ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಅಗತ್ಯ: ಎಚ್.ಬಿ ಪಾಟೀಲ

ನಗರದ

ಕಲಬುರಗಿ:  ಪ್ಲಾಸ್ಟಿಕ್ ಬಳಕೆ ಹಳ್ಳಿ, ನಗರ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇಂದು ಜಗತ್ತನ್ನು ಆಳುತ್ತಿರುವುದು  ಪ್ಲಾಸ್ಟಿಕ್, ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೆ ಭೂಮಿಯ ಮೇಲೆ ರಾಶಿ-ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು. 

   ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ನಿತ್ಯ ನಾವು ಹೀಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಸಮುದ್ರ, ನದಿ, ಸರೋವರಗಳ ಆಳ, ಭೂಮಿಯ ಮೇಲ್ಪದರು ಮತ್ತು ಗರ್ಭದಲ್ಲಿ ಸೇರಿ, ಇಡಿ ಪರಿಸರವನ್ನು ನಾಶ ಮಾಡುತ್ತದೆ. ಜಲಚರ ಪ್ರಾಣಿ ಪಕ್ಷಿಗಳು ಬಳಸಿ ಬಿಸಾಡಿದ ಪ್ಲಾಸ್ಟಿಕ್ ನುಂಗಿ ಸಾವಿಗೆ ಗುರಿಯಾಗುತ್ತವೆ. ಪ್ಲಾಸ್ಟಿಕ್ ಚೀಲಗಳ ಉತ್ಪಾದನೆ ನಿಲ್ಲಿಸಲು, ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು. 

ಚಿಂದಿ ಆಯುವವರು, ಸ್ಕ್ರ್ಯಾಪ್ ಡೀಲರ್‌ಗಳನ್ನು ಉತ್ತೇಜಿಸುವ ಅಗತ್ಯವಿದ್ದು, ಮರುಬಳಕೆಯ ಬ್ಯಾಗ್ ಉತ್ಪಾದಿಸಲು ಸ್ಟಾರ್ಟ್‌ ಆಪ್‌ಗಳನ್ನು ಉತ್ತೇಜಿಸಬೇಕು. ಪ್ರಮುಖವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.

ಹಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆ, ಪೇಪರ್‌ಗಳು ಬಳಕೆಗೆ ಬಂದಿವೆ. ಹಾಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಹಾನಿ ಎಂಬುದು ಈಗಾಗಲೇ ದೃಢವಾಗಿದೆ. ಪ್ಲಾಸ್ಟಿಕ್‌ನಿಂದ ನಾವು ದೂರ ಇದ್ದಷ್ಟು ಉತ್ತಮ. ಹಾಗೆ ಇಡಿ ವಿಶ್ವವನ್ನು ಪ್ಲಾಸ್ಟಿಕ್ ಮುಕ್ತ ವರ್ಷ ಮಾಡಲು ಎಲ್ಲರು ಪ್ರಯತ್ನಿಸಬೇಕಾಗಿದೆ. ನಮ್ಮ ಭೂಮಿ ಮೇಲೆ ಬರೋಬ್ಬರಿ 430 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.   

  ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *