ಕನ್ನಡಕ್ಕೆ ತ.ರಾ ಸುಬ್ಬರಾವ್ ಕೊಡುಗೆ ಅನನ್ಯ

ಕಲಬುರಗಿ: ಕಥೆ, ಕಾದಂಬರಿ, ನಾಟಕ, ಸಂಪಾದನೆ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡುವ ಮೂಲಕ ತ.ರಾ ಸುಬ್ಬರಾವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ತ.ರಾ ಸುಬ್ಬರಾವ್‌ರ 105ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತರಾಸು ಅವರು ದೊಡ್ಡ […]

Continue Reading

ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಶಿಕ್ಷಣ ಕ್ರಾಂತಿ: ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪ

ಚಿತ್ತಾಪುರ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಕಳೆದ 42 ವರ್ಷಗಳಿಂದ ಈ ಭಾಗದ ಜನರ ಆಶಾಕಿರಣವಾಗಿರುವ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ರಾಂತಿ ಮಾಡುತ್ತಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್ಪರ್ಸನ್ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪ ಹೇಳಿದರು. ಸಮೀಪದ ರಾವೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಿದ್ದಲಿಂಗೇಶ್ವರ ವಸತಿ ನಿಲಯ ಮತ್ತು ಪಾಕಶಾಲೆಯ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿ ಅವರು, ಸಿದ್ದಲಿಂಗೇಶ್ವರ ತ್ರಿವಿಧ ದಾಸೋಹದ ಮೂಲಕ ಈ ಭಾಗದಲ್ಲಿ ಉತ್ತಮ ಸೇವೆ […]

Continue Reading

ರಾಜ್ಯದಲ್ಲಿ 958 ನಕಲಿ ವೈದ್ಯರು ಪತ್ತೆ

ಬೆಂಗಳೂರು: ನಮ್ಮ ರಾಜ್ಯದಲ್ಲಿ ನಕಲಿ ಡಾಕ್ಟರ್‌ಗಳ ಹಾವಳಿ ಹೆಚ್ಚಾಗಿದೆ. ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 958 ನಕಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ನೀಡಿದೆ. ಅದರಲ್ಲಿ ಬೆಂಗಳೂರಿನ ನೆರೆಹೊರೆ ಜಿಲ್ಲೆಗಳಾದ ಕೋಲಾರ ಹಾಗೂ ತುಮಕೂರು ಸೇರಿದಂತೆ ಬೀದರ್ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ ಎಂದು ವರದಿಯಿಂದ ತಿಳಿದುಬಂದಿದೆ. ಈ ನಕಲಿ ವೈದ್ಯರು ಸಣ್ಣ ಪುಟ್ಟ ಶೀತ, ಜ್ವರ, ಮೈಕೈ ನೋವು ಇತ್ಯಾದಿ ರೋಗಗಳಾದ ಹೈಡೋಸ್ ಔಷಧಿಗಳನ್ನು ಕೊಟ್ಟು ಜನರ ಜೀವದ […]

Continue Reading

ಫೇಲ್ ಮಾಡಿದ್ರೆ ನನ್​ ಲವ್​ ಹಾಳಾಗುತ್ತೆ, ಪ್ಲೀಸ್​ ಪಾಸ್​ ಮಾಡಿ: SSLC ವಿದ್ಯಾರ್ಥಿಯ ಫೋಟೋ ವೈರಲ್​ ಬಗ್ಗೆ ಅಧಿಕಾರಿಗಳ ಸ್ಪಷ್ಟನೆ

ಬೆಳಗಾವಿ: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದೆ. ಪ್ರತಿ ಬಾರಿಯೂ ಉತ್ತರಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಭಿನ್ನಹ ಸಲ್ಲಿಸುವುದು ಮಾಮೂಲಿ. ಈ ಬಾರಿಯೂ ಸಹ ವಿದ್ಯಾರ್ಥಿಗಳು ತರಹೆವಾರಿ ಕೋರಿಕೆ ಸಲ್ಲಿಸಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ ಎನ್ನಲಾದ ವಿದ್ಯಾರ್ಥಿಯೊಬ್ಬರ ಉತ್ತರಪತ್ರಿಕೆಯು ವಿಶೇಷ ಗಮನ ಸೆಳೆದಿದೆ. ಅದರಲ್ಲಿ ಆತ 500 ರೂ ನೋಟೊಂದು ಅಂಟಿಸಿ, “ಹೇಗಾದರೂ ಮಾಡಿ ನನ್ನನ್ನು ಪಾಸ್​ ಮಾಡಿ. ಇಲ್ಲವಾದಲ್ಲಿ […]

Continue Reading

ರಾಷ್ಟ್ರದ ಅಭಿವೃದ್ಧಿಗೆ ಸೃಜನಶೀಲತೆ ಮತ್ತು ನಾವಿನ್ಯತೆ ಅಗತ್ಯ

ಕಲಬುರಗಿ: ಇಂದಿನ ಯುವಕರು ಕೇವಲ ಪದವಿ, ಪ್ರಮಾಣಪತ್ರ ಪಡೆದರೆ ಸಾಲದು. ವಿಷಯದ ಜ್ಞಾನವನ್ನು ಕಾರ್ಯರೂಪದಲ್ಲಿ ತರುವ ಕೌಶಲ್ಯ ಅಳವಡಿಸಿಕೊಳ್ಳಬೇಕು. ಬಹುವಿಧ ಆಯಾಮಗಳ ಚಿಂತನೆ, ಹೊಸ ಆವಿಷ್ಕಾರಗನ್ನು ಮಾಡುವ ಸೃಜನಶೀಲತೆ ಮತ್ತು ನಾವಿನ್ಯತೆ ಬೆಳೆಸಿಕೊಳ್ಳಬೇಕು. ಇವುಗಳು ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಾಗಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಜರುಗಿದ ‘ಅಂತರಾಷ್ಟ್ರೀಯ ಸೃಜನಶೀಲತೆ ಮತ್ತು […]

Continue Reading

ಚಿತ್ತಾಪುರದಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ: ಎಸ್ಪಿ ಭೇಟಿ, ಪರಿಶೀಲನೆ

ಚಿತ್ತಾಪುರ: ಪಟ್ಟಣದ ಹಳೆಯ ಕೋರ್ಟ್ ಎದುರುಗಡೆಯ ಲಕ್ಷ್ಮಿ ಅಟೋ ಮೊಬೈಲ್ ಅಂಗಡಿ ಸಮೀಪ ಅಪರಿಚಿತ ವ್ಯಕ್ತಿಯ ಕೊಲೆಯಾದ ವಿಷಯ ತಿಳಿಯುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಡಿಶನಲ್ ಎಸ್ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ಘಟನೆಯ ಬಗ್ಗೆ ತಿಳಿಯುತ್ತಲೇ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ, ಲಾಡ್ಡಿಂಗ್ ಕ್ರಾಸ್ ಸಮೀಪದ ಎಲ್ಲಾ ಸಿಸಿ […]

Continue Reading

ದಾಸೋಹ ಮೂರ್ತಿ ಶರಣಬಸವೇಶ್ವರ ಅದ್ಧೂರಿ ರಥೋತ್ಸವ

ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಏಪ್ರಿಲ್ 18 ರಂದು ಸಾಯಂಕಾಲ 6 ಗಂಟೆಗೆ ಶರಣಬಸವೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಜಯ ಘೋಷಣೆಗಳ ಮಧ್ಯೆ ನಡೆಯಿತು. ಗ್ರಾಮದ ಶಾಂತೇಶ್ವರ ಹಿರೇಮಠದ ಡಾ.ಶಾಂತಸೋಮನಾಥ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಭಕ್ತರು ಉತ್ತತ್ತಿ, ಖಾರಿಕ್ ಮತ್ತು ಬಾಳೆ ಹಣ್ಣು ರಥಕ್ಕೆ ಎಸೆದು ಭಕ್ತಿ ಅರ್ಪಿಸಿದರು. ರಾತ್ರಿ ವರ್ಣರಂಜಿತ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಏ.17 ರಂದು ರಾತ್ರಿ 8 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಹಾಗೂ ಖ್ಯಾತ ಮಣಿ ಡ್ರಮ್, ಕೆರಳ […]

Continue Reading

ಮೊದಲ ದಿನ ಕೇಸರಿ 2 ಸಿನಿಮಾ ಗಳಿಸಿದ್ದೆಷ್ಟು ? ಗೆದ್ದರಾ ಅಕ್ಷಯಕುಮಾರ

‘ಕೇಸರಿ 2’ ಸಿನಿಮಾ ಮೊದಲ ದಿನ ಸಾಧಾರಣ ಮೊತ್ತ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನ ಈ ಸಿನಿಮಾ ಗಳಿಸಿರುವುದು 7.50 ಕೋಟಿ ರೂ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಿಂದ ಸುಮಾರು 1.50 ಕೋಟಿ ಹಣ ಗಳಿಕೆಯಾಗಿತ್ತು. ಎಲ್ಲವೂ ಸೇರಿ ಮೊದಲ ದಿನಕ್ಕೆ ಕೇವಲ 7.50 ಕೋಟಿ ರೂ ಕಲೆಕ್ಷನ್ ಆಗಿದೆ. ಆ ಮೂಲಕ ಅಕ್ಷಯಕುಮಾರ ಮತ್ತೊಂದು ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಸನ್ನಿ ಡಿಯೋಲ್​ರ ಜಾಟ್ ಸಿನಿಮಾ ಮೊದಲ ದಿನ 7.40 ಕೋಟಿ […]

Continue Reading

ಟೆಂಗಳಲ್ಲಿ101 ಜಂಗಮರ ಪಾದಪೂಜೆ

ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಅಂಡಗಿ ಮನೆತನದಿಂದ ಪ್ರತಿವರ್ಷದಂತೆ ಈ ವರ್ಷವೂ ಭೀಮೇಶ್ವರ ರಥೋತ್ಸವದ ಮರುದಿನ ಏ.19 ರಂದು ಶನಿವಾರ 101 ಜಂಗಮರ ಪಾದಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಡಾ.ಶಾಂತಸೋಮನಾಥ ಶಿವಾಚಾರ್ಯರ ಸಾನಿಧ್ಯದಲ್ಲಿ ಸಿದ್ರಾಮಪ್ಪ ಅಂಡಗಿ ಅವರಿಂದ ಜಂಗಮರ ಪಾದಪೂಜೆ ಜರುಗಲಿದೆ ಎಂದು ಟೆಂಗಳಿಯ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಜ್ಞಾನದ ಊರು ಚಿತ್ತಾಪುರ, ಏಷ್ಯಾ ಖಂಡದ ಪ್ರಾಚೀನ ವಿಶ್ವವಿದ್ಯಾಲಯ ನಾಗಾವಿ

ಚಿತ್ತಾಪುರ: ಚಿತ್ತ ಎಂದರೆ ಜ್ಞಾನ, ಪುರ ಎಂದರೆ ಊರು. ಜ್ಞಾನದ ಊರು ಚಿತ್ತಾಪುರವಾಗಿದೆ. ನಾಗಾವಿ ವಿಶ್ವವಿದ್ಯಾಲಯ ವಿಶ್ವದ ಪ್ರಾಚೀನ ಮತ್ತು ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಆಕ್ಸಫರ್ಡ ಮತ್ತು ಕೆಂಬ್ರಿಜ್ ವಿಶ್ವವಿದ್ಯಾಲಯದಂತೆ ಮೆರೆದ ನಮ್ಮ ನಾಗಾವಿ ವಿಶ್ವವಿದ್ಯಾಲಯ ಮತ್ತು ಗತ ವೈಭವ ಪುನಃ ಮರುಕಳಿಸಬೇಕಾಗಿದೆ ಎಂದು ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಆಶಯ ವ್ಯಕ್ತಪಡಿಸಿದರು. ಪಟ್ಟಣದ ಐತಿಹಾಸಿಕ, ಪಾರಂಪರಿಕ ನಾಗಾವಿಯ ತ್ರೈಪುರುಷ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ […]

Continue Reading