಸಿದ, ಎಲ್ಲರನ್ನು ಸಮದೃಷ್ಟಿಯಿಂದ ನೋಡಿದ ತತ್ವಜ್ಞಾನಿ ಸಂತ ಶಿಶುನಾಳ ಶರೀಫ ಅವರು ಕರ್ನಾಟಕದ ಕಬೀರರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಸಂತ ಶಿಶುನಾಳ ಶರೀಫ್ ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರೀಫ್ ಅವರು ಮಾತನಾಡಿ, ಸಮಾನತೆಯ ಹರಿಕಾರ. ವಿಚಾರವಾದಿ, ವಿಮರ್ಶಕರು, ಸಮಾಜ ಸುಧಾರಕರು, ನೀತಿ ಬೋಧಕರು ಹಾಗೂ ಮೇರು ಜ್ಞಾನಿಗಳಾಗಿದ್ದರು. ಪರಿಸ್ಥಿತಿಗೆ ಅನುಗುಣವಾಗಿ ಕವಿತೆಗಳನ್ನು ರಚಿಸಿ ಸಂದೇಶ ಹರಡಲು ಶರೀಫ್ ಅವರು ಹಾಡುತ್ತಿದ್ದರು. ತಮ್ಮ ಸಂಯೋಜನೆ ಎಂದಿಗೂ ಬರೆದಿಲ್ಲದಿದ್ದರು, ಅವುಗಳಲ್ಲಿ ಹಲವು ಬಾಯಿ ಮಾತಿನ ಮೂಲಕ ಭವಿಷ್ಯದ ಪೀಳಿಗೆಗೆ ರವಾನಿಸಲ್ಪಟ್ಟಿವೆ ಎಂದರು.
ಸಂತ ಶಿಶುನಾಳ ಶರೀಫ ಅವರು ಸೊರುಟಿಹುದು ಮನೆಯ ಮಾಳಿಗೆ, ಗುಡಿಯಾ ನೋಡಿರಣ್ಣ ದೇಹದ, ಅಳಬೇಡ ತಂಗಿ ಅಳಬೇಡ, ತರವಲ್ಲ ತಂಗಿ ನಿನ್ನ, ಬಿದ್ದಿಯಬ್ಬೆ ಮುದುಕಿ, ಎಲ್ಲಾರಂಥವನಲ್ಲ ನನ್ನ ಗಂಡ, ಮೋಹದ ಹೆಂಡತಿ ತೀರಿದ ಬಾಲಿಕಾ, ಸ್ನೇಹಾ ಮಾಡಬೇಕಿಂಥವಾಲ, ಗುಡುಗುಡಿಯ ಸೇದು ನೋಡೋ, ಲೋಕದ ಕಲಾಜಿ, ದುಡ್ಡು ಕೆಟ್ಟದು ನೋಡಣ್ಣ, ಕೆಲ ಜಾನ ಶಿವ ಧ್ಯಾನ ಮದನ್ನಾ ಅಂತಹ ಪ್ರಸಿದ್ಧವಾದ ಅನೇಕ ತತ್ವ ಪದಗಳನ್ನು ಹಾಡುತ್ತಾ, ಎಲ್ಲೆಡೆ ಜನಜಾಗೃತಿ ಮೂಡಿಸಿದರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್ ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.