12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿ ಐಷಾರಾಮಿ ಕಾರು ಖರೀದಿಸಿದ ನಟಿ ಹೇಮಾ ಮಾಲಿನಿ

ರಾಷ್ಟೀಯ

ಮುಂಬೈ: ಬಾಲಿವುಡ್ ಡ್ರೀಮ್ ಗರ್ಲ್ ಎಂದು ಗುರುತಿಸಿಕೊಂಡಿರುವ ನಟಿ, ಸಂಸದೆ ಹೇಮಾ ಮಾಲಿನಿ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷ ಅಂತಿರಾ ? ಇಲ್ಲೆ ಇರೋದು ನೋಡಿ. ಇತ್ತೀಚೆಗಷ್ಟೇ ಹೇಮಾ ಮಾಲಿನಿ ಮುಂಬೈನಲ್ಲಿರುವ ಎರಡು ಮನೆಯನ್ನು ಮಾರಾಟ ಮಾಡಿದ್ದರು.

12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿದ ಬೆನ್ನಲ್ಲೆ ಹೇಮಾ ಮಾಲಿನಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಹೇಮಾ ಮಾಲಿನಿ ಸ್ವತಃ ಪೂಜೆ ಮಾಡಿ ಡ್ರೀಮ್ ಕಾರನ್ನು ಡ್ರೀಮ್ ಗರ್ಲ್ಟ್ ಡ್ರೈವ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಗಣೇಶ ಹಬ್ಬಕ್ಕೆ ಹೊಸ ಕಾರು ಮನೆಗೆ ತಂದ ಹೇಮಾ ಮಾಲಿನಿ
ಗಣೇಶ ಹಬ್ಬಕ್ಕೆ ಹೇಮಾ ಮಾಲಿನಿ ಹೊಸ ಕಾರು ಮನೆಗೆ ತಂದಿದ್ದಾರೆ. ಹೇಮಾ ಮಾಲಿನಿ ಖರೀದಿಸಿದ ಹೊಸ ಕಾರು ಎಂಜಿ ಎಂ9 ಎಲೆಕ್ಟ್ರಿಕ್ ಕಾರು. ಕಾರು ಡೆಲಿವರಿ ಪಡೆದ ಹೇಮಾ ಮಾಲಿನಿ ಕಾರಿಗೆ ವಿಶೇಷ ಪೂಜೆ ಮಾಡಿದ್ದಾರೆ. ಸ್ವತಃ ತಾವೇ ಪೂಜೆ ಮಾಡಿದ್ದಾರೆ. ಬಳಿಕ ಕಾರು ಡ್ರೈವ್ ಮಾಡಿ ಸಂಭ್ರಮಿಸಿದ್ದಾರೆ. ಕಾರಿನ ಬೂಟ್ ಬಳಿ ಹೇಮಾ ಮಾಲಿನಿ ಮತ್ತು ಕುಟುಂಬದ ಫೋಟೋ ಸ್ಟಿಕ್ ಮಾಡಿ ಅಲಂಕರಿಸಲಾಗಿತ್ತು. ಕಾರಿನಲ್ಲಿ ಬಲೂನ್ ತುಂಬಿಸಿ ಅಲಂಕರಿಸಲಾಗಿತು.

ಹೇಮಾ ಮಾಲಿನಿ ಖರೀದಿಸಿದ ಎಂಜಿ ಎಂ9 ಕಾರಿನ ಬೆಲೆ ಎಷ್ಟು ?
ಹೇಮಾ ಮಾಲಿನಿ ಖರೀದಿಸಿದ ಎಂಜಿ ಮೋಟಾರ್ಸ್ ಎಂ9 ಎಲೆಕ್ಟ್ರಿಕ್ ಕಾರಿನ ಬೆಲೆ ಬರೋಬ್ಬರಿ 69.90 ಲಕ್ಷ ರೂ (ಎಕ್ಸ್ ಶೋ ರೂಂ). ಈ ಕಾರಿನ ಆನ್‌ರೋಡ್ ಬೆಲೆ 75 ರಿಂದ 80 ಲಕ್ಷ ರೂ. ಒಂದು ಬಾರಿ ಚಾರ್ಜ್ ಮಾಡಿದರೆ 548 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಎರಡು ಅಪಾರ್ಟ್‌ಮೆಂಟ್ ಮಾರಾಟ ಮಾಡಿರುವ ಡ್ರೀಮ್ ಗರ್ಲ್
ಹೇಮಾ ಮಾಲಿನಿ ಆಗಸ್ಟ್ ತಿಂಗಳಲ್ಲಿ ಎರಡು ಅಪಾರ್ಟ್‌ಮೆಂಟ್ ಮಾರಾಟ ಮಾಡಿದ್ದಾರೆ. ಮುಂಬೈನ ಒಬೆರಾಯ್ ಸ್ಪ್ರಿಂಗ್ಸ್‌ನಲ್ಲಿರುವ ಎರಡು ಮನೆಗಳನ್ನು ಮಾರಾಟ ಮಾಡಿದ್ದಾರೆ. ಕಾರು ಪಾರ್ಕಿಂಗ್ ಸ್ಥಳವಕಾಶ ಸೇರಿದಂತೆ ಒಂದು ಅಪಾರ್ಟ್‌ಮೆಂಟ್ ಬೆಲೆ 6.25 ಕೋಟಿ ರೂ. ಹೀಗೆ ಎರಡು ಅಪಾರ್ಟ್‌ಮೆಂಟ್ ಒಟ್ಟು 12.50 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್‌ಗೆ ಸ್ಟಾಂಪ್ ಡ್ಯೂಟಿ 31.25 ಲಕ್ಷ ರೂ ಮತ್ತು 30,000 ರೂ ರಿಜಿಸ್ಟ್ರೇಶನ್ ಫೀಸ್ ನೀಡಲಾಗಿದೆ.

Leave a Reply

Your email address will not be published. Required fields are marked *