ಚಿತ್ತಾಪುರ: ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಿತ್ತಾಪುರ: ಪಟ್ಟಣದ ಬಾಹರ್ ಪೇಟ್ ಮತ್ತು ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಬಳವಡಗಿ ಗ್ರಾಮಗಳಲ್ಲಿ ಮನೆಗಳಲ್ಲಿ ನೀರು ನುಗ್ಗಿದ ಸಂತ್ರಸ್ತ ಕುಟುಂಬಗಳಿಗೆ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳುಹಿಸಿರುವ 500 ಆಹಾರ ಧಾನ್ಯದ ಕಿಟ್’ಗಳನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಸದಾ ಬಡವರ ಏಳಿಗೆಗಾಗಿ ಶ್ರಮಿಸುವ ನಾಯಕರಾಗಿದ್ದಾರೆ. ಬಡವರಿಗೆ ಏನೇ ತೊಂದರೆಯಾದರೆ ಕೂಡಲೆ ಅವರಿಗೆ ಪರಿಹಾರ ರೂಪದಲ್ಲಿ ಸಹಾಯ ಮಾಡುವ […]

Continue Reading

ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರ, ಭೀಮಾತೀರದಲ್ಲಿ ಪ್ರವಾಹ ಸ್ಥಿತಿ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭೀಮಾತೀರದಲ್ಲಿ ಆತಂಕ ಮೂಡಿಸಿದೆ. ಮಹಾರಾಷ್ಟ್ರದ ಉಜನಿ, ವೀರಾ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ. ಇದರಿಂದಾಗಿ ವಿಜಯಪುರ ಜಿಲ್ಲೆಯ ಭೀಮಾನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಅಲಮೇಲ ತಾಲೂಕಿನ ದೇವಣಗಾಂವನ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಹಳೆಯ ತಾವರಖೇಡ ಗ್ರಾಮದ ಮನೆಗಳಿಗೂ ನೀರು ನುಗ್ಗಿದೆ. ಕಲಬುರಗಿಯ ಗಾಣಗಾಪೂರದ ಸಂಗಮ ಕ್ಷೇತ್ರದ ಪಾರಾಯಣ ಮಂಟಪ, […]

Continue Reading

ಬಿಗ್ ಬಾಸ್ ವಿನ್ನರ್ ಹಣಮಂತ ಲಮಾಣಿ ಮತ್ತು ತಂಡ ನಾಳೆ ಚಿತ್ತಾಪುರಕ್ಕೆ ಆಗಮನ

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ತಾಂಡಾದಲ್ಲಿ 25ನೇ ವರ್ಷದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ ನಿಮಿತ್ಯ ನಾಳೆ ಸಂಜೆ ಬಿಗ್ ಬಾಸ್ ವಿನ್ನರ್ ಹಣಮಂತ ಲಮಾಣಿ ಮತ್ತು ತಂಡ ಆಗಮಿಸುತ್ತಿದ್ದಾರೆ ಎಂದು ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ವಿನೋದ ಪವಾರ ಹೇಳಿದ್ದಾರೆ. ಸ್ಟೇಷನ್ ತಾಂಡಾದ ಸೇವಾಲಾಲ್, ಜಗದಂಬಾ ದೇವಸ್ಥಾನದ ಆವರಣದಲ್ಲಿ ನಾಳೆ ಸಂಜೆ 7.30ಕ್ಕೆ ಕರ್ನಾಟಕದ ಮನೆ ಮಗ ಬಿಗ್ ಬಾಸ್ ವಿಜೇತ ಹಣಮಂತ ಲಮಾಣಿ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗುವುದು, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ […]

Continue Reading

ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ

ಚಿತ್ತಾಪುರ: ನವರಾತ್ರಿ ಉತ್ಸವದ ನಿಮಿತ್ಯ ಏರ್ಪಡಿಸಲಾಗಿದ್ದ ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ್ ಏರಿಯಾದಲ್ಲಿ ಮೂರನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದ ನಿಮಿತ್ಯ ಶಾಲೆಗಳ ಮಕ್ಕಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಪ್ರಾರ್ಥನಾ ಶಾಲೆಯ ವಿದ್ಯಾರ್ಥಿಗಳು ಮತ್ತು ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಂಕರ್ ಚೋಕ್ಲಾ ಚೌವ್ಹಾಣ್, ರವಿ ಜಯರಾಮ್ ರಾಠೋಡ, ವೆಂಕಿ ಜಾಧವ್, ವಿನೋದ್ ಚೋಕ್ಲಾ ಚೌಹಾನ್ ಮತ್ತು ರಮೇಶ್ ಹನುಮ ಪವಾರ ಕಾರ್ಯಕ್ರಮದ ನಿರ್ಣಾಯಕರಾಗಿದ್ದರು. […]

Continue Reading

ನಾಳೆ ಬಿಗ್ ಬಾಸ್ ವಿನ್ನರ್ ಹನುಮಂತ ಲಂಬಾಣಿ ಮತ್ತು ತಂಡದಿಂದ ಸಂಗೀತ ರಸಮಂಜರಿ

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ತಾಂಡಾದಲ್ಲಿ 25ನೇ ವರ್ಷದ ಬೆಳ್ಳಿ ಮಹೋತ್ಸವದ ನವರಾತ್ರಿ ಉತ್ಸವವು ಸಡಗರದಿಂದ ಜರುಗುತ್ತಿದ್ದು, ಇದರ ಅಂಗವಾಗಿ ನಾಳೆ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಜಗದೀಶ ಚವ್ಹಾಣ್ ಹೇಳಿದ್ದಾರೆ. 25ನೇ ವರ್ಷದ ಬೆಳ್ಳಿ ಮಹೋತ್ಸವದ ನವರಾತ್ರಿ ಉತ್ಸವ ನಿಮಿತ್ಯ ಸೆ.27 ರಂದು ಸಂಜೆ 7.30ಕ್ಕೆ ಕರ್ನಾಟಕದ ಮನೆ ಮಗ ಬಿಗ್ ಬಾಸ್ ವಿನ್ನರ್ ಹನುಮಂತ ಲಂಬಾಣಿ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ […]

Continue Reading

ಬಿಗ್ ಬಾಸ್ ಸೀಸನ್ 12 ಭಾರಿ ಸ್ಪೆಷಲ್: ಬಿಗ್ ಅಪ್ ಡೇಟ್

ಬೆಂಗಳೂರು: ಸೆ.28ರಂದು ರವಿವಾರ ಸಂಜೆ 6 ಗಂಟೆಗೆ ಬಿಗ್ಬಾಸ್ ಸೀಸನ್ 12ರ ಗ್ರಾಂಡ್ ಓಪನಿಂಗ್ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ರವಿವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈಗಾಗಲೇ ಬಿಗ್ ಬಾಸ್ನ 11 ಸೀಸನ್‌ಗಳನ್ನು ನೋಡಿ ಯಶಸ್ವಿಯಾಗಿಸಿರುವ ವೀಕ್ಷಕರ ಮನಸಲ್ಲಿ ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್ ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ […]

Continue Reading

ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕಟ್: ಶಿಕ್ಷಕಿ ವಜಾ

ಗಾಂಧಿನಗರ: ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ಗುಜರಾತ್‌ನ ಖಾಸಗಿ ಶಾಲೆಯಲ್ಲಿ ನಡೆದಿದೆ. ಮಂಗಳವಾರ ವಿದ್ಯಾರ್ಥಿನಿ ಶಾಲೆಗೆ ತೆರಳಿದಾಗ ತಲೆಗೂದಲಿಗೆ ಎಣ್ಣೆ ಹಚ್ಚಿರಲಿಲ್ಲ. ಇದನ್ನು ಕಂಡ ದೈಹಿಕ ಶಿಕ್ಷಕಿ ವಿದ್ಯಾರ್ಥಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಮನೆಗೆ ಮರಳಿದ ಮಗಳ ಕೂದಲು ಗಮನಿಸಿದಾಗ ಪೋಷಕರಿಗೆ ವಿಷಯ ತಿಳಿದಿದ್ದು, ಕೂಡಲೇ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಶಿಕ್ಷಕಿಯನ್ನು ವಜಾಗೊಳಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯ ತಾಯಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ […]

Continue Reading

ಸಮೀಕ್ಷೆಯಲ್ಲಿ ಕಬ್ಬಲಿಗ, ಕೋಲಿ ಎಂದು ಬರೆಯಿಸಲು ಸಮಾಜದಿಂದ ಕರೆ

ಚಿತ್ತಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೋಲಿ, ಕಬ್ಬಲಿಗ ಜಾತಿಯವರು ಕಡ್ಡಾಯವಾಗಿ ಜಾತಿ ಕಬ್ಬಲಿಗ ಎಂದು, ಉಪ ಜಾತಿ ಕೋಲಿ ಎಂದು ಬರೆಯಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ಗೌರವಾಧ್ಯಕ್ಷ ರಾಮಲಿಂಗ ಬಾನರ ಸಮಾಜದ ಜನರಿಗೆ ಕರೆ ನೀಡಿದ್ದಾರೆ.‌ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆ ಮಾಡಲು ಮನೆ ಮನೆಗೆ ಸಮೀಕ್ಷೆದಾರರು ಬಂದಾಗ ಧರ್ಮ ಕೇಳಿದಾಗ ಹಿಂದೂ ಎಂದು, ಜಾತಿ ಕೇಳಿದಾಗ ಕಬ್ಬಲಿಗ […]

Continue Reading

ವಾಟ್ಸ್ಆ್ಯಪ್​ನಲ್ಲಿ ಬಂದಿದೆ ಹೊಸ ವಿಡಿಯೋ ನೋಟ್ಸ್ ಫೀಚರ್: ಬಳಸುವುದು ಹೇಗೆ ?

ಬೆಂಗಳೂರು: ವಾಟ್ಸ್​ಆ್ಯಪ್ ತನ್ನ​​ ಲಕ್ಷಾಂತರ ಬಳಕೆದಾರರಿಗಾಗಿ ಹೊಸ ವಿಡಿಯೋ ನೋಟ್ಸ್ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಈ ವಾಟ್ಸ್​ಆ್ಯಪ್ ​​ವೈಶಿಷ್ಟ್ಯವನ್ನು ಪ್ರಪಂಚದಾದ್ಯಂತ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ. ವಾಯ್ಸ್ ನೋಟ್​ಗಳಂತೆ, ನೀವು ಈಗ ಮೆಟಾದ ಅತಿದೊಡ್ಡ ತ್ವರಿತ ಸಂದೇಶ ವೇದಿಕೆಯಲ್ಲಿ ವಿಡಿಯೋ ನೋಟ್ಸ್ ಕಳುಹಿಸಬಹುದು. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಂದೇಶಗಳ ಮೂಲಕ ಶುಭ ಹಾರೈಸಲು ನೀವು ವಾಟ್ಸ್​ಆ್ಯಪ್​​ನಲ್ಲಿ 60 ಸೆಕೆಂಡುಗಳ ವಿಡಿಯೋ ಟಿಪ್ಪಣಿ ಕಳುಹಿಸಬಹುದು. ಈ ನವರಾತ್ರಿಯಲ್ಲಿ ದುರ್ಗಾ ಪೂಜೆಯ ಶುಭಾಶಯಗಳನ್ನು ವಿಡಿಯೋ […]

Continue Reading

ಅ.1ರಂದು ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ಜನ್ಮದಿನೋತ್ಸವ, ನಾಳೆಯಿಂದ ನಾಲವಾರ ಮಠದಲ್ಲಿ ನವರಾತ್ರಿ ಸಂಭ್ರಮ

ಚಿತ್ತಾಪುರ: ಅ.1 ರಂದು ಮಹಾನವಮಿಯ ಆಯುಧಪೂಜೆಯಂದು, ತಾಲೂಕಿನ ಶ್ರೀಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ. ಪ್ರಸ್ತುತ ಪೂಜ್ಯರ ಜನ್ಮದಿನೋತ್ಸವ ಹಾಗೂ ಮಠದ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ನಾಳೆಯಿಂದ ಪ್ರತಿನಿತ್ಯ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ,‌ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ ಎಂದರು. […]

Continue Reading