ಸುದ್ದಿ ಸಂಗ್ರಹ

ಕರ್ತವ್ಯ ನಿಷ್ಠೆಗೆ ಸಿಪಿಐ ಪಾಳಾ ಮಾದರಿ

ಸುದ್ದಿ ಸಂಗ್ರಹ ಕಾಳಗಿ
ಕರ್ತವ್ಯ ನಿಷ್ಠೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಪರಿಸರ ಜಾಗೃತಿ , ಅಪರಾಧಗಳ ತಡೆ , ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿರುವ ಸಿಪಿಐ ಜಗದೇವಪ್ಪ ಪಾಳಾ ಒಬ್ಬ ಉತ್ತಮ ಅಧಿಕಾರಿ ಎಂದು ಕಲಬುರಗಿ ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಅವರು ಹೇಳಿದರು.

ವರ್ಗಾವಣೆಗೊಂಡ ಸಿಪಿಐ ಜಗದೇವಪ್ಪ ಪಾಳಾ ಹಾಗೂ ಸಿಪಿಐ ಹಮೀದ್ ಪಟೇಲ್ ಸ್ವಾಗತ ಸಮಾರಂಭದಲ್ಲಿ ಅವರನ್ನು ಶನಿವಾರ ಪೆÇಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೌರವಿಸಿ ಮಾತನಾಡಿದರು.

ತಾನು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯನ್ನು ರಾಜ್ಯಕ್ಕೆ ಮಾದರಿಯಾಗಿಸಿ ಸಮಾಜದಲ್ಲಿ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸಿ, ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿರುವ ಜಗದೇವಪ್ಪ ಪಾಳಾ ಕ್ರಿಯಾಶೀಲತೆ ಪ್ರಶಂಸಾರ್ಹ ಎಂದರು.

ಶಹಾಬಾದ್ ಡಿವೈಎಸ್ ಪಿ ಶಂಕರಗೌಡ ಪಾಟೀಲ ಮಾತನಾಡಿ ಇಲಾಖೆಗಳ ನಡುವಿನ ಸಂಬಂಧಗಳು ಉತ್ತಮವಾಗಿದ್ದರೆ ಕರ್ತವ್ಯ ನಿರ್ವಹಿಸುವುದು ಸುಲಭ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಕಾನೂನಿನ ಅನೇಕ ಕಾರ್ಯಕ್ರಮಗಳಲ್ಲಿ ಜಗದೇವಪ್ಪ ಪಾಳಾ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಪ್ರತಿಯೊಬ್ಬ ಅಧಿಕಾರಿ ಶಿಸ್ತುಬದ್ಧವಾಗಿ, ಕಾನೂನಾತ್ಮಕವಾಗಿ ಸೇವೆ ಸಲ್ಲಿಸಿದರೆ ಅವರ ಅಧಿಕಾರಾವಧಿಯ ನಂತರವೂ ಗೌರವಗಳು ದೊರೆಯುತ್ತವೆ ಎಂದರು.

ಸಿಪಿಐ ಹಮೀದ್ ಪಟೇಲ್ ,ಪಿಎಸ್‍ಐ ಗೌತಮ್ ಕಾಂಬಳೆ, ಕ್ರೈಂ ಪಿಎಸ್‍ಐ ಸಿದ್ದಲಿಂಗ, ಶಾಂತಕುಮಾರ ಗುತ್ತೇದಾರ, ಪರಮೇಶ್ವರ ಮಡಿವಾಳ, ಸಂತೋಷ ಕಡಬೂರ, ರವಿದಾಸ ಪತಂಗೆ, ವಿಠ್ಠಲ್ ಸೇಗಾಂವಕರ, ಸಂತೋಷ ಪತಂಗೆ, ರೇವಣಸಿದ್ದ ಕಲಶೇಟ್ಟಿ, ದತ್ತು ಗುತ್ತೇದಾರ, ಪರಮೇಶ್ವರ ಕಟ್ಟಿಮನಿ, ಇಬ್ರಾಹಿಂ ಶಾ, ಅವಿನಾಶ ಗುತ್ತೇದಾರ, ಸುಂದರ ಸಾಗರ, ರಾಜು ಒಡೆಯರಾಜ ಸೇರಿದಂತೆ ಪೆÇಲೀಸ್ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *