ಸುದ್ದಿ ಸಂಗ್ರಹ ಚಿತ್ತಾಪುರ
ಬ್ಯಾoಕ್’ಗಳು ನೀಡುವ ಸೌಲಭ್ಯಗಳ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಾರ್ಗದರ್ಶಿ (ಲೀಡ್) ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವಿಗೌಡ ಹೇಳಿದರು.
ಸಮೀಪದ ರಾವೂರ ಗ್ರಾಮದದಲ್ಲಿ ಎಸ್’ಬಿಐ ಬ್ಯಾoಕ್ ವತಿಯಿಂದ ನಡೆದ ವಿಮೆ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಾವು ಸಂಭವಿಸುವದು ನಾವು ನೋಡುತ್ತೆವೆ. ಸಾವು ಅನಿರೀಕ್ಷಿತ ಇಂತಹ ಸಂದರ್ಭದಲ್ಲಿ ಬ್ಯಾoಕ್ ಖಾತೆ ತೆಗೆದು ವಿಮೆ ಮಾಡಿಸಿದ್ದರೆ ಜೀವ ಕಳೆದುಕೊಂಡ ನಾಮಿನಿ ಅವರಿಗೆ ವಿಮೆಯ ಹಣ ಬರುವುದರಿಂದ ಅವರ ಜೀವನಕ್ಕೆ ಭದ್ರತೆ ಸಿಗುತ್ತದೆ. ಜೀವನ ಆರ್ಥಿಕವಾಗಿ ಸುಗಮ ರೀತಿಯಲ್ಲಿ ಸಾಗುತ್ತದೆ, ಆದ್ದರಿಂದ ಪ್ರತಿಯೊಬ್ಬರು ಸರಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿತ್ತಾಪುರ ಎಸ್’ಎಫ್’ಎಲ್ ರೇಖಾ ತಳವಾರ ಪ್ರಾಸ್ಥಾವಿಕವಾಗಿ ಮತ್ತು ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು.
ರಾವೂರ ಗ್ರಾಮದ ವಿಮೆಯ ಫಲಾನುಭವಿಗಳಾದ ಶಿವಲೀಲಾ ಗಂಡ ಶಿವಯೋಗಿ ಮತ್ತು ಗಾಂಧಿ ನಗರದ ಬಸಮ್ಮ ಗೋವಿಂದ ಅವರಿಗೆ 2 ಲಕ್ಷ ರೂ ಚೆಕ್ ವಿತರಣೆ ಮಾಡಲಾಯಿತು.
ವೇದಿಕೆ ಮೇಲೆ ರಾವೂರ ಎಸ್’ಬಿ’ಐ ಬ್ಯಾoಕ್ ವ್ಯವಸ್ಥಾಪಕ ಗೋಪಿಕೃಷ್ಣ ರಾಠೋಡ, ಗ್ರಾ.ಪo ಅಧ್ಯಕ್ಷೆ ಸುಮಿತ್ರಾ ತುಮಕೂರ, ಗ್ರಾಮದ ಮುಖಂಡರಾದ ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ಚೇತನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶರಣು ಜ್ಯೋತಿ, ಮೋಹನ್ ಸೂರೆ, ಜಾಕೀರ್ ಹುಸೇನ್, ಹಸನ್ ಪಟೇಲ್, ಬಸವರಾಜ ತೋಟದ್, ಗುರುರಾಜ ವೈಷ್ಣವ, ಬಸವರಾಜ ಪರೀಟ್, ಸದಾಶಿವ ಜ್ಯೋತಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಶಿವಲೀಲಾ ಹಳ್ಳಿ ನಿರೂಪಿಸಿ, ವಂದಿಸಿದರು.