ಸುದ್ದಿ ಸಂಗ್ರಹ ಶಹಾಬಾದ್
ಆಂತರಿಕ ಮೀಸಲಾತಿ ಕುರಿತು ಹೈಕೋರ್ಟ್’ನಲ್ಲಿ ಬಾಕಿ ಇರುವ
ಪ್ರಕರಣಗಳ ಅಂತಿಮ ವಿಲೇವಾರಿವರೆಗೆ ಹಳೆಯ ಮೀಸಲಾತಿ
ಮಾನದಂಡಗಳ ಪ್ರಕಾರ ಮುಂದುವರಿಸಲು ಎಲ್ಲಾ 101 ಜಾತಿಗಳಿಗೆ ಅವಕಾಶ ನೀಡುವ ಮೂಲಕ 100 ಪಾಯಿಂಟ್ ರೋಸ್ಟರ್ ಅನ್ನು ಅನ್ವಯಿಸುವ ಪ್ರತಿ ಎಬಿಸಿ ಗುಂಪಿಗೆ 5% ಹಂಚಿಕೆ ಮಾಡಲು ಜಿಲ್ಲಾ ಜೂಡೋ ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷ ರಾಜು ಪವಾರ ಮತ್ತು ಚಂದು ಜಾಧವ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಆಂತರಿಕ ಮೀಸಲಾತಿ ವರ್ಗೀಕರಣ ಹಾಗೂ ರೋಸ್ಟರ್ ಅಧಿಸೂಚನೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿರುವ ನಡುವೆಯೂ, ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿರುವುದಕ್ಕೆ ವಿವಿಧ ಸಮುದಾಯಗಳ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪ್ರಸ್ತುತ ನಡೆಯು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಆರೋಪಿಸಿರುವ ಸಂಘಟನೆಗಳು, ಹಳೆಯ ಮೀಸಲಾತಿ ನಿಯಮಗಳನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಜುಡೋ ಬಂಜಾರ ಫೌಂಡೇಶನ್ ಸಲ್ಲಿಸಿರುವ ರಿಟ್ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಪ್ರಸ್ತುತ ಆಂತರಿಕ ಮೀಸಲಾತಿ ಜಾರಿಗೆ ಮಧ್ಯಂತರ ತಡೆಯಾಜ್ಞೆ ಇದೆ. ಹೀಗಿದ್ದರೂ ಸರ್ಕಾರವು ನೇಮಕಾತಿ ಅಧಿಸೂಚನೆ ಹೊರಡಿಸುತ್ತಿರುವುದು ಅರ್ಥಹೀನವಾಗಿದೆ, ಇದು ಭವಿಷ್ಯದಲ್ಲಿ ಮತ್ತಷ್ಟು ಕಾನೂನು ಸಂಕಷ್ಟಗಳಿಗೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಲಾಗಿದೆ.
ಪ್ರಮುಖ ಬೇಡಿಕೆಗಳು: ಹಳೆಯ ನಿಯಮಗಳ ಮರುಜಾರಿ
ಆಂತರಿಕ ಮೀಸಲಾತಿಯ ಅಂತಿಮ ಇತ್ಯರ್ಥವಾಗುವವರೆಗೆ ಅಥವಾ
ಹೈಕೋರ್ಟ್’ನಲ್ಲಿರುವ ಪ್ರಕರಣಗಳು (ಡಬ್ಲೂ ಸಂಖ್ಯೆ 23399/2026)
ಪೂರ್ಣಗೊಳ್ಳುವವರೆಗೆ ಹಳೆಯ ಮೀಸಲಾತಿ ನಿಯಮಗಳಂತೆ
ನೇಮಕಾತಿ ಪ್ರಕ್ರಿಯೆ ನಡೆಸಬೇಕು.
ಸಮಾನ ಹಂಚಿಕೆ ಮಾದರಿ (ಪರ್ಯಾಯ ಪರಿಹಾರ): ರಾಜ್ಯ ಒಂದು ವೇಳೆ ಆಂತರಿಕ ಮೀಸಲಾತಿ ಅನ್ವಯಿಸುವುದಾದರೆ ಮೂರು ಗುಂಪುಗಳಿಗೆ ತಲಾ 5% ರಂತೆ ಸಮಾನವಾಗಿ ಹಂಚಬೇಕು.
ರೋಸ್ಟರ್ ಪಾಯಿಂಟ್ ತಿದ್ದುಪಡಿ: 3, 6, 9, 12 ಅಥವಾ 15 ಹುದ್ದೆಗಳು ಇದ್ದಾಗ ಎಬಿಸಿಗೆ ಸಮಾನವಾಗಿ ಹಂಚಿಕೆ ಮಾಡಿ, ಉಳಿದ 1, 2, 4, 5, 7, 8, 10, 11, 13 ಮತ್ತು 14ನೇ ಹುದ್ದೆಗಳನ್ನು ಎಸ್‌ಸಿ ಸಾಮಾನ್ಯ ಎಂದು ಪರಿಗಣಿಸಬೇಕು. ಇದರಿಂದ 101 ಜಾತಿಗಳಿಗೂ ಸಮಾನ ಅವಕಾಶ ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.
ಜೂಡೋ ಬಂಜಾರ ಸಂಘದ ಮುಖಂಡರಾದ ಚಂದು ಜಾಧವ, ವಿನೋದ ಚವ್ಹಾಣ್, ರಾಜೇಶ ಪವಾರ, ಕೃಷ್ಣ ಕಲ್ಲದೇವರು
ಸಂಗೀತಾಬಾಯಿ, ಅಂಜನಾಬಾಯಿ, ರವಿ ರಾಠೋಡ, ನಾಥು ಚವ್ಹಾಣ್ ಸೇರಿದಂತೆ ಅನೇಕರು ಇದ್ದರು.