ಕಲಬುರಗಿ: ಸರಕಾರಿ ನೌಕರರ ಸಂಘದಿಂದ ಕರ್ನಾಟಕ
ರಾಜ್ಯೋತ್ಸವ ಅಂಗವಾಗಿ ಸರಕಾರಿ ನೌಕರರಿಗೆ ಬೆಂಗಳೂರಿನ ಸಂಘದ ಆವರಣದಲ್ಲಿ ನ.8 ರಂದು ರಾಜ್ಯಮಟ್ಟದ ಜನಪದ, ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ.
ನೌಕರರ ಸಂಘವು ನೀಡಿರುವ ಆನ್ಲೈನ್ ಲಿಂಕ್ https://forms.gle/8pR3m5nXowwQzccs9 ಮೂಲಕ ನ.2ರ ಸಂಜೆ 5 ಗಂಟೆಯೊಳಗೆ ನೋಂದಾಯಿಸಿಕೊಳ್ಳಬೇಕು. ವಿಜೇತ ತಂಡಗಳಿಗೆ ಪ್ರಥಮ 1,00,000 ರೂ., ದ್ವಿತೀಯ 75,000 ರೂ. ಹಾಗೂ ತೃತೀಯ ಬಹುಮಾನ 50,000 ರೂ. ಹಾಗೂ 20,000 ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಆಸಕ್ತ ಸರಕಾರಿ ನೌಕರರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.