ಹಾವೇರಿ: ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

ಜಿಲ್ಲೆ

ಹಾವೇರಿ: ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರು ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಮಠದಲ್ಲಿ ಎರಡು ಕೋಣೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮಠದಲ್ಲಿರುವ ಚಿನ್ನಾಭರಣ, ಬೆಳ್ಳಿಯ ಆಭರಣ ಮತ್ತು ತಾಮ್ರದ ವಸ್ತುಗಳನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳವಾದ ವಸ್ತುಗಳು
1) 15 ಗ್ರಾಂ ಬಂಗಾರದ ಸರದ ಹುಕ್ಕು, 1,79,550 ರೂ. ಮೌಲ್ಯದ್ದು
2) 18 ಗ್ರಾಂ ಬಂಗಾರದ ಸರ, ಒಂದು ಹುಕ್ಕು, 2,15,460 ರೂ. ಮೌಲ್ಯದ್ದು
3) 06 ಗ್ರಾಂ ತೂಕದ ಬಂಗಾರದ ಸಣ್ಣ ಪುಷ್ಪ ಎಲೆ 71,820 ರೂ. ಮೌಲ್ಯದ್ದು
4) 2 ಬೆಳ್ಳಿಯ ತಂಬಿಗೆ, 6 ಬೆಳ್ಳಿಯ ಆಚುಮ್ಯ ಲೋಟ,
6) ಬೆಳ್ಳಿಯ ಉದ್ದರಣಿ, 2 ಬೆಳ್ಳಿಯ ತಟ್ಟೆಗಳು, 1 ಬೆಳ್ಳಿಯ ಆರತಿ ಇವುಳ, 2,70,920 ರೂ. ಮೌಲ್ಯದ್ದು
5) 75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 03 ಕಳಸ, 10,000 ರೂ. ಮೌಲ್ಯದ್ದು
6) 60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು, 42,000 ರೂ. ಮೌಲ್ಯದ್ದು
7) 18 ಕೆ.ಜಿ ತಾಮ್ರದ 50 ತಂಬಿಗಳು 17,928 ರೂ. ಮೌಲ್ಯದ್ದು
8) 207 ಕೆ.ಜಿ ಹಿತ್ತಾಳೆಯ 02 ಸಾಲು ದೀಪಗಳು, 42,000 ರೂ. ಮೌಲ್ಯದ್ದು
9) 40 ಕೆ.ಜಿ ಹಿತ್ತಾಳೆಯ 20 ಗಂಟೆಗಳು, 20,000 ರೂ. ಮೌಲ್ಯದ್ದು
ಒಟ್ಟು 10,67,668 ರೂ. ಮೌಲ್ಯದ ಆಭರಣ, ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳು ಕಳವಾಗಿದ್ದು, ಈ ಬಗ್ಗೆ ಡಾ. ವೀಣಾ ಎಸ್, ಶ್ರೀನಿವಾಸ ವೈದ್ಯ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಾವೇರಿ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *