ಲಾಡ್ಲಾಪುರ: ಖಾರದಪುಡಿ ಎರಚಿ 5 ಲಕ್ಷ ರೂ ದೋಚಿದ ಮುಸುಕುಧಾರಿಗಳು

ಗ್ರಾಮೀಣ

ಸುದ್ದಿ ಸಂಗ್ರಹ ಚಿತ್ತಾಪುರ
ಬೈಕ್‌ ಮೇಲೆ ತೆರಳುತ್ತಿದ್ದ ವ್ಯಕ್ತಿಗಳ ಮೇಲೆ ಇಬ್ಬರು ಮುಸುಕುಧಾರಿಗಳು ಖಾರದಪುಡಿ ಎರಚಿ 5 ಲಕ್ಷ ರೂ ದೋಚಿದ ಘಟನೆ ಲಾಡ್ಲಾಪುರ ಸಮೀಪ ನಡೆದಿದೆ.

ಅಲಹಳ್ಳಿಯ ಜ್ಯೋತಿ ವೈನ್‌ಶಾಪ್ ಮ್ಯಾನೇಜರ್ ಬಾಪರೆಡ್ಡಿ ನಾಚವಾರ ಹಾಗೂ ಯಂಕಪ್ಪ ಕಟ್ಟಿಮನಿ ಅವರು 5 ಲಕ್ಷ ರೂ ತೆಗೆದುಕೊಂಡು ಬೈಕ್ ಮೇಲೆ ತೆರಳುತ್ತಿದ್ದರು. ಆ ವೇಳೆ ಲಾಡ್ಡಾಪುರ ಹತ್ತಿರ ಅಡ್ಡಗಟ್ಟಿದ ಇಬ್ಬರು ಮುಸುಕುಧಾರಿ ಬೈಕ್’ನ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ಹಣ ಇರುವ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಪಿ.ಎಸ್ ಹೊನ್ನಂಜೆಕರ, ವಾಡಿ ಪಿಎಸ್‌ಐ ತಿರುಮಲೇಶ ಕೆ ಮತ್ತು ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *