ಟೆಂಗಳಿ: ಮತದಾರರ ಪಟ್ಟಿಯ‌ ವಿಶೇಷ ತೀವ್ರ ಪರಿಷ್ಕರಣೆಗೆ ಚಾಲನೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಟೆಂಗಳಿ ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಕಾರ್ಯ ಬಿಎಲ್ಒಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕಟ್ಟಿಮನಿ ಮಂಗಳವಾರ ಚಾಲನೆ‌ ನೀಡಿದರು.

ವಾರ್ಡ್’ನ ಒಂದು ಕುಟುಂಬದ ಸದಸ್ಯರಿಗೆ ಎಸ್ಐಆರ್ ನಮೂನೆಗಳನ್ನು ವಿತರಿಸಿ, ಅವರಿಂದ ಮಾಹಿತಿ ಪಡೆಯಲಾಯಿತು.

ಬಳಿಕ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕಟ್ಟಿಮನಿ ಮಾತನಾಡಿ, ಮನೆಮನೆಗೆ ಅರ್ಜಿ ವಿತರಿಸಲಾಗುವುದು. ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಪಡೆದು ಆನ್ ಲೈನ್ ನಲ್ಲಿ ಅಪಲೋಡ್ ಮಾಡುವ‌ ಕಾರ್ಯ ನಡೆಯಲಿದೆ. ಈ‌ ಪ್ರಕ್ರಿಯೆಯು ಒಂದು ತಿಂಗಳ ಕಾಲ ನಡೆಯುವುದು. ಜಿಲ್ಲೆಯಲ್ಲಿ ಹೊಸ ಮತದಾರರ ನೋಂದಣಿ ಎಂದಿನಂತೆ ಫಾರಂ‌ ನಂಬರ್ 6 ತುಂಬುವ ಮೂಲಕ ನಡೆಯಲಿದೆ ಎಂದರು.‌

ಬಿಎಲ್ಒ ಪವಿತ್ರಾ ಪಾಟೀಲ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಹೆಸರು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಮಾಹಿತಿಯನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಎಲ್ಒಗಳಾದ ನಿರ್ಮಲಾ, ಭೀಮಬಾಯಿ, ಭಾರತಿ ಮತ್ತು ವಾಲಿಕಾರ್ ಹೊನ್ನಪ್ಪ ನೈಕೊಡಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *