ಬಿಜೆಪಿಯವರಿಗೆ ಪ್ರಧಾನಿ ಪ್ರಶ್ನಿಸುವ ಧೈರ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಕಲಬುರಗಿನರೇಂದ್ರ ಮೋದಿ ಅವರೇ ದೊಡ್ಡ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಅವರಿಗೆ ‌ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ಗೃಹ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು‌. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದ್ಯಮಿ, ಬಿಜೆಪಿ ಮುಖಂಡ ಸುಭಾಷಚಂದ್ರ ಅವರ 22 ಸಾವಿರ ಕೋಟಿ ಸಾಲವನ್ನು […]

Continue Reading

ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು ಕೃತಿ ಲೋಕಾರ್ಪಣೆ ನಾಳೆ‌‌

ಸುದ್ದಿ ಸಂಗ್ರಹ ವಾಡಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಡಾ.ಸೂರ್ಯಕಾಂತ ಸುಜ್ಯಾತ್‌ ಅವರು ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಪುಸ್ತಕದ ಲೋಕಾರ್ಪಣೆ ಸಮಾರಂಭ ಸೆ.6 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಜರುಗಲಿದೆ ಎಂದು ಸಂಚಲನ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಿ.ಎಂ ನದಾಫ್ ಅವರು ಕೃತಿಯನ್ನು ಲೋಕಾರ್ಪಣೆ -ಗೊಳಿಸಲಿದ್ದಾರೆ. ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ […]

Continue Reading

ನಂದಗೋಕುಲ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಸುದ್ದಿ ಸಂಗ್ರಹ ಶಹಾಬಾದ್ನಗರದ ಚವ್ಹಾಣ್ ಶಿಕ್ಷಣ ಕೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಂದಗೋಕುಲ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಶಾಲೆಯ ಆವರಣವನ್ನು ವಿವಿಧ ಬಣ್ಣಗಳ ರಂಗೋಲಿ, ಹೂವುಗಳು ಮತ್ತು ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಕೈಯಲ್ಲಿ ಕೊಳಲು, ತಲೆಯಲ್ಲಿ ನವಿಲುಗರಿ ಧರಿಸಿದ ಬಾಲಕೃಷ್ಣರು, ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ರಾಧೆಯರ ಸನ್ನಿವೇಷವು ಶಾಲೆಯಲ್ಲಿ ಗೋಕುಲದ ವಾತಾವರಣ ಸೃಷ್ಟಿಯಾಗಿತ್ತು. […]

Continue Reading

ಮಂತ್ರಾಲಯದಲ್ಲಿ ಸಡಗರ ಸಂಭ್ರಮದಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ

ಸುದ್ದಿ ಸಂಗ್ರಹ ರಾಯಚೂರುಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮದಿಂದ ಆಚರಿಸಲಾಗಿದೆ. ಕೃಷ್ಣನ ಪೂಜೆಗೂ ಮುನ್ನ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಶ್ರೀಗಳ ನೇತೃತ್ವದಲ್ಲಿ ಪಿಂಡ್ಲಿ ಉತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಸ್ವತಃ ಸುಬುಧೇಂದ್ರ ತೀರ್ಥ ಶ್ರೀಗಳು ಪಿಂಡ್ಲಿ ಉತ್ಸವದಲ್ಲಿ ಪಾಲ್ಗೊಂಡು ಮೊಸರು, ಹಾಲು, ಬೆಣ್ಣೆ ತುಂಬಿದ ಮಡಿಕೆಯನ್ನು ಒಡೆದರು. ಉತ್ಸವದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಮಠದ ಸಿಬ್ಬಂದಿ, ಭಕ್ತರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ನಿರಂತರ ಎರಚುವ ಓಕಳಿ ಮಧ್ಯೆಯೆ ಕಣ್ಣಿಗೆ ಬಟ್ಟೆ […]

Continue Reading

ಪರೀಕ್ಷೆಯಲ್ಲಿ ಕಡಿಮೆ ಅಂಕ: ಮಕ್ಕಳಿಗೆ ರಕ್ತ ಬರುವಂತೆ ಥಳಿಸಿದ ಶಿಕ್ಷಕಿ

ಸುದ್ದಿ ಸಂಗ್ರಹ ಶಿವಮೊಗ್ಗಅಕ್ಷರ ಕಲಿಸಿ, ತಿದ್ದಿ ತೀಡಿ ಸನ್ಮಾರ್ಗ ತೋರಬೇಕಾದ ಶಿಕ್ಷಕಿಯೊಬ್ಬರು ಮಕ್ಕಳ ಮೇಲೆ ರಾಕ್ಷಸೀ ಪ್ರವೃತ್ತಿ ಮೆರೆದ ಅತ್ಯಂತ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕ್ಷುಲ್ಲಕ ಕಾರಣಕ್ಕೆ, ಅತಿಥಿ ಶಿಕ್ಷಕಿ ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬರುವಂತೆ ಮನಬಂದಂತೆ ಥಳಿಸಿದ್ದು, ಈ ಘಟನೆ ಇಡಿ ನಾಗರಿಕ ಸಮಾಜವನ್ನೆ ಬೆಚ್ಚಿಬೀಳಿಸಿದೆ. ನಡೆದಿದ್ದೆನು ? ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾಗಿರುವ […]

Continue Reading

ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ ?

ಸುದ್ದಿ ಸಂಗ್ರಹ ಬೆಂಗಳೂರುಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ಶಾಕ್​​ ಕಾದಿದ್ದು, ಶೀಘ್ರವೇ ಸರ್ಕಾರಿ ಬಸ್​​ಗಳ ಟಿಕೆಟ್​​ ದರದ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರ ಹೆಚ್ಚಳ ಮಾಡಿದೆ. ಹೀಗಿದ್ದರೂ ನಾವು ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಇದರಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂ ನಷ್ಟವಾಗುತ್ತಿದೆ. […]

Continue Reading

ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಅವಮಾನ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸುದ್ದಿ ಸಂಗ್ರಹ ಕಾಳಗಿಪಟ್ಟಣದ ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಸಂಪರ್ಕದ ಸಿಸಿರಸ್ತೆ ವಿಭಜಕದ ಸ್ಥಳದಲ್ಲಿ ಅಳವಡಿಸಿರುವ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಫಲಕವನ್ನು ಹರಿದುಹಾಕಿ ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಕೋಲಿ ಸಮಾಜದವರು ಪ್ರತಿಭಟನೆ ನಡೆಸಿದರು. ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಎರಡು ಗಂಟೆಗೂ ಅಧಿಕ ಕಾಲ ಪ್ರತಿಭಟಿಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ‘ಕುಲಗುರುವಿಗೆ ಅವಮಾನ ಮಾಡಿರುವ ಘಟನೆಯು ಕೋಲಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಸಮಾಜದಲ್ಲಿ ಅಶಾಂತಿ, […]

Continue Reading

ChatGPT ಬಳಸಿ 75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ: ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್

ಸುದ್ದಿ ಸಂಗ್ರಹ ಕಠ್ಮಂಡುನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಸ್ಥಿತಿಯನ್ನೆ ಬಂಡವಾಳ ಮಾಡಿಕೊಂಡು, ಎಐ ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕರನ್ನು ವಂಚಿಸಲು ಯತ್ನಿಸಿದ 32 ವರ್ಷದ ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ChatGPT ಬಳಸಿ ನಕಲಿ ರಸೀದಿ ಸೃಷ್ಟಿರಾಮೆಚಾಪ್ ಜಿಲ್ಲೆಯ ಗೋಕುಲಗಂಗಾ ಗ್ರಾಮೀಣ ಪುರಸಭೆಯ ಭಗವಾನ್ ಕರ್ಕಿ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಈತ ನೇಪಾಳ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1,20,000 ನೇಪಾಳಿ ರೂಪಾಯಿ (ಸುಮಾರು 75,000) ದೇಣಿಗೆ ನೀಡಿರುವುದಾಗಿ ಹೇಳಿಕೊಳ್ಳುವ ನಕಲಿ ಸ್ವೀಕೃತಿ ಪತ್ರವನ್ನು […]

Continue Reading

ಕಳ್ಳನಿಂದ 20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೆಬಲ್‌ಗಳು

ಸುದ್ದಿ ಸಂಗ್ರಹ ಕಲಬುರಗಿಎಂಒಬಿ ಶೀಟ್‌ ಇರುವ ರೂಢಿಗತ ಕಳ್ಳನಿಂದ 20 ಸಾವಿರ ಲಂಚ ಪಡೆಯುವಾಗ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದ ಬ್ರಹ್ಮಪುರ ಪೊಲೀಸ್‌ ಠಾಣೆಯ ಹಿಂಬದಿಯಲ್ಲೆ ಕಾನ್‌ಸ್ಟೆಬಲ್‌ಗಳು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾನ್‌ಸ್ಟೆಬಲ್‌ ಪರಶುರಾಮ್‌ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಕಾನ್‌ಸ್ಟೆಬಲ್‌ ವೀರೇಶ ಪರಾರಿಯಾಗಿದ್ದಾರೆ. ಇಲ್ಲಿನ ಬಾಪುನಗರದ ಮಾಂಗರವಾಡಿ ಗಲ್ಲಿಯ ಕಾರ್ತಿಕ್‌ ಪಾಟೀಲ ರೂಢಿಗತ ಕಳ್ಳನಾಗಿದ್ದು, ಆತನ ವಿರುದ್ಧ ಎಂಒಬಿ ಶೀಟ್‌ ಚಾಲ್ತಿಯಲ್ಲಿದೆ. 1 ಲಕ್ಷ […]

Continue Reading

ಭಾರತದಲ್ಲಿ ಮೊದಲ 5G ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಪಿಲಿಪ್ಸ್: ಹೇಗಿದೆ ನೋಡಿ

ಪ್ರಸಿದ್ಧ ಪಿಲಿಪ್ಸ್ (Philips) ಕಂಪನಿಯು ಮೊದಲ 5G ಸ್ಮಾರ್ಟ್‌ಫೋನ್ S7221 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುವ HD+ LCD ಡಿಸ್‌ಪ್ಲೇ, ಡ್ಯುಯಲ್ 5G ಸಿಮ್ ಬೆಂಬಲಿಸುವ 5G ಪ್ರೊಸೆಸರ್ ಹೊಂದಿದೆ. 8GB RAM ಮತ್ತು 128GB ಸ್ಟೋರೇಜ್‌ವರೆಗೆ ಆಯ್ಕೆ ನೀಡಲಾಗಿದೆ. ಹಿಂಭಾಗದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ 64MP ಮುಖ್ಯ ಕ್ಯಾಮೆರಾ ಇದ್ದು, 25W ಫಾಸ್ಟ್ ವೈರ್ಡ್ ಚಾರ್ಜಿಂಗ್ ಬೆಂಬಲಿಸುವ 5,700mAh ಬ್ಯಾಟರಿ ನೀಡಲಾಗಿದೆ. ಬೆಲೆ ಮತ್ತು […]

Continue Reading