ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾದ 13,125 ಮೌಲ್ಯದ ಪಡಿತರ ಜೋಳವನ್ನು ಆಹಾರ ಇಲಾಖೆ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಪಟ್ಟಣದಲ್ಲಿನ ಗೋಶಾಲೆಯ ಹತ್ತಿರ ಮಲ್ಲಿಕಾರ್ಜುನ ತಿಮ್ಮಾರೆಡ್ಡಿ ಅವರ ಮನೆಯಲ್ಲಿ ತಲಾ 25 ಕೆ.ಜಿ ತೂಕದ ಒಟ್ಟು 15 ಪ್ಲಾಸ್ಟಿಕ್ ಚೀಲ (3.75 ಕ್ವಿಂಟಲ್) ಜೋಳವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಅವರ ಮನೆಯನ್ನು ಎರಡು ವರ್ಷಗಳ ಅವಧಿಗೆಂದು ಲೀಜ್ ಪಡೆದಿದ್ದ ಆರೋಪಿ ನಬಿಲಾಲ್ ಗುಡುಸಾಬ್ ದಂಡೋತಿ (52) ಎಂಬುವರು ಪಡಿತರ ಜೋಳ ಸಂಗ್ರಹಿಸಿಟ್ಟಿದ್ದರು. ನಬಿಲಾಲ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.