ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಚನೆ: ಡಿವೈಎಸ್ಪಿ ಪಾಟೀಲ

ಸುದ್ದಿ ಸಂಗ್ರಹ

ಚಿತ್ತಾಪುರ: ಚಿತ್ತಾಪುರ, ವಾಡಿ, ಮಾಡಬೂಳ ಪೊಲೀಸ್ ಠಾಣೆಯ ಪೊಲೀಸರಿಗೆ ತನಿಖೆ, ಬಿಟ್ ವ್ಯವಸ್ಥೆ, ಬಂದೊಬಸ್ತ್ , ರಾತ್ರಿ ಗಸ್ತು ಜೊತೆಗೆ ಆಕ್ರಮ ಚಟವಟಿಕೆಗಳ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ, ಮಾಡಬೂಳ, ವಾಡಿ ಪೊಲೀಸ್ ಠಾಣೆಯಲ್ಲಿ ಜನವರಿಯಿಂದ ಇಲ್ಲಿವರೆಗೆ ಆಕ್ರಮ ಮರಳು 18, ಮಟಕಾ 28, ಜೂಜಾಟ 9, ಕಳ್ಳತನದ 11 ಪ್ರಕರಣ ದಾಖಲಿಸಲಾಗಿದೆ ಎಂದರು.

ಆಕ್ರಮ ಮರಳು ಸಾಗಾಣಿಕೆ ಕುರಿತು ಚಿತ್ತಾಪುರ 14, ಮಾಡಬೂಳ 3, ಶಹಾಬಾದನಲ್ಲಿ 1 ಪ್ರಕರಣ ದಾಖಲಿಸಕೊಳ್ಳಲಾಗಿದೆ. ಮಟಕಾ 28, ಜೂಜಾಟ 9, ಆಕ್ರಮ ಮದ್ಯ ಮಾರಾಟ ಅಬಕಾರಿ ಕಾಯ್ದೆ ಅಡಿಯಲ್ಲಿ 8 ಹಾಗೂ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ 1 ಕಳ್ಳತನ 11 ಪ್ರಕರಣ ದಾಖಲಾಗಿವೆ. ಇದರಲ್ಲಿ 10 ಪ್ರಕರಣ ಯಶಸ್ವಿಯಾಗಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಕಳ್ಳತನದಲ್ಲಿ ಹೊರರಾಜ್ಯದವರು ಭಾಗಿಯಾದರೆ ಅವರ ಪತ್ತೆಗೆ ಸೂಕ್ತ ಕ್ರಮವಹಿಸಲಾಗಿದೆ. ವೆಂಕಟೇಶ ಕಾಲೋನಿ ಹಾಗೂ ಆಶ್ರಯ ಕಾಲೋನಿಯಲ್ಲಿ ನಡೆದ ಮನೆ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾದವರ ದೃಶ್ಯಾವಳಿ ಮತ್ತು ಅಫಜಲಪುರ ತಾಲೂಕಿನಲ್ಲಿ ನಡೆದ ಕಳ್ಳತನ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ ಹೊಲಿಕೆಯಾಗುತ್ತಿವೆ. ಕಳ್ಳತನ ಪ್ರಕರಣದಲ್ಲಿ ಹೊರ ರಾಜ್ಯದವರು ಭಾಗಿಯಾಗಿರುವ ಸಾಧ್ಯತೆ ಇರುವ ಕುರಿತು: ತನಿಖೆ ನಡೆಯುತ್ತಿದೆ ಎಂದರು.

ವಾಡಿ, ಮಾಡಬೂಳ, ಕಾಳಗಿ ಪೊಲೀಸ್ ಠಾಣೆಯಲ್ಲಿ ಐಪಿಸಿ 302 ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಎರಡು ಪ್ರಕರಣಗಳನ್ನು ಕೇವಲ 24 ಗಂಟೆಗಳಲ್ಲಿ ಮತ್ತು ಒಂದು ಪ್ರಕರಣವನ್ನು ಐದು ದಿನದಲ್ಲಿ ಪತ್ತೆ ಹಚ್ಚಲಾಗಿದೆ ಎಂದರು.

ಹೊರ ರಾಜ್ಯದವರ ಮಾಹಿತಿ ಸಂಗ್ರಹ: ಸಿಮೆಂಟ್ ಕಂಪನಿಗಳಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ವಸತಿ ಗೃಹಗಳಲ್ಲಿ, ಗುತ್ತಿಗೆದಾರರು, ನೌಕರರು, ಕಾರ್ಮಿಕರು ಕೆಲಸ ಮಾಡಲು ಹೊರ ರಾಜ್ಯದಿಂದ ಬಂದು ತಾಲೂಕಿನಲ್ಲಿ ವಾಸ ಮಾಡುತ್ತಾರೆ. ಅಂತವರು ಯಾವ ರಾಜ್ಯದಿಂದ ಯಾವ ಜಿಲ್ಲೆಯಿಂದ ಬಂದಿದ್ದಾರೆ ಎಂದು ಅವರ ಗುರುತಿನ ಚೀಟಿ, ಆಧಾರ್ ಕಾರ್ಡ, ಪೂರ್ಣ ವಿಳಾಸ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಶಹಾಬಾದ ಸಿಪಿಐ ನಟರಾಜ ಲಾಡೆ ಇದ್ದರು.

Leave a Reply

Your email address will not be published. Required fields are marked *