ವಾಡಿ: ಭಗತ್ ಸಿಂಗ್ 119ನೇ ಜನ್ಮದಿನೋತ್ಸವ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ 119ನೇ ಜನ್ಮದಿನೋತ್ಸವ ಆಚರಿಸಲಾಯಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಭಗತ್ ಸಿಂಗ್ ಅವರ ಭಾವಚಿತ್ತಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ ಆದರ್ಶ ಜೀವನವು ತ್ಯಾಗ, ದೇಶಪ್ರೇಮ ಮತ್ತು ಕ್ರಾಂತಿಕಾರಿ ಚಿಂತನೆಗಳಿಗೆ ಸಾಕ್ಷಿಯಾಗಿದೆ ಎಂದರು.

ಭಗತ್ ಸಿಂಗ್ ಅವರ ವಿಚಾರಗಳು ಯುವಜನತೆಯಲ್ಲಿ ಸಮಾನತೆ, ಸತ್ಯ ಮತ್ತು ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಡುವ ಸ್ಫೂರ್ತಿ ತುಂಬುತ್ತವೆ. ಅವರ ಜೀವನವು ಅಲ್ಪಕಾಲಿಕವಾಗಿದ್ದರೂ, ಅವರ ಪರಂಪರೆ ಜೀವಂತವಾಗಿದೆ ಎಂದರು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ತುಕಾರಾಮ ರಾಠೋಡ, ಅರ್ಜುನ ಕಾಳೆಕರ, ಮಲ್ಲಿಕಾರ್ಜುನ ಸಾತಖೇಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *