ಚಿತ್ತಾಪುರ: ಸಂಸ್ಥೆಯ ವ್ಯವಹಾರಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿವೆ, ಸದಸ್ಯರು ಅಂತಹ ವಿಚಾರಗಳ ಬಗ್ಗೆ ನಿರ್ಲಕ್ಷ್ಯವಹಿಸಿ. ಈ ಯೋಜನೆಯ ಪ್ರಯೋಜನ ಪಡೆದು ಕುಟುಂಬದ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ಕಾಶಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ನಗರದ ಅಮೃತ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಬ್ಯಾಂಕಿನಿಂದ ಹಣಕಾಸಿನ ನೆರವು ಕೊಡಿಸುವುದರೊಂದಿಗೆ ಕೌಶಲ್ಯಾಭಿವೃದ್ಧಿಗೆ ತರಬೇತಿ ಆಯೋಜನೆ ಮಾಡುತ್ತಿರುವುದು ಮಹಿಳೆಯರ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪೂಜ್ಯ ಹೆಗ್ಗಡೆಯರ ಕಾರ್ಯಕ್ರಮವು ಗ್ರಾಮೀಣ ಜನರ ಬದುಕಿಗೆ ಆಶಾಕಿರಣವಾಗಿದೆ. ನೇರವಾಗಿ ಬ್ಯಾಂಕಿನಿಂದ ಸಾಲ ಪಡೆಯಲಾಗದವರಿಗೆ ಸಂಘಗಳ ಮೂಲಕ ಅದೆ ಬ್ಯಾಂಕಿನಿಂದ ಜನರಿಗೆ ತಲುಪುವಂತೆ ಮಾಡುತ್ತಿರುವುದು ವಿಶೇಷವಾಗಿದೆ. ಆರ್’ಬಿ’ಐ ನಿಯಮದಂತೆ ಧರ್ಮಸ್ಥಳ ಸಂಸ್ಥೆಯ ಬ್ಯಾಂಕ್ ಗಳ ವ್ಯವಹಾರ ಪ್ರತಿನಿಧಿಯಾಗಿ ಕಾನೂನುಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೊಜನಾಧಿಕಾರಿ ಗುರುರಾಜ್, ಬಾಲಾಜಿ ದೇವಸ್ಥಾನ ಕಮಿಟಿ ಅರ್ಚಕ ಸಂಧ್ಯಾ, ಒಕ್ಕೂಟದ ಅಧ್ಯಕ್ಷ ನಾಗಮ್ಮ, ಜ್ಞಾನವಿಕಾಸ ಅಧಿಕಾರಿ ಅರ್ಚನಾ, ಮೇಲ್ವಿಚಾರಕಿ ನಂದಿನಿ, ಸೇವಾ ಪ್ರತಿನಿಧಿ ತೇಜಸ್ವಿನಿ ಉಪಸ್ಥಿತರಿದ್ದರು.