ವೈದ್ಯನ ಅಪಹರಿಸಿ ಹಲ್ಲೆ: ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ನಗರದ

ಸುದ್ದಿ ಸಂಗ್ರಹ ಕಲಬುರಗಿ
ವಿದೇಶದಿಂದ ವಾಪಸ್ ತಾಯ್ನಾಡಿಗೆ ಮರಳಿದ್ದ ವೈದ್ಯ ಪತಿಯನ್ನು ಪತ್ನಿ ಮತ್ತು ಆಕೆಯ ಕುಟುಂಬದವರು ಅಪಹರಿಸಿ ಹಲ್ಲೆ ನಡೆಸಿ, ಹಣ, ಮೊಬೈಲ್ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಹಾಬಾದ್ ಮೂಲದ ಡಾ.ಮೊಹಮ್ಮದ್ ಸಿಲಾರ್ ಅವರು ಇತ್ತೀಚೆಗೆ ದುಬೈನಿಂದ ಮರಳಿ ಕಲಬುರಗಿಗೆ ಬಂದಿದ್ದರು. ಸೆ.16ರಂದು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದ ವೇಳೆ ಪತ್ನಿ ಹುಮೇರಾ ಖಾನಮ್, ಆಕೆಯ ಸಹೋದರ ಮತ್ತು ಚಾಲಕ ಸೇರಿ ಆಂಧ್ರಪ್ರದೇಶ ರಾಜ್ಯದ ನೋಂದಣಿ ಹೊಂದಿದ್ದ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ಬಳಿಕ ಹುಮನಾಬಾದ್‌ನ ಸಂಬಂಧಿಕರ ಮನೆಗೆ ಕರೆದೊಯ್ದು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ.

25 ಸಾವಿರ ನಗದು, ಎರಡು ತೊಲೆ ಬೆಳ್ಳಿ ಸರ ಮತ್ತು ಮೊಬೈಲ್‌ ಫೋನ್‌ ಕಸಿದುಕೊಂಡಿದ್ದಾರೆ ಎಂದು ದೂರಲಾಗಿದೆ. ವಿದೇಶಕ್ಕೆ ತೆರಳಬಾರದು ಮತ್ತು ಸಂಪಾದಿಸಿದ ಹಣವನ್ನು ತಮಗೇ ನೀಡಬೇಕು ಎಂದು ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Leave a Reply

Your email address will not be published. Required fields are marked *