ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖಂಡರು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಅವರ ಕೆಲಸ ಮತ್ತು ಅವರು ಭಾರತೀಯ ಸಮಾಜಕ್ಕೆ ತಂದ ಬದಲಾವಣೆಯ ಸ್ಮರಿಸುವ ದಿನ ಎಂದರು.
ಮಹಾಪರಿನಿರ್ವಾಣ ದಿನ ಅವರ ನ್ಯಾಯ, ಸಮಾನತೆ ಮತ್ತು ನ್ಯಾಯಯುತ ಮೌಲ್ಯಗಳ ಪ್ರತಿಬಿಂಬಿಸುವ ಸಮಯವಾಗಿದ್ದು, ಇದು ಇಂದಿಗೂ ಮತ್ತು ಮುಂದೆಯೂ ನಮ್ಮ ದೇಶದ ಮೇಲೆ ಪ್ರಭಾವ ಬೀರುತ್ತಿದೆ.
ಅವರ ಭಾಷಣ ಮತ್ತು ಅವರ ಜೀವನದ ಪ್ರಮುಖ ಅಂಶಗಳು ಹೆಚ್ಚು ಸಮಾನ, ನ್ಯಾಯಯುತ ಸಮಾಜ ಸೃಷ್ಟಿಸುವ ಅವರ ಸಮರ್ಪಣೆ ನಮಗೆ ಸದಾ ಕಾಲ ನೆನಪಿಸುತ್ತದೆ ಎಂದರು.
ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಲು ಅವರು ಮಾಡಿದ ಪ್ರಯತ್ನಕ್ಕೆ ಇಂದು ಇಡಿ ದೇಶ ಗೌರವಿಸುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಎಸ್’ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಭೀಮಶಾ ಜಿರೋಳ್ಳಿ, ಶರಣಗೌಡ ಚಾಮನೂರ, ಅನಿಕೇತ ಚವ್ಹಾಣ, ರಾಜಶೇಖರ ಧೂಪದ್ ಸೇರಿದಂತೆ ಅನೇಕರು ಇದ್ದರು.