ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಅನನ್ಯ: ಎಚ್.ಬಿ ಪಾಟೀಲ

ನಗರದ

ಕಲಬುರಗಿ: ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಸ್ಥಳಗಳಿಗೆ ತೆರಳಿ ವೀಕ್ಷಣೆ ಮಾಡುವುದರಿಂದ ನಮ್ಮ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ತಿಳಿಯುತ್ತದೆ. ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ದೊರೆಯುತ್ತವೆ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಮಹತ್ವದ್ದಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಶಹಾಬಜಾರ ನಾಕಾ ಸಮೀಪದ ಐತಿಹಾಸಿಕ ಹಾಗೂ ಬಹು ಪುರಾತನ ಸ್ಥಂಬ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ ಮತ್ತು ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-39ರಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅನೇಕ ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಿ, ಅವುಗಳ ಮಹತ್ವ ಸಾರಬೇಕು. ವಿಶ್ವ ಪರಂಪರೆಯು ಮನುಕುಲದ ಸಂಪತ್ತಾಗಿದೆ. ನಿಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡುವುದರಿಂದ ದೇಶದ ಪರಂಪರೆ, ಇತಿಹಾಸ ತಿಳಿದುಬರುತ್ತದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ಭಾರತದ ಇತಿಹಾಸ ಸಾರುವ ಕಲಬುರಗಿ ನೆಲದ ಸ್ಮಾರಕಗಳು ಭಾರತದ ಇತಿಹಾಸ ಸಾರುತ್ತವೆ. ಶರಣಬಸವೇಶ್ವರ, ಖಾಜಾ ಬಂದಾನವಾಜ್, ಮಹಾತ್ಮ ಗೌತಮ್ ಬುದ್ಧ, ಬಹುಮನಿ ಕೋಟೆ, ಸ್ಥಂಭ ರಾಮಲಿಂಗೇಶ್ವರ, ತಾಜ ಸುಲ್ತಾನಪುರ. ಶೇಖ್ ರೋಜಾ, ಶಹಬಜಾರ್. ಹೀರಾಪುರ, ಕುಸನೂರು, ಕಪನೂರ ಮುಂತಾದ ಕಡೆ ದೊರೆಯುವ ಸ್ಮಾರಕಗಳು ನಾಡು ಮತ್ತು ರಾಷ್ಟ್ರದ ಇತಿಹಾಸವನ್ನು ತಿಳಿಸಿ ಕೊಡುತ್ತವೆ. ರಾಷ್ಟ್ರಕೂಟರ ರಾಜಧಾನಿ ಮಳಖೇಡ, ಮನ್ನೆದಡಿ ಸಾಸಿರ ರಾಜಧಾನಿ ಕಾಳಗಿ, ಅಲ್ಲೂರ, ನಾಗಾವಿ, ಸನ್ನತಿ ಮುಂತಾದ ಸ್ಥಳಗಳು ಕನ್ನಡ ಸಂಸ್ಕೃತಿಯ ಪ್ರತೀಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಪೂಜ್ಯ ನಾಗೇಶ್ ವಿ.ಗುಜರಾತಿ ಮುತ್ಯಾ, ಶಿವಯೋಗೆಪ್ಪಾ ಎಸ್.ಬಿರಾದಾರ, ಭೀಮಶೇನರಾವ ಕುಲಕರ್ಣಿ, ಸುಭಾಷ ಎಸ್.ಚೌಧರಿ, ನಾಗೇಶ್ ಠಾಕೂರ್, ವಿನಾಯಕ ಗುಜರಾತಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *