ಕಲಬುರಗಿ: ಕೆಕೆಆರ್‌ಟಿಸಿಯಿಂದ ವಾಟ್ಸ್‌ಆ್ಯಪ್‌ ಆಧಾರಿತ ಮುಂಗಡ ಟಿಕೆಟ್‌ ಸೇವೆ ಜಾರಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸುವ ಅನುಕೂಲತೆ ಹೆಚ್ಚಿಸಲು, ಡಿಜಿಟಲ್ ಸೇವೆಯ ಲಭ್ಯತೆ ವಿಸ್ತರಿಸುವ ಉದ್ದೇಶದಿಂದ ಮುಂಗಡ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯೊಂದಿಗೆ ಸಂಯೋಜಿತ ವಾಟ್ಸ್‌ಆ್ಯಪ್ ಆಧಾರಿತ (ಅವತಾರ್‌) ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ಜಾರಿಗೆ ತಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಯಾಣಿಕರು ನಿಗಮದ ವಾಟ್ಸ್‌ಆ್ಯಪ್ +916364940880 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಸೇವೆ ಪಡೆಯಬಹುದು. ನಿಗಮದಿಂದ 30 ದಿನಗಳ ಮುಂಚಿತವಾಗಿ ಸೀಟು ಕಾಯ್ದಿರಿಸುವಿಕೆಯನ್ನು ಸಕ್ರಿಯಗೊಳಿಸಿರುವುದರ ಜೊತೆಗೆ, ಪ್ರಯಾಣಿಕರಿಗೆ ಮುಂಗಡ ಆಸನ ಕಾಯ್ದಿರಿಸಲು ಹಲವು ರಿಯಾಯಿತಿಗಳನ್ನು ಮತ್ತು ಸೌಲಭ್ಯಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *