ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 25ನೇ ವರ್ಷದ ಬೆಳ್ಳಿ ಮಹೋತ್ಸವದ ನವರಾತ್ರಿ ಉತ್ಸವವು ಸಡಗರದಿಂದ ಜರುಗುತ್ತಿದ್ದು, ಇದರ ಅಂಗವಾಗಿ ನಾಳೆ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಜಗದೀಶ ಚವ್ಹಾಣ್ ಹೇಳಿದ್ದಾರೆ.
25ನೇ ವರ್ಷದ ಬೆಳ್ಳಿ ಮಹೋತ್ಸವದ ನವರಾತ್ರಿ ಉತ್ಸವ ನಿಮಿತ್ಯ ಸೆ.27 ರಂದು ಸಂಜೆ 7.30ಕ್ಕೆ ಕರ್ನಾಟಕದ ಮನೆ ಮಗ ಬಿಗ್ ಬಾಸ್ ವಿನ್ನರ್ ಹನುಮಂತ ಲಂಬಾಣಿ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.