ರಾವೂರ: ನವರಾತ್ರಿ ಉತ್ಸವದ ಅಂಗವಾಗಿ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸೆ.21 ರಿಂದ ಮೌನ ಅನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ತಿಳಿಸಿದ್ದಾರೆ.
ಆಲೂರ ಗ್ರಾಮದ ಶಿಖರೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 21 ರಂದು ರವಿವಾರ ರಾತ್ರಿ ಮೌನ ಅನುಷ್ಠಾನ ಪ್ರಾರಂಭಿಸುವರು. ಅಕ್ಟೋಬರ್ 2 ರಂದು ದಸರಾ ಹಬ್ಬದ ದಿನ ಗುರುವಾರ ಮೌನ ಅನುಷ್ಠಾನ ಮಂಗಲವಾಗಿ ಅಂದು ಸಂಜೆ 5.30 ಕ್ಕೆ ಪೂಜ್ಯರು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಪದ್ಧತಿಯಂತೆ ವಿಶೇಷ ಆಶೀರ್ವಚನ ನೀಡಲಿದ್ದಾರೆ ಎಂದು ಡಾ.ಗುಂಡಣ್ಣ ಬಾಳಿ ತಿಳಿಸಿದ್ದಾರೆ.