ಡಿ.9 ರಂದು ಭೀಮನಹಳ್ಳಿ ಮಂದಿರ ಉದ್ಘಾಟನೆ: ಡಾ.ಸಿದ್ಧತೋಟೇಂದ್ರ ಶ್ರೀ ಗುರುವಂದನೆ

ಗ್ರಾಮೀಣ

ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಾಲವಾರದ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಗುರುವಂದನಾ ಹಾಗೂ ರಜತ ಕಿರೀಟ ಸಮರ್ಪಣಾ ಸಮಾರಂಭ ಡಿ.9 ರಂದು ಮಂಗಳವಾರ ಅದ್ಧೂರಿಯಾಗಿ ನಡೆಯಲಿದೆ ಎಂದು ಶಿವಲಿಂಗ ಕೊಳ್ಳಿ ಭೀಮನಹಳ್ಳಿ ಹೇಳಿದ್ದಾರೆ.

ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಯ್ಯಾಳಲಿಂಗ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದ ಸಾನಿಧ್ಯವಹಿಸಲಿರುವ ನಾಲವಾರ ಪೂಜ್ಯರಿಗೆ ಸಕಲ ಸದ್ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಭೀಮನಹಳ್ಳಿ ಪುರಪ್ರವೇಶ ಮಾಡಲಿರುವ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಸಾರೋಟಿನಲ್ಲಿ ಭವ್ಯ ಮೆರವಣಿಗೆ ಮೂಲಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಬರಮಾಡಿಕೊಳ್ಳಲಿದ್ದಾರೆ, ಈ ಉತ್ಸವದಲ್ಲಿ ಡೊಳ್ಳು, ಹಲೆಗೆ, ಬಾಜಾ ಭಜಂತ್ರಿ, ಪೂರ್ಣ ಕುಂಭ ಕಳಸಗಳೊಂದಿಗೆ ಭವ್ಯವಾಗಿ ನೆರವೇರಲಿದೆ ಎಂದರು.

ಗುರುವಂದನಾ ಸಮಾರಂಭದಲ್ಲಿ ಪೂಜ್ಯರಿಗೆ ರಜತ ಕಿರೀಟ ಸಮರ್ಪಣೆ ಮತ್ತು ನಾಣ್ಯಗಳಿಂದ ತುಲಾಭಾರ ನಡೆಯಲಿದೆ. ಈ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಸಾಹಿತಿಗಳು, ಕವಿ- ಕಲಾವಿದರು, ರಾಜಕೀಯ ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *