ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ

ಸುದ್ದಿ ಸಂಗ್ರಹ ನವದೆಹಲಿಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ವೈದ್ಯರ ಶಿಫಾರಸು ಇಲ್ಲದೆ ಯಾವುದೆ ಸಿರಪ್‌ಗಳನ್ನು ಖರೀದಿಸುವಂತಿಲ್ಲ. ಎಲ್ಲಾ ಸಿರಪ್‌ಗಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ. ಅದೆ ರೀತಿ ಕೆಮ್ಮಿನ ಸಿರಪ್‌ಗೂ ವೈದ್ಯರ ಶಿಫಾರಸು ಅಗತ್ಯ ಎಂದು ಕೇಂದ್ರ ಸೂಚನೆ ನೀಡಿದೆ. ಕೇಂದ್ರವು 1945ರ ಔಷಧ ನಿಯಮಗಳನ್ನು ತಿದ್ದುಪಡಿ ಮಾಡಿದೆ. ವೇಳಾಪಟ್ಟಿ K ಅಡಿಯಲ್ಲಿ ಪಟ್ಟಿ ಮಾಡಲಾದ ವಿನಾಯಿತಿ ಪಡೆದ ಔಷಧಿಗಳ ವರ್ಗದಿಂದ ‘ಸಿರಪ್‌ಗಳು’ ಎಂಬ […]

Continue Reading

ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್: ಇದು ನಿಜವಾಗಿಯೂ ಪರಿಹಾರ ನೀಡುತ್ತಾ ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಐಸ್ ನೀರಿನಿಂದ ತುಂಬಿದ ಬಾಟಲಿಯನ್ನು ಕಾಲಿನ ಕೆಳಗೆ ಇಟ್ಟು ರೋಲ್ ಮಾಡಿದರೆ ಕಾಲು ನೋವು ಅಥವಾ ಪಾದದ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ, ಇದು “ಕೋಲ್ಡ್ ಥೆರಪಿ” ಮತ್ತು ಮಸಾಜ್‌, ಎರಡರ ಸಂಯೋಜನೆಯಂತೆ ಕೆಲಸ ಮಾಡುತ್ತದೆ. ಐಸ್‌ನ ತಂಪು ಕಾಲಿಗೆ ತಾಗಿದಾಗ ಆ ಭಾಗದ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕೋಚಗೊಳ್ಳುತ್ತವೆ. ಇದರಿಂದ ಊತ ಮತ್ತು ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ತಂಪಿನಿಂದ ನರಗಳು ಸ್ವಲ್ಪ […]

Continue Reading

ಶಕ್ತಿ ಸ್ಮಾರ್ಟ್ ಕಾರ್ಡ್‌ಗೆ ಅಂತಿಮ ಸಿದ್ಧತೆ: ಬೈರತಿ ಸುರೇಶ್

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಅಂತಿಮ ರೂಪುರೇಶೆ ಸಿದ್ಧಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸುಮಾರು 2 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವಿತರಿಸುವ ಸಾಧ್ಯತೆಗಳಿವೆ. ಈ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ ವಿಶೇಷ ಉದ್ದೇಶಿತ ವಾಹನವನ್ನು ರಚನೆ ಮಾಡಿ, ಇದರಡಿಯೇ ವಿತರಣಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು. ಇದೆ […]

Continue Reading

ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಾಯ

ಸುದ್ದಿ ಸಂಗ್ರಹ ಮೈಸೂರುಮೈಸೂರಿನ ರಿಂಗ್ ರಸ್ತೆಯ ಸಮೀಪದ ಫಾಕ್ಸ್ ಜೆನ್ ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪಬ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಪಬ್ ಸಂಪೂರ್ಣ ಸುಟ್ಟು ಹೋಗಿದೆ. ಅವಘಡದಲ್ಲಿ ಸಾಹೀನ್ ಮತ್ತು ಪ್ರಕಾಶ್ ಎಂಬ ಇಬ್ಬರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ […]

Continue Reading

ಸಸಿ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆ ಮಾಡಲು ಸಲಹೆ

ಸುದ್ದಿ ಸಂಗ್ರಹ ಶಹಾಬಾದಪರಿಸರ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದ್ದು, ಪ್ರತಿಯೊಬ್ಬರು ಸಸಿ ನೆಟ್ಟು, ಪೋಷಣೆ ಮಾಡಿ, ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಹೇಳಿದರು. ನಗರದ ಸಂತ ಥಾಮಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ವಿನಾಶ ಮನುಕುಲದಿಂದ ಮಾತ್ರ ಸಾಧ್ಯ, ಇಂದು ಗಿಡ ಮರಗಳ ಕಟಾವಿನಿಂದ ಪರಿಸರ ಹಾಳಾಗುತ್ತಿದೆ. ಇದರ ಪರಿಣಾಮವಾಗಿ ಬಿರುಬಿಸಿಲು, ಬಿರುಗಾಳಿ, ಮಹಾಮಳೆ, ಬರಗಾಲ, […]

Continue Reading

ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಸುದ್ದಿ ಸಂಗ್ರಹ ಶಹಾಬಾದ್ ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಏನುಬೇಕಾದರೂ ಸಾಧಿಸಬಹುದಾದ ಕೌಶಲ್ಯಗಳು ಅಡಗಿವೆ.ಅವುಗಳನ್ನು ಹೊರಗೆ ತರುವಂತಹ ಪ್ರಾಮಾಣಿಕ ಪ್ರಯತ್ನಗಳಾದಾಗ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದು ಜೆಪಿ ಕಾರ್ಖಾನೆಯ ಘಟಕದ ಮುಖ್ಯಸ್ಥ ಮಂಜುನಾಥ ಪ್ರಭು ಹೇಳಿದರು. ನಗರದ ಜೆಪಿ ಕಾಲೋನಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಅದನ್ನು ಉಪಯೋಗಿಸುವಂತಹ ಕಲೆ ಅವರಿಗೆ ಕಲಿಸಬೇಕು. ವಿದ್ಯಾರ್ಥಿ […]

Continue Reading

ಗ್ರೂಪ್ ಇನ್ಶೂರೆನ್ಸ್ ಹಣ ಬಿಡುಗಡೆಗೆ 3 ಸಾವಿರ ರೂ. ಲಂಚ: ದ್ವಿತೀಯ ದರ್ಜೆ ಸಹಾಯಕಿ ಲೋಕಾ ಬಲೆಗೆ

ಸುದ್ದಿ ಸಂಗ್ರಹ ಹಾವೇರಿಗ್ರೂಪ್ ಇನ್ಶೂರೆನ್ಸ್ ಮಂಜೂರು ಮಾಡಿಕೊಡಲು 3 ಸಾವಿರ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಸಹಕಾರ ಸಂಘಗಳ ಉಪಬಂಧಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಬಂಧನ ಮಾಡಿದ್ದಾರೆ. ಹಾವೇರಿಯ ದೇವಗಿರಿ ಗ್ರಾಮದ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಬಂಧನ ಮಾಡಿದ್ದಾರೆ. ಅಕ್ಕಮ್ಮ ಬಿದರೇರ್ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹದೇವ ಜೇಕಿನಕಟ್ಟಿ ಎಂಬುವರ ವಯೋ ನಿವೃತ್ತಿಯಾಗಿದ್ದು, ಗುಂಪು ವಿಮೆ ಮೊತ್ತ ಬಿಲ್ […]

Continue Reading

ಜೈಪುರದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸರು

ಸುದ್ದಿ ಸಂಗ್ರಹ ಜೈಪುರವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಜೈಪುರಕ್ಕೆ ಹೋಗಿದ್ದ ಎಚ್‌ಎಎಲ್ ಪೊಲೀಸ್ ಠಾಣೆಗೆ ಸೇರಿದ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ರವಿವಾರ ಜೈಪುರದ ಹೋಟೆಲ್‌ನಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಅಧಿಕಾರಿಗಳು 40,000 ರೂ. ಲಂಚ ಪಡೆದ ಆರೋಪದ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿರುವುದು ಬೆಂಗಳೂರು ನಗರ ಪೊಲೀಸರಿಗೆ ದೊಡ್ಡ ಮುಜುಗರವನ್ನುಂಟು ಮಾಡಿದೆ. ಆರೋಪಿಗಳನ್ನು ಎಚ್‌ಎಎಲ್ ಪೊಲೀಸ್ ಠಾಣೆಗೆ ಸೇರಿದ ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅನಿತಾ […]

Continue Reading

ಕಲಬುರಗಿ: ಸಂಗೋಳಗಿ ಸರ್ಕಾರಿ ಶಾಲೆಯ ಚಾವಣಿಯ ಪದರ ಕುಸಿತ

ಸುದ್ದಿ ಸಂಗ್ರಹ ಆಳಂದತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಚಾವಣಿಯ ಪದರ ಶನಿವಾರ ಕುಸಿದು ಬಿದ್ದಿದೆ. ಸದ್ಯ ಶಾಲಾ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಯಾವುದೆ ದುರ್ಘಟನೆ ಸಂಭವಿಸಿಲ್ಲ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಈ ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಮೂರು ಕೋಣೆಗಳು ಇದ್ದವು. ಅಂದಾಜು 40 ವರ್ಷದ ಹಿಂದೆ ನಿರ್ಮಿಸಲಾದ ಕಟ್ಟಡವು ಈಗ ಬಳಕೆಯಲ್ಲಿಲ್ಲ. ಆದರೆ ಹೊಸ ಶಾಲೆಯ ಮುಂಭಾಗದಲ್ಲಿನ ಕಟ್ಟಡದಲ್ಲಿ ಮಕ್ಕಳು ಆಟೋಟದಲ್ಲಿ ನಿರತರಾಗಿರುತ್ತಾರೆ. 204 […]

Continue Reading

ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಅನಂತ್‌ ಅಂಬಾನಿ ವಿಶೇಷ ಪೂಜೆ

ಸುದ್ದಿ ಸಂಗ್ರಹ ಉಡುಪಿರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರು ಬೈಂದೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ ತಮ್ಮ ಕುಟುಂಬದ ಗುರೂಜಿಯವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅನಂತ ಅಂಬಾನಿ, ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ದೇವಾಲಯದ ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ದೇವಿಯ ಕೃಪೆಗೆ ಪಾತ್ರರಾದ ಅವರಿಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರ ವತಿಯಿಂದ ಶಾಲು ಹೊದಿಸಿ […]

Continue Reading