ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಸಮೀಪದ ಕುಂದೂರು ಗ್ರಾಮದಲ್ಲಿರುವ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆಂದು ಆಗಮಿಸಿದ ಸಾವಿರಾರು ಭಕ್ತರಿಗೆ ವರದಶ್ರೀ ಫೌಂಡೇಶನ್ ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ನದಿಯ ದಂಡೆಯಲ್ಲಿ ಸೇರಿದ ಸಾವಿರಾರು ಜನ ಭಕ್ತರಿಗೆ ಉಚಿತ ಕಡಲೆ ಹಿಟ್ಟಿನ ಪ್ಯಾಕೆಟ್ ನೀಡುವ ಮೂಲಕ ನದಿ ಸಂರಕ್ಷಣೆ ಜಾಗೃತಿ ಮೂಡಿಸಲಾಯಿತು.
ನದಿಯ ಪಾವಿತ್ರೃ ಮತ್ತು ಶುದ್ಧತೆ ಬಗ್ಗೆ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಂಡೇಶನ್ ಸಂಸ್ಥೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸದಸ್ಯ ವೀರಣ್ಣ ಯಾರಿ ಹೇಳಿದ್ದಾರೆ.
ಬುಧವಾರ ಮತ್ತು ಗುರುವಾರ ಕುಂದನೂರಿನ ಸಂಗಮೇಶ್ವರ ದೇವಸ್ಥಾನದಲ್ಲಿನ ಸಂಗಮದಲ್ಲಿ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ನದಿ ನೀರಿಗೆ ಶಾಂಪೂ, ಸಾಬೂನು ಸೇರಿದಂತೆ ಮುಂತಾದ ರಾಸಾಯನಿಕ ಸೇರಿಸದೆ ಪುಣ್ಯಸ್ನಾನ ಮಾಡುವ ಕುರಿತು ನೆರೆದಿದ್ದ ಜನರಿಗೆ ವಿವರಿಸಿ, ನದಿಯ ನೀರನ್ನು ಕಾಪಾಡುವ ಪಣ ನಾವೆಲ್ಲರೂ ಇಂದಿನಿಂದ ತೊಡಬೇಕಾಗಿದೆ ಎಂದರು.
ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಅವರು ಪಟ್ಟಣದ ಸುತ್ತಮುತ್ತಲಿನ ನದಿಗಳಲ್ಲಿ ಪುಣ್ಯಸ್ನಾನ ಕೈಗೊಳ್ಳುವ ಜನರಿಗೆ ಕಡಲೆ ಹಿಟ್ಟಿನ 15 ಸಾವಿರ ಪ್ಯಾಕ್ಗಳು ಉಚಿತವಾಗಿ ಕಳಿಸಿದ್ದಾರೆ. ಆದ್ದರಿಂದ ನಾವು ಇದರ ಮಹತ್ವವನ್ನು ಅರಿತು ಎಲ್ಲರಿಗೂ ವಿಷಯುಕ್ತ ಪುಣ್ಯಸ್ನಾನದ ಅರಿವಿನೊಂದಿಗೆ ಪರಿಸರ ಸಂರಕ್ಷಣೆಗೆ ನಾವು ಬದ್ದರಾಗಬೇಕಾಗಿದೆ ಎಂದರು.
ಕುಂದುನೂರಿನ ಸಂಗಮನಾಥ ದೇವಸ್ಥಾನದ ಅರ್ಚಕ ಮಲ್ಲೇಶಪ್ಪ ಮಹಾರಾಜ್, ಶರಣಗೌಡ ಚಾಮನೂರು, ಭೀಮರಾವ ದೊರೆ, ದೇವೇಂದ್ರ ಕರದಳ್ಳಿ, ಸೂರ್ಯಕಾಂತ ಕೋಬಾಳಕರ ಶಹಾಬಾದ, ನಾಗರಾಜ ಗೌಡಪ್ಪನೂರ, ಶರಣಗೌಡ ಆಲೂರ, ಅಮೃತಪ್ಪ ದಿಗ್ಗಾವ್, ಕಾಶಿನಾಥ್ ಅರಳಗುಂಡಗಿ, ಸಿದ್ದಯ್ಯ ಶಾಸ್ತ್ರಿ ನಂದೂರಮಠ, ಭೀಮಣ್ಣ ಹವಾಲ್ದಾರ, ಮಲ್ಲಯ್ಯ ಸ್ವಾಮಿ ಮಠಪತಿ, ಪ್ರಕಾಶ್ ಪೂಜಾರಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.