ಶಹಾಬಾದ್: ಡಾ.ಅಂಬೇಡ್ಕರ್ ಹಬ್ಬ ನಾಳೆ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವವನ್ನು ಅಂಬೇಡ್ಕರ್ ಹಬ್ಬ ಎಂದು ಮೇ.26 ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಮುಖಂಡ ಮರಿಯಪ್ಪ ಹಳ್ಳಿ ಮತ್ತು ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ ಹೇಳಿದರು.

ನಗದದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ ಅಂಬೇಡ್ಕರ್ 135ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 2 ಗಂಟಗೆ ಬಸವೇಶ್ವರರ ವೃತ್ತದಿಂದ ಹೈ ಸ್ಕೂಲ್ ಮೈದಾನದವರೆಗೆ (ಡಿ.ಜೆ ಹೊರತುಪಡಿಸಿ) ಸಾಂಸ್ಕೃತಿಕ ಕಲಾ ತಂಡದಿಂದ ಹಲಗೆ, ಲೇಜಿಮ್, ಕೋಲಾಟ, ಡೊಳ್ಳಿನ ಕುಣಿತ, ಬಂಜಾರ ನೃತ್ಯದಂತ ಭವ್ಯವಾದ ಮೆರವಣಿಗೆಯನ್ನು ಡಿವೈಎಸ್ಪಿ ಶಂಕರಗೌಡ ಪಾಟೀಲ ಉದ್ಘಾಟಿಸುವರು, ಬೆಳಗ್ಗೆ ನಗರ ಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್ ಧ್ವಜಾರೋಹಣ ಮಾಡುವರು ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಅಣದೂರಿನ ಪೂಜ್ಯ ಬಂತೆ ವರಜ್ಯೋತಿ ಮಹಾಥೇರೋ, ಮೈಸೂರಿನ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಜೀ ವಹಿಸಿಕೊಳ್ಳುವರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮಾರಂಭ ಉದ್ಘಾಟಿಸುವರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸಮಾರಂಭದ ಜ್ಯೋತಿ ಬೆಳಗಿಸುವರು, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ರವರು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು, ಮುಖ್ಯ ಭಾಷಣಕಾರರಾಗಿ ಕೆಪಿಸಿಸಿ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಮಾತನಾಡುವರು, ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ ವಹಿಸಿಕೊಳ್ಳುವರು ಎಂದರು‌‌.

ಅಥಿತಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ಡಾ.ಎಂ.ಎ ರಶೀದ, ಪ್ರವೀಣ ಪಾಟೀಲ, ಮಜರ ಆಲಂ ಖಾನ, ಚಂದ್ರಿಕಾ ಪರಮೇಶ್ವರ, ದೇವಿಂದ್ರಪ್ಪ ಮರತೂರ, ಡಾ.ಡಿ.ಜಿ ಸಾಗರ, ಶಿವಾನಂದ ಪಾಟೀಲ, ಡಾ.ಫಾರೂಕ ಮನ್ನೂರ, ಮರಿಯಪ್ಪ ಹಳ್ಳಿ, ಸುರೇಶ ಮೆಂಗನ ಮತ್ತು ತಹಸೀಲ್ದಾರ್ ನೀಲಪ್ರಭಾ ಬಬಲಾದ ಉಪಸ್ಥಿತರಿರುವರು ಎಂದರು.

ಜಯಂತೋತ್ಸವ ಸಮಾರಂಭಕ್ಕೆ ರಾಜ್ಯದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಮತ್ತು ತಾಲೂಕ ಅಧಿಕಾರಿಗಳ ವರ್ಗ ಭಾಗವಹಿಸುವವರು ಎಂದರು.

ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಎಸ್ಎಸ್ಎಲ್’ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವದು, ಕಾರಣ ತಾಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳು, ಮಹಿಳೆಯರು, ವಿಧ್ಯಾರ್ಥಿಗಳು ಜಾತಿ, ಧರ್ಮ ಎನ್ನದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ ರಾಜನ, ಪರಶುರಾಮ ಚಲುವಾದಿ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಉಪಸ್ಥಿತರಿದರು.

Leave a Reply

Your email address will not be published. Required fields are marked *