ಸುದ್ದಿ ಸಂಗ್ರಹ ನವದೆಹಲಿ
ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೆ ಜೂನ್ ತಿಂಗಳಿನಲ್ಲಿ ಮೂರನೇ ಬಾರಿಗೆ ಇಂತಹ ಅತ್ಯಂತ ಕೆಟ್ಟ ಪರಿಸ್ಥಿತಿ ದಾಖಲಾಗಿದೆ.
ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಕೊರತೆ ಎದ್ದು ಕಾಣುತ್ತಿದೆ.
ಭಾರತದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ 165 ಮಿಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ‘ಎಲ್ ನಿನೋ’ ಪ್ರಭಾವದಿಂದ ಮಳೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಜೂನ್ ಅಂತ್ಯದ ವೇಳೆಗೆ ದೇಶದಲ್ಲಿ ಕೇವಲ 92.1 ಮಿಮೀ ಮಳೆಯಷ್ಟೆ ದಾಖಲಾಗಿದ್ದು, ಶೇಕಡಾ 42ರಷ್ಟು ಮಳೆ ಕೊರತೆ ಉಂಟಾಗಿದೆ.
126 ವರ್ಷಗಳ ಮಳೆ ಇತಿಹಾಸ
1905ರಲ್ಲಿ: 92.3 ಮಿಮೀ ಮಳೆಯಾಗಿತ್ತು.
2009ರಲ್ಲಿ: 87.5 ಮಿಮೀ ಮಳೆ ದಾಖಲಾಗಿತ್ತು.
2026ರಲ್ಲಿ: 92.1 ಮಿಮೀ ಮಳೆಯಷ್ಟೆ ದಾಖಲಾಗಿದೆ.
ಹವಾಮಾನ ವರದಿಗಳ ಪ್ರಕಾರ, ಜುಲೈ ತಿಂಗಳಿನಲ್ಲೂ ಬಹುತೇಕ ಇದೆ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು, ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.