ಚಿತ್ತಾಪುರ: ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪರಿಸರ ಕಾಪಾಡಿಕೊಳ್ಳಬೇಕು ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್-ಮಿಲಾದ್ ಹಬ್ಬದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ್ ಹಬ್ಬದ ಮತ್ತು ಈದ್ – ಮಿಲಾದ್ ಒಟ್ಟಿಗೆ ಬಂದಿದ್ದು, ಹೀಗಾಗಿ ಎಲ್ಲರೂ ಸಂತೋಷದಿಂದ ಹಬ್ಬಗಳು ಆಚುಸಬೇಕು, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಇತರರಿಗೆ ತೊಂದರೆಯಾಗದಂತೆ ಹಬ್ಬಗಳು ಆಚುಸಬೇಕು ಎಂದರು.
ಗಣೇಶ ಪ್ರತಿಷ್ಠಾಪಿಸುವ ಉತ್ಸವ ಮಂಡಳಿಯವರು
ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕಡ್ಡಾಯವಾಗಿ
ಅನುಮತಿ ಪಡೆದುಕೊಳ್ಳಬೇಕು ಎಂದರು.
ಪಟ್ಟಣದ ಎಲ್ಲಾ ಗಣೇಶ ಉತ್ಸವ
ಮಂಡಳಿಯವರು ಗಣೇಶ ವಿಸರ್ಜನ ದಿನದಂದು
ರೈಲ್ವೆ ಸ್ಟೇಷನ್ ಹತ್ತಿರ ಸೇರಿ ನಿಗದಿತ ಸಮಯಕ್ಕೆ
ಅಲ್ಲಿಂದ ಒಟ್ಟಿಗೆ ಮೆರವಣಿಗೆ ಆರಂಭಗೊಳಿಸಬೇಕು.
ಉತ್ಸವ ಸಂದರ್ಭದಲ್ಲಿ ಯಾವುದೆ ವಿದ್ಯುತ್
ಅವಗಡ ಸಂಭವಿಸದಂತೆ ಜೆಸ್ಕಾಂ ಮುನ್ನೆಚ್ಚರಿಕೆ ಕ್ರಮ
ತೆಗೆದುಕೊಳ್ಳಬೇಕು ಮತ್ತು ಗಣೇಶ ವಿಸರ್ಜನೆ
ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ, ಸುತ್ತಲಿನ ಸ್ವಚ್ಛತೆ, ರಸ್ತೆ
ಸುಧಾರಣೆ ಬಗ್ಗೆ ಪುರಸಭೆಯವರು ಕಾಳಜಿವಹಿಸಿ
ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದರು.
ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ
ಮರತೂರಕ ಮಾತನಾಡಿ, ಇಲ್ಲಸಲ್ಲದ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡದೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಅಂದಾಗ ಮಾತ್ರ ಊರಿನ ಕಿರ್ತಿ
ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ ಐ ಚಂದ್ರಾಮಪ್ಪ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಜೆಸ್ಕಾಂ ಎಸ್.ಒ ಮೋಹನ ರಾಠೋಡ, ಪ್ರಮುಖರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ, ಜಗದೀಶ ಚವ್ಹಾಣ, ಅಗ್ನಿ ಶಾಮಕದಳ ಅಧಿಕಾರಿ ಮಾಣಿಕ, ಪ್ರಭು ಗಂಗಾಣಿ, ನಾಗರೆಡ್ಡಿ ಗೋಪಸೇನ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಮತ್ತು ಗಣೇಶ ಉತ್ಸವ ಮಂಡಳಿಯ ಪದಾಧಿಕಾರಿಗಳು ಇದ್ದರು.
ಪಿಎಸ್‌ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಎಸ್‌ಐ ಬಾಬುರಾವ್ ನಿರೂಪಿಸಿ,
ವಂದಿಸಿದರು.