ಕಲಬುರಗಿ: ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ, ಬಹುಮನಿ ಅರಸರ ಕಾಲದ ಅನೇಕ ಅವಶೇಷಗಳು, ಸ್ಮಾರಕಗಳುಳ್ಳ ತಾಣ ಹೊಳಕುಂದಾ ಗ್ರಾಮವಾಗಿದೆ. ಇದರ ಇತಿಹಾಸ ರೋಚಕವಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.
ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದ ಐತಿಹಾಸಿಕ ರುಕ್ಮಿಣಿ-ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಕಲಬುರಗಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-30ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡಿಗರ ಧರ್ಮ, ಆಧ್ಯಾತ್ಮಿಕತೆ, ಶಿಕ್ಷಣ, ಆಡಳಿತ, ಶೌರ್ಯ, ಪರಾಕ್ರಮ ಸಾದರ ಪಡಿಸುವ ಕುರುಹಗಳು ತನ್ನ ಒಡಲಲ್ಲಿಟ್ಟುಕೊಂಡ ಗ್ರಾಮದ ಇತಿಹಾಸದ ಅದ್ಭುತವಾಗಿದೆ. ಇಲ್ಲಿಯೇ ಬಹುಮನಿಯರ ಕಾಲದ ಏಳು ಗುಂಬಜ್’ಗಳು ಕಾಣಬಹುದು. ಇಂಡೋ-ಸಾರ್ಸೆನಿಕ ಶೈಲಿಯ ಕಲಾತ್ಮಕ ಸ್ಮಾರಕಗಳು, 13 ಮತ್ತು 14ನೇ ಶತಮಾನದ ಭಾರತದ ಇತಿಹಾಸವನ್ನು ಸಾರುತ್ತವೆ. ಹಿಂದು-ಮುಸ್ಲಿಂ ಭಾವೈಕ್ಯತೆಯ ಪುಣ್ಯನೆಲವಾಗಿದೆ ಎಂದರು.
ಮಂದಿರದ ಅರ್ಚಕರಾದ ಬಲಭೀಮ ಕುಲಕರ್ಣಿ ಮಾತನಾಡಿ, ಈ ದೇವಾಲಯದ ಜೀರ್ಣೋದ್ಧಾರವಾಗಬೇಕು. ಸರ್ಕಾರದ ಇಲಾಖೆ ಇತ್ತ ಗಮನಹರಿಸಿ ಅಭಿವೃದ್ಧಿಗೊಳಿಸಬೇಕು. ಇದರ ಸಂಸ್ಕೃತಿ, ಇತಿಹಾಸ ಎಲ್ಲೆಡೆ ಪಸರಿಸುವ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಶರಣು ಎ.ಕಮಠಾಣ, ಶ್ರೀಹರಿ ಬಿ.ಕುಲಕರ್ಣಿ, ಅಕ್ಷತಾ ಗಣಪನ್ ಸೇರಿದಂತೆ ಅನೇಕರು ಇದ್ದರು.