ಚಿತ್ತಾಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ, ಕೋಲಿ ಸಮಾಜದ ಹಿರಿಯ ಮುಖಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಮುಖಂಡರು, ಯುವಕರು ಹುಟ್ಟು ಹಬ್ಬ ಶುಭಾಶಯ ಕೋರಿದರು.
ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ವಿವಿಧ ಸಮಾಜದ ಮುಖಂಡರು, ಯುವಕರು ಹುಟ್ಟು ಹಬ್ಬದ ಶುಭಾಶಯ ಕೋರಿದರು. ನಂತರ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗ್ರಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ಹೂನ್ನಪುರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶರಣು ಡೋಣಗಾಂವ, ಮುಖಂಡರಾದ ಬಸವರಾಜ ಚಿನಮಳ್ಳಿ, ರಾಮಲಿಂಗ ಬಾನರ್, ಭೀಮಣ್ಣ ಹೊತಿನಮಡಿ, ಪ್ರಭು ಹಲಕರ್ಟಿ, ಕರುಣಕುಮಾರ್ ಅಲ್ಲೂರ, ದೇವು ದಿಗ್ಗಾಂವ, ಸಾಬಣ್ಣ ಹಲಕರ್ಟಿ, ಸಿದ್ದು ಮೆಂಗನೂರ, ಶರಣಗೌಡ ಮಾಲಿಪಾಟೀಲ, ಸುಬ್ಬಣ್ಣ ಮೆಂಗ, ಸಾಬಣ್ಣ ಪೂಜಾರಿ, ಶಿವಯ್ಯ ಸ್ವಾಮಿ, ಸಾಬಣ್ಣ ಜಡಿ, ಕಾಶಪ್ಪ ರಟಕಲ್ ಸೇರಿದಂತೆ ಅನೇಕರು ಇದ್ದರು.