ಸುದ್ದಿ ಸಂಗ್ರಹ ಕಾಳಗಿ
ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡು ಪ್ರಕರಣ ದಾಖಲಿಸಿದ್ದ ಅನೇಕ ವ್ಯಕ್ತಿಗಳಿಗೆ ಪೊಲೀಸರು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ.
ಸಿಇಐಆರ್ ಪೋರ್ಟಲ್ ಮೂಲಕ ಒಟ್ಟು 4.8 ಲಕ್ಷ ಮೊತ್ತದ 15 ಮೊಬೈಲ್ಗಳು ಪತ್ತೆ ಹಚ್ಚಿದ್ದಾರೆ. ವಾರಸುದಾರರಿಗೆ ಸೋಮವಾರ ಠಾಣೆಗೆ ಕರೆಯಿಸಿದ ಪೊಲೀಸರು ಮೊಬೈಲ್ ನೀಡಿದ್ದಾರೆ.
ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ, ಹೆಡ್ಕಾನಸ್ಟೆಬಲ್ ಶ್ರೀಶೈಲ ಗೋನಾಕಿ, ಕಾನ್ಸ್ಟೆಬಲ್ ಮಾರುತಿ ರೆಡ್ಡಿ ಇದ್ದರು.