ತೆಂಗಳಿ: ದಸರಾ ಹಬ್ಬ ಪ್ರಯುಕ್ತ ಶನಿವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಿವಿಧ ವಾದ್ಯಗಳೊಂದಿಗೆ ಸಂಚರಿಸಿ ಶ್ರೀ ಅಂಬಾಭವಾನಿ ದೇವಸ್ಥಾನದ ಆವರಣಕ್ಕೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು.
ಒಬ್ಬರಿಂದೊಬ್ಬರಿಗೆ ಬನ್ನಿ ಕೊಟ್ಟು ಯಾವಾಗಲೂ ಪ್ರೀತಿ, ಪ್ರೇಮದಿಂದ ಬಾಳೋಣ ಎಂದು ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿ (ದಸರಾ) ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ, ಗ್ರಾ.ಪಂ ಸದಸ್ಯ ಭೀಮಾಶಂಕರ ಮಾಲಿಪಾಟೀಲ, ಮಡಿವಾಳಯ್ಯ ಸಾಲಿ, ಓಂಪ್ರಕಾಶ ಹೆಬ್ಬಾಳ, ವೀರಭದ್ರಪ್ಪ ಬಾಳದೆ, ಪ್ರಭಾಕರ ತುಪ್ಪದ, ರೇವಶೇಟ್ಟಿ ತುಪ್ಪದ, ವಿಜಯಕುಮಾರ ತುಪ್ಪದ, ವಿಶ್ವನಾಥ ಬಾಳದೆ, ಫಕಿರಯ್ಯ ಸ್ಥಾವರಮಠ, ಭೀಮಾಶಂಕರ ಅಂಕಲಗಿ ಸೇರಿದಂತೆ ಗ್ರಾಮದ ಗ್ರಾಮಸ್ಥರು ಇದ್ದರು.