ವಾಡಿ ಪುರಸಭೆಯ ಕಸದ ಬುಟ್ಟಿಯಲ್ಲಿ ಗೊಲಮಾಲ್

ವಾಡಿ: ಪಟ್ಟಣದ ಪುರಸಭೆಯ ಕಸದ ಬುಟ್ಟಿ ಖರೀದಿಯಲ್ಲಿ ಲಕ್ಷಾಂತರ ರೂಪಾಯಿಗಳ ಗೂಲಮಾಲ್ ಮಾಡಿ ವಿತರಣೆಯಲ್ಲೂ ತಾರತಮ್ಯ ಮಾಡಿದೆ, ಇದರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪಟ್ಟಣದಲ್ಲಿ 2020-21ನೇ ಸಾಲಿನ 15ನೇ ಹಣಕಾಸಿನಲ್ಲಿ ಮಂಜೂರಾದ ಕಸದ ಬುಟ್ಟಿಗಳನ್ನು 2024-25ರಲ್ಲಿ ಅದನ್ನು ಕೆಲವೊಂದು ವಾರ್ಡ್’ಗಳಲ್ಲಿ ಬೇಕಾಬಿಟ್ಟಿಯಾಗಿ ವಿತರಣೆ ಮಾಡಿ ಅದರ ಅಂಕಿ ಅಂಶಗಳನ್ನು ಸಹ ಸಮರ್ಪಕವಾಗಿ ನೊಂದಾಯಿಸದೆ ಇಲ್ಲಿನ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ವಾರ್ಡ್ ಸಂಖ್ಯೆ […]

Continue Reading

ವಾಡಿ ಭಕ್ತರ ಮೇಲೆ ಪ್ರಯಾಗರಾಜ್ ಪವಿತ್ರ ಜಲದ ಸಿಂಚನ

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಪುಣ್ಯಭೂಮಿ ಪ್ರಯಾಗರಾಜ್’ದ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಶಿವಪೂರದ ಶಿವಲಿಂಗ ಮಹಾಸ್ವಾಮಿಗಳು ಭಕ್ತರ ಮೇಲೆ ಸಿಂಪಡಿಸುವ ಮೂಲಕ ಪುಣ್ಯಕ್ಷೇತ್ರದ ವಾತವರಣ ಸೃಷ್ಟಿಸಿದರು. ಮಹಾಶಿವರಾತ್ರಿ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ವೀರೇಶ್ವರ ಶರಣರ ಪುರಾಣ ಸಂದರ್ಭವಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪುರಾಣದ ಪೂರ್ವದಲ್ಲಿ ಪುರಾಣಕಾರ ಶಿವಲಿಂಗ ಮಹಾಸ್ವಾಮಿಗಳು ಪ್ರಯಾಗರಾಜ್’ಗೆ ತೆರಳಿ ಪುಣ್ಯ ಸ್ನಾನ ಮಾಡಿದ ಅಲ್ಲಿನ ಭಕ್ತಿ ವಾತವರಣವನ್ನು ಪುರಾಣದಲ್ಲಿ ಅನಾವರಣ ಗೊಳಿಸಿದರು. ಪಟ್ಟಣದ ಭಕ್ತರು ಪ್ರಯಾಗರಾಜ್’ದಿಂದ […]

Continue Reading

ಪುರಸಭೆ ಅಧ್ಯಕ್ಷ ಸ್ಥಾನ ಬಂಜಾರ ಸಮಾಜಕ್ಕೆ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ

ಚಿತ್ತಾಪುರ: ಪುರಸಭೆಯ ಇತಿಹಾಸದಲ್ಲಿ ಇದುವರೆಗೆ ಬಂಜಾರ ಸಮಾಜಕ್ಕೆ ಅಧ್ಯಕ್ಷರಾಗಲು ಅವಕಾಶ ಸಿಕ್ಕಿಲ್ಲ, ಹೀಗಾಗಿ ಈ ಬಾರಿ ಬೇಬಿಬಾಯಿ ಸುಭಾಷ್ ಜಾಧವ ಅವರಿಗೆ ಪುರಸಭೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡಬೇಕು ಎಂದು ಸಮಾಜದಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೋಮವಾರ ಭೇಟಿ ಮಾಡಿ ಮನವಿ‌ ಮಾಡಲಾಯಿತು. ಚಿತ್ತಾಪುರ ಪುರಸಭೆ ಇತಿಹಾಸದಲ್ಲಿಯೇ ಇದುವರೆಗೆಬಂಜಾರ ಸಮುದಾಯದವರು ಪುರಸಭೆಅಧ್ಯಕ್ಷರಾಗಿಲ್ಲ, ಆದಕಾರಣ ಈ ಬಾರಿ ನಮ್ಮಸಮಾಜಕ್ಕೆ ಅವಕಾಶ ಮಾಡಿಕೊಡಿ ಎಂದುಬಂಜಾರ ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರುಮನವಿ ಮಾಡಿದರು. […]

Continue Reading

ಪುರಸಭೆ ಚುನಾವಣೆ ಮೀಸಲಾತಿ ಸರಿಪಡಿಸುವಂತೆ ಬಿಜೆಪಿ ಒತ್ತಾಯ

ವಾಡಿ: ಪಟ್ಟಣದ ಪುರಸಭೆ ಚುನಾವಣೆಗಾಗಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಫೆ.17 ರಂದು ಪ್ರಕಟಿಸಿರುವದರಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ, ಅದನ್ನು ಪುನರ್ ಪರಿಶೀಲಿಸಿ ಸರಿಪಡಿಸಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಮೀಸಲಾತಿ ನಿಗದಿ ಮಾಡಿರುವ ಕ್ರಮವು ತಾರತಮ್ಯದಿಂದ ಕೊಡಿರುವದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹಿಂದುಳಿದ ವರ್ಗಕ್ಕೆ ಅಧಿಕಾರ ವಂಚಿಸುವ ಮೀಸಲಾತಿ ಇದಾಗಿದೆ‌ ಎಂದರು. ಈಗಾಗಲೆ ಇದೆ ರೀತಿ ಮೀಸಲಾತಿ ಪ್ರಕಟವಾಗಿದ್ದ ಸಲುವಾಗಿ ಪಟ್ಟಣದ ಮುಖಂಡರೊಬ್ಬರು ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ಒಂದು […]

Continue Reading

ಇಂಜಿನಿಯರ್ ನೇಮಕಾತಿ ಆಕ್ರಮ: ಎಐಡಿವೈಒ ಖಂಡನೆ

ಸುದ್ದಿ ಸಂಗ್ರಹ ಶಹಾಬಾದ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ನೇಮಕಾತಿಯಲ್ಲಿ 10 ಅಭ್ಯರ್ಥಿಗಳ ನೇಮಕಾತಿ ನಡೆಸಿರುವದು ಭಾರಿ ಅಕ್ರಮ ಇದನ್ನು ಎಐಡಿವೈಓ ತೀವ್ರವಾಗಿ ಖಂಡಿಸುತ್ತದೆ ಎಂದು ಎಐಡಿವೈಒ ಶಹಾಬಾದ ಕಾರ್ಯದರ್ಶಿ ರಮೇಶ ದೇವಕರ್ಹೇಳಿದ್ದಾರೆ.‌ 24 ಹುದ್ದೆಗಳ ನೇಮಕಾತಿಯಲ್ಲಿ 2023 ಜುಲೈ 1 ಮತ್ತು 2ರಂದು ಪರೀಕ್ಷೆ ನಡಸಿ ಸೆಪ್ಟೆಂಬರ್ ತಿಂಗಳಲ್ಲಿ ಫಲಿತಾಂಶಪ್ರಕಟಿಸಲಾಗಿತ್ತು. ಈ ಕುರಿತು ಅನೇಕ ದೂರು ಬಂದಿದ್ದರಿಂದ ಕೆಪಿಎಸ್‌ಸಿ ನೇಮಿಸಿದ ತನಿಖಾ ಸಮಿತಿ ಯಾವುದೇ ಪ್ರಲೋಭನಕ್ಕೆ […]

Continue Reading

ವಾಡಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ನಿಮಿತ್ಯ ಯುವ ಮುಖಂಡ ವಿಠಲ ನಾಯಕ ಹಾಗೂ ಮರಾಠ ಸಮಾಜದ ಅಧ್ಯಕ್ಷ ಅಶೋಕ ಪವಾರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯ ಕಟ್ಟಿ ಆಳಿದ ವೀರಾಧಿವೀರ ರಾಜರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರಾಗಿದ್ದರು ಎಂದರು. ಆವಾಗ ದೇಶದಲ್ಲಿ ಮೊಗಲ್‌ ಸಾಮ್ರಾಜ್ಯ ತುಂಬಾ ಪ್ರಬಲವಾಗಿತ್ತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಲ್ಲಿ ಪ್ರಬಲವಾಗಿದ್ದ ಸುಲ್ತಾರು. ತಮ್ಮ […]

Continue Reading

ವಾಡಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿಯಿಂದ ಮನವಿ

ವಾಡಿ: ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಪ್ರಖ್ಯಾತ ಎಸಿಸಿ (ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ‌ ಕೂಡಾ ಇದ್ದರು ಜನರು ಜೀವನ ಸಾಗಿಸಲು ಹರಸಾಹಸ ಸುಮಾರು ವರ್ಷಗಳಿಂದ ತಪ್ಪಿಲ್ಲ, ಪಟ್ಟಣದ ಜನತೆಯ ತೊಂದರೆಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪತ್ರ ಬರೆದಿದ್ದಾರೆ. ಪಟ್ಟಣಕ್ಕೆ ಮೂರು ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ, ಪಕ್ಕದಲ್ಲೇ ಎರಡೂ ನದಿಗಳಿದ್ದರೂ ಅದು ರಾಡಿ ನೀರು, ಚರಂಡಿ ನೀರು ರಸ್ತೆ, ಮನೆಯೊಳಗೆ ಬರುತ್ತವೆ. […]

Continue Reading

ಫೆ.22 ರಂದು ಹಳೆ ವಿದ್ಯಾರ್ಥಿಗಳಿಂದ ಗುರು ವಂದನಾ, ಸ್ನೇಹ ಸಮ್ಮಿಲನ

ಸುದ್ದಿ ಸಂಗ್ರಹ  ಚಿತ್ತಾಪುರ: ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ1981-82ನೇ ಸಾಲಿನ 10ನೇ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಫೆ. 22 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಹಳೆಯ ವಿದ್ಯಾರ್ಥಿಗಳ ಮುಖ್ಯಸ್ಥ ರಾಜು ಕುಲಕರ್ಣಿ ಕರದಾಳ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಡಿವೈಎಸ್ಪಿ ಶಂಕರಗೌಡ ಪಾಟೀಲ ಉದ್ಘಾಟಿಸಲಿದ್ದಾರೆ, ಕಾಳಗಿ ತಾ.ಪಂ ಇಓ ಡಾ.ಬಸಲಿಂಗಪ್ಪ ಡಿಗ್ಗಿ, ಬಿ.ಆರ್‌.ಸಿ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಸೇರಿದಂತೆ ವಿವಿಧ ಅಧಿಕಾರಿಗಳು, […]

Continue Reading

ವಾಡಿ: ಪುಲ್ವಾಮಾ ಹುತಾತ್ಮ ಯೋಧರಿಗೆ ಗೌರವ ನಮನ

ವಾಡಿ: ಪಟ್ಟಣದ ಬಿಯಾಬಾನಿ ಬಡಾವಣೆಯಲ್ಲಿ ಪುಲ್ವಾಮಾ ಯೋಧರ ಶ್ರದ್ಧಾಂಜಲಿ ಸಮಿತಿಯಿಂದ ಹುತಾತ್ಮರಾದ ಯೋಧರಿಗೆ ಗೌರವ ನಮನ ಕಾರ್ಯಕ್ರಮ ಜರುಗಿತು. ಹಲಕರ್ಟಿಯ ಸಿದ್ದೇಶ್ವರ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಫೆ.14 2019 ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರಿಗೆ ಈ ದಿನ 6ನೇ ವಾರ್ಷಿಕೋತ್ಸವದಲ್ಲಿ ಇಡೀ ದೇಶವು ಸ್ಮರಿಸುತ್ತಿದೆ ಎಂದರು. ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿ ಪುಲ್ವಾಮಾ ದಾಳಿಯು ಭಾರತದ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಆ ದುರದೃಷ್ಟಕರ ಮಧ್ಯಾಹ್ನದಂದು ಜಮ್ಮು […]

Continue Reading

ಬಿಜೆಪಿ ಕಛೇರಿಯಲ್ಲಿ ಸಂತ ಸೇವಲಾಲ ಮಹಾರಾಜರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸಂತ ಶ್ರೀ ಸೇವಲಾಲ ಮಹಾರಾಜರ 286ನೇ ಜಯಂತಿ ಅಂಗವಾಗಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಬುದ್ಧ, ಬಸವ, ಕಬೀರ, ಗುರು ನಾನಕ್ ಸೇರಿದಂತೆ ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ಗೋಪಾಲಕನಾಗಿದ್ದವರು ಶ್ರೀ ಸಂತ ಸೇವಾಲಾಲ ಮಹಾರಾಜರು ಎಂದರು. ತಮ್ಮ ಜೀವನಾನುಭವದ ಮೂಲಕ ಗೌರಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೊಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು. […]

Continue Reading