ವಾಡಿ: ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮನವಿ

ಪಟ್ಟಣ

ವಾಡಿ: ಪಟ್ಟಣದ ಆದಾನಿ ಒಡೆತನದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯ ಒದಗಿಸುವಂತೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಸಲ್ಲಿಸಿದರು.

ವಾರ್ಡ್‌ ಸಂಖ್ಯೆ ಒಂದರ ಬಸವನ‌ ಖಣಿಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಇರುವ ಪುರಸಭೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸದೆ ಇರುವುದು ದುರಾದೃಷ್ಟ, ಬಹುತೇಕ ಕಡೆ ಸ್ಥಳೀಯರಿಗೆ ವಾಸಿಸುವ ಹಕ್ಕು ಪತ್ರ ಕೂಡಾ ಕೊಟ್ಟಿಲ್ಲ, ಅಲ್ಲಿನ ನಿವಾಸಿಗಳು ತೆರಗೆ ಕೊಡಲು ಸಿದ್ದರಿದ್ದರು ಅಧಿಕಾರಿಗಳ ಮುಂದೆ ಬರುತ್ತಿಲ್ಲಾ ಇಂತಹ ಅಧಿಕಾರಿಗಳಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯವಾದಿತು.

ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿದೆ, ಇಲ್ಲಿ ಪ್ರಖ್ಯಾತ ಎಸಿಸಿ (ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ‌ ಕೂಡಾ ಇದ್ದರು, ಜನರು ಜೀವನ ಸಾಗಾಟಕ್ಕೆ ಸುಮಾರು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ.

ಕುಡಿಯುವ ನೀರು 3-4 ದಿನಗಳಿಗೊಮ್ಮೆ, ಅದು ರಾಡಿ ನೀರು, ಮತ್ತೆ ನೀರು ಸರಬರಾಜಾದರೆ ಪೈಪ್ ಸೋರಿಕೆ
ಚರಂಡಿ ನೀರು ರಸ್ತೆ ಹಾಗೂ ಮನೆಯೊಳಗೆ, ಅಸಮರ್ಪಕ ರಸ್ತೆ, ಬಿದಿ ದೀಪ, ಹಂದಿ ನಾಯಿಗಳ ಕಾಟ ಮತ್ತು ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ. ಇದನ್ನೆಲ್ಲಾ ಸರಿದೂಗಿಸಬೇಕಾದ ಪುರಸಭೆಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವದರಿಂದ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ.

ಇದರ ಬಗ್ಗೆ ಸಾಕಷ್ಟು ಸಲ ತಮಗೆ ಸಾಲು ಸಾಲು ಸಮಸ್ಯೆಗಳ ಪಟ್ಟಿ ಮಾಡಿ ತಮ್ಮ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ, ಈಗಲಾದರೊ ತಾವು ಪಟ್ಟಣದ ಜನರ ಸಂಕಷ್ಟ ಪರಿಹರಿಸಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ ಎಂದು ಬೇಡಿಕೆಗಳ ಪಟ್ಟಿ ನೀಡಿದರು.

ಬೇಡಿಕೆಗಳ ಪಟ್ಟಿ
1) ಶುದ್ಧ ನೀರು ಪೂರೈಕೆ ಜೊತೆಗೆ ಪ್ರತಿ ದಿನ ನೀರು ಸರಬರಾಜು ಮಾಡಿ, ವಾರ್ಡ ಸಂಖ್ಯೆ 01ಸೇರಿದಂತೆ ಬಹುತೇಕ ವಾರ್ಡಗಳಲ್ಲಿ ನೀರಿಗಾಗಿ ಜನರ ಹಾಹಾಕಾರ ಶುರುವಾಗಿದೆ.

2) ಹತ್ತು ಹದಿನೈದು ವರ್ಷಗಳಿಂದ ಠಿಕಾಣಿ ಹೊಡಿ ಭ್ರಷ್ಟಾಚಾರದಲ್ಲಿ ತೋಡಗಿದವರ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವುದು.

3) ಪಟ್ಟಣದಲ್ಲಿ ಮಿತಿಮೀರಿದ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳುವುದು.

4) ವಾರ್ಡ್ ಸಂಖ್ಯೆ. 01 ಮತ್ತು 23 ಸೇರಿದಂತೆ ಕೆಲವು ವಾರ್ಡಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ಇರುವುದಿಲ್ಲ ಅದನ್ನು ವಿತರಿಸುವುದು.

5) ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರು ಡಾ. ಬಿ.ಆರ್ ಅಂಬೇಡ್ಕರ್ ಭವನದ ಕಾಮಗಾರಿ ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ.

6) ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆ ಮಾಡಿ ಪರಿಸರ ಸಂರಕ್ಷಣೆ ಮಾಡುವುದು ಮತ್ತು ಎಲ್ಲಾ ವಾರ್ಡ್’ಗಳಲ್ಲಿ ಸಸಿ ನೆಟ್ಟು ಪೋಷಿಸುವುದು.

7) ಸಾರ್ವಜನಿಕ ಶೌಚಾಲಯ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣ ಮುಂದಾಗುವುದು.

8) ತರಕಾರಿ ಮತ್ತು ಮಾಂಸಕ್ಕೆ ಪ್ರತ್ಯೇಕ ಮಾರುಕಟ್ಟೆ ಒದಗಿಸಿ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕೈಗೊಳ್ಳಿ.

9) ಪುರಸಭೆಯಲ್ಲಿ ಮತ್ತು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವುದು. ಇವುಗಳನ್ನು ತಕ್ಷಣ ಕಾರ್ಯರೂಪಕ್ಕೆ ತನ್ನಿ.

10) ಪಟ್ಟಣದ ಮುಖ್ಯ ರಸ್ತೆ ಐದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಇದು ಸಂಪೂರ್ಣವಾಗಿ ಕಳಪೆ ಮಟ್ಟದಾಗಿದ್ದು ಇದರ ಬಗ್ಗೆ ತನಿಖೆ ಮಾಡಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಿ.

11) ಪಟ್ಟಣದಲ್ಲಿ ನಡೆಯತ್ತಿರುವ ಅಭಿವೃದ್ಧಿ ಕಾಮರಿಗಳು ಸಂಪೂರ್ಣ ಕಳಪೆ ಮಟ್ಟದಾಗುತ್ತಿದ್ದು,ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಕೊಟ್ಟರು ಅದು ನಿಂತಿಲ್ಲ,ಸಾರ್ವಜನಿಕ ಸಂಪತ್ತಿನ ದುರುಪಯೋಗ ಆಗುತ್ತಿದೆ ಇದನ್ನು ತಡೆಗಟ್ಟಿ.

12) ಅಂಗವಿಕಲರಿಗಾಗಿನ ತ್ರಿಚಕ್ರ ವಾಹನ, ಬಡ ಮಹಿಳೆಯರಿಗಾಗಿ ಬಟ್ಟೆ ಹೋಲಿಗೆ ಯಂತ್ರ ಹಾಗೂ ಕಸದ ಬುಟ್ಟಿ ಖರೀದಿಯಲ್ಲಿ ಮತ್ತು ಡಿಸೇಲ್ ಬಳಕೆಯಲ್ಲಿ ಭ್ರಷ್ಟಾಚಾರವಾಗಿದ್ದು, ಅದರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಭೀಮಶಾ ಜೀರೋಳ್ಳಿ,ಶರಣಗೌಡ ಚಾಮನೂರ, ಪ್ರಕಾಶ ಪುಜಾರಿ, ಕಿಶನ ಜಾಧವ, ಅಂಬದಾಸ ಜಾಧವ, ಶಿವಶಂಕರ ಕಾಶೆಟ್ಟಿ, ಬಸವರಾಜ ಕಿರಣಗಿ, ಮಲ್ಲಿಕಾರ್ಜುನ ಸಾತಖೇಡ, ಪ್ರಭು ಪಸಾರ, ಮಹಾಲಿಂಗ ಶೆಳ್ಳಗಿ,ಪ್ರೇಮ ರಾಠೊಡ, ಕುಮಾರ ಚವ್ಹಾಣ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *