ಕಾಳಗಿ: ಮಾಡಬೂಳ ಪೊಲೀಸ್ ಠಾಣೆಯ ಆವರಣದಲ್ಲಿ ಸುಮಾರು ತಿಂಗಳುಗಳಿಂದ ಇರುವ ವಾಹನಗಳ ಮಾಲಿಕರು ಮಾಡಬೂಳ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಸಂಪರ್ಕಿಸಬೇಕು ಎಂದು ಕಾಳಗಿ ಸಿಪಿಐ ಜಗದೇವಪ್ಪ ಪಾಳ ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿರುವ ವಾಹನಗಳ ವಾರಸುದಾರರು ಇದುವರೆಗೆ ನಮ್ಮನ್ನು ಸಂಪರ್ಕಿಸಿರುವದಿಲ್ಲ, ಈ ವಾಹನಗಳ ಮಾಲಿಕರು ಸುಮಾರು ತಿಂಗಳಿನಿಂದ ಮಾಡಬೂಳ ಪೊಲೀಸ್ ಠಾಣೆಯ ಆವರಣದಲ್ಲಿ ಇರುತ್ತವೆ.
ಈ ವಾಹನಗಳ ಮಾಲಿಕರು ಸಂಬಂಧಪಟ್ಟ ವಾಹನದ ದಾಖಲಾತಿಗಳನ್ನು ತೆಗೆದುಕೊಂಡು ಮಾಡಬೂಳ ಪಿಎಸ್ಐ ಅವರಿಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಜುಲೈ 1ರ ರೊಳಗಾಗಿ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ, ಇವುಗಳ ವಿಲೆವಾರಿ ಕುರಿತು ಏಕಪಕ್ಷೀಯ ಕ್ರಮಕೈಗೊಳ್ಳಲಾಗುವದು ಎಂದರು.