ತಿರುಮಲ ದೇವಸ್ಥಾನ ಮಂಡಳಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಸುದ್ದಿ ಸಂಗ್ರಹ ಅಮರಾವತಿವಿಶ್ವಪ್ರಸಿದ್ಧ ತಿರುಮಲ ಬೆಟ್ಟದ ವೆಂಕಟೇಶ್ವರ ದೇವಾಲಯವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಗಳ ಉಪ ಕಾರ್ಯನಿರ್ವಾಹಕ ಅಧಿಕಾರಿ ಮೆಂಡು ಲೋಕನಾಥಮ್‌ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿತು. ಟಿಟಿಡಿ ಅಧಿಕಾರಿಯು ತನ್ನ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪದ ತನಿಖೆಯ ಭಾಗವಾಗಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಶೋಧ ಕಾರ್ಯ ನಡೆಸಲಾಯಿತು. ಡಿಎಸ್ಪಿ ಶ್ರೀನಿವಾಸರಾವ್ ನೇತೃತ್ವದ ಏಳು ಎಸಿಬಿ ತಂಡಗಳು, ಪೆದ್ದಕಾಪು ಲೇಔಟ್‌ನಲ್ಲಿರುವ […]

Continue Reading

ತರಗತಿ ನಡೆಯುತ್ತಿದ್ದಾಗಲೇ ಕೊಠಡಿಯ ಮೇಲ್ಛಾವಣಿ ಕುಸಿತ: ನಾಲ್ವರು ಮಕ್ಕಳಿಗೆ ಗಾಯ

ಸುದ್ದಿ ಸಂಗ್ರಹ ಬಾಗಲಕೋಟೆಶಾಲಾ ಶಿಕ್ಷಕ ಮಕ್ಕಳಿಗೆ ಪಾಠ ಮಾಡುವಾಗ ಕೊಠಡಿಯ ಮೇಲ್ಛಾವಣಿಯ ಕಾಂಕ್ರೀಟ್ ದಿಢೀರ್ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ದಿನನಿತ್ಯದಂತೆ ತರಗತಿ ನಡೆಯುತ್ತಿದ್ದಾಗ ಮೇಲ್ಛಾವಣಿಯ ಪ್ಲಾಸ್ಟರಿಂಗ್ ಮತ್ತು ಕಾಂಕ್ರೀಟ್ ಚೂರುಗಳು ಏಕಾಏಕಿ ಮಕ್ಕಳ ಮೇಲೆ ಬಿದ್ದಿವೆ. ಘಟನೆಯಿಂದ ನಾಲ್ವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ […]

Continue Reading

ಆಟೊ-ಲಾರಿ ಡಿಕ್ಕಿ: ಮೂರು ತಿಂಗಳ ಮಗು, ತಾಯಿ ಸಾವು

ಸುದ್ದಿ ಸಂಗ್ರಹ ವಾಡಿ ಕಲಬುರಗಿ–ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಲಕರ್ಟಿ ಬಳಿ ಬುಧವಾರ ಆಟೊ–ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ. ವಾಡಿ ಪಟ್ಟಣದ ಕಲಕಮ್ಮ ಬಡಾವಣೆ ನಿವಾಸಿ ಶರಣಮ್ಮ ಶರಣು ಸಿಂಘೆ(30) ಮತ್ತು ಅವರ ಪುತ್ರ ರಾಘವೇಂದ್ರ ಸಿಂಘೆ ಮೃತರು. ಸಾಬಮ್ಮ ದತ್ತು ಸಿಂಘೆ ಮತ್ತು ಆಟೊ ಚಾಲಕ ಖಾಜಾಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. 3 ತಿಂಗಳ ಹಿಂದೆ ಸಿಜೇರಿಯನ್ ಮಾಡಿಕೊಂಡಿದ್ದ ಶರಣಮ್ಮ, ಹೊಲಿಗೆ ಬಿಚ್ಚಿಸಿಕೊಂಡು ಬರಲು ಮಗು ಮತ್ತು ಅತ್ತೆಯೊಂದಿಗೆ […]

Continue Reading

ಅನಿಲಕುಮಾರ್ ರಾಠೋಡಗೆ ಗೌರವ ಡಾಕ್ಟರೇಟ್‌ ಪ್ರದಾನ‌

ಸುದ್ದಿ ಸಂಗ್ರಹ ಶಹಾಬಾದ್ ನಗರದ ಡಾ.ಅನಿಲಕುಮಾರ್ ರಾಠೋಡ ಅವರಿಗೆ ಅಮೇರಿಕನ್ ವಿಸ್ಡಮ್ ಪೀಸ್ ಯುನಿವರ್ಸಿಟಿಯೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಎಷ್ಟಾಬ್ಲಿಶಿಂಗ್ ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಷನ್ ಎಂಬ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅತ್ಯುತ್ತಮ ಕೊಡುಗೆ ನೀಡಿದ ಪ್ರಯುಕ್ತ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

Continue Reading

ಸಮುದಾಯ ಆರೋಗ್ಯ ಕೇಂದ್ರದ ಸಾಮಗ್ರಿ ಕಳವು: ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತು

ಸುದ್ದಿ ಸಂಗ್ರಹ ಶಹಾಬಾದ್ನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಯೂಸುಫ್ ಸಾಬ್ ನಾಕೇದಾರ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ರಜನಿ ಎಂ ಆದೇಶಿಸಿದ್ದಾರೆ. ಯೂಸುಫ್ ಸಾಬ್ ಆಗಸ್ಟ್ 25ರಂದು ಸಮುದಾಯ ಆರೋಗ್ಯ ಕೇಂದ್ರದ ಅಧೀನದಲ್ಲಿರುವ ಬಿಳಿ ಬಣ್ಣದ ಮೂರು ಕಬ್ಬಿಣದ ಕಾಟ್‌, ಒಂದು ಕಬ್ಬಿಣದ ಹಳೆಯ ಅಡ್ಜಸ್ಟೇಬಲ್ ಬೆಡ್ ಮತ್ತು ಮೂರು ಕಬ್ಬಿಣದ ಹಳೆಯ ರ್‍ಯಾಕ್‌ಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ಹಾಗೂ ಯಾವುದೆ ಪೂರ್ವಾನುಮತಿ ಪಡೆಯದೆ ಖಾಸಗಿ ವಾಹನದಲ್ಲಿ ಸಾಗಿಸಿರುವ […]

Continue Reading

KPSC ಹಗರಣದಲ್ಲಿ ನನ್ನ ಪಾತ್ರವನ್ನು ಬಿಜೆಪಿ ಬಹಿರಂಗ ಮಾಡಲಿ: ಪ್ರಿಯಾಂಕ್‌ ಖರ್ಗೆ ಸವಾಲು

ಸುದ್ದಿ ಸಂಗ್ರಹ ಕಲಬುರಗಿಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಏನಿದೆ ಎಂಬುದನ್ನು ಬಿಜೆಪಿ ಎಕ್ಸ್‌ಪೋಸ್‌ (ಬಹಿರಂಗ) ಮಾಡಲಿ. ಅದು ಜನರ ಮುಂದೆ ಬರಲೇಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಕೆಪಿಎಸ್‌ಸಿ ಹಗರಣ ಪ್ರಿಯಾಂಕ್‌ ಖರ್ಗೆ ವಿಕೆಟ್‌ ಬೀಳುತ್ತೆ ಎಂಬ ಬಿಜೆಪಿ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌, ‘ಕೆಪಿಎಸ್‌ಸಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿಕೆಟ್ ಬೀಳುವಂತಿದ್ದರೆ ಈ ವಿಷಯವನ್ನು ಬಿಜೆಪಿಯ ಹೇಡಿಗಳು ಸದನದಲ್ಲಿ ಯಾಕೆ ಚರ್ಚಿಸಲಿಲ್ಲ ?’ […]

Continue Reading

ಬಿಗ್‌ಬಾಸ್‌ನಲ್ಲಿ ಹೊಸ ದಾಖಲೆ: ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ

ಈ ಬಾರಿ ಬಿಗ್‌ಬಾಸ್ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದೆ. ನಾಲ್ಕೂ ಆವೃತ್ತಿಗಳ ನಿರೂಪಕರಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಇದೆ ಮೊದಲ ಬಾರಿಗೆ ಒಂದೆ ಪರದೆ ಮೇಲೆ ಪ್ರೊಮೋದಲ್ಲಿ ಕಾಣಿಸ್ಕೊಂಡಿದ್ದಾರೆ. ಎಲ್ಲಾ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮ ಸೆ.5, 2026ರಿಂದ ಪ್ರಾರಂಭವಾಗ್ತಿರೋದು ವಿಶೇಷ. ಬಿಗ್‌ಬಾಸ್ ಇತಿಹಾಸದಲ್ಲೆ ನಾಲ್ಕು ಆವೃತ್ತಿಯ ಆಯಾ ಸರಣಿ ಒಂದೆ ದಿನ ಪ್ರೀಮಿಯರ್ ಆಗ್ತಿರೋದು ಇದೆ ಮೊದಲು. ಒಂದೆ ಪ್ರೋಮೋದಲ್ಲೂ ನಾಲ್ವರು ನಿರೂಪಕರು ಕಾಣಿಸ್ಕೊಂಡಿದ್ದಾರೆ. […]

Continue Reading

ದಂಡಗುಂಡ ಬಸವೇಶ್ವರ ರಥೋತ್ಸವ

ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನ ಸುಪ್ರಸಿದ್ದ ದಂಡಗುಂಡ ಬಸವೇಶ್ವರ ಭವ್ಯ ರಥೋತ್ಸವ ಭಕ್ತ ಸಾಗರದ ಮಧ್ಯ ವಿಜೃಂಭಣೆಯಿಂದ ಜರುಗಿತು.‌ ಬೆಳಗ್ಗೆಯಿಂದಲೆ ದೇವಸ್ಥಾನಕ್ಕೆ ಭಕ್ತರ ದಂಡೆ ಹರಿದು ಬಂದಿತು. ಸಾತನೂರ ಗ್ರಾಮದಿಂದ ಶುರುವಾದ ಭಕ್ತರ ದಾಸೋಹ ಸೇವೆ ದೇವಸ್ಥಾನದ ದಾರಿಯುದ್ದಕ್ಕೂ ನಿರಂತರವಾಗಿತ್ತು‌‌. ಹೆಗಲ ಮೇಲೆ ದವಸ ಧಾನ್ಯಗಳ ಚೀಲಗಳನ್ನು ಹೊತ್ತು ಕಾಲ್ನಡಿಗೆಯ ಮೂಲಕ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಸೇವೆ, ಧರ್ಮದ ಧ್ವಜಗಳು, ಉಚ್ಚಾಯಿ, ಸುಮಂಗಲಿಯರಿಂದ ಆರತಿ, ಕುಂಭ, ಭಜನೆ, ಗೀಗೀ ಪದಗಳು, […]

Continue Reading

ಬಿಗ್ ಬಾಸ್ ನಡೆಸಲು ಇನ್ನೂ ಸಿಕ್ಕಿಲ್ಲ ಸರ್ಕಾರದ ಅನುಮತಿ: ಸಚಿವರು ಹೇಳಿದ್ದೆನು ?

ಸುದ್ದಿ ಸಂಗ್ರಹ ಬೆಂಗಳೂರುಬಿಗ್ ಬಾಸ್ ಕನ್ನಡ ಸೀಸನ್ 13 ಶೋ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಕೂಡ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ನಡೆಯಬೇಕಿದೆ. ಕಿಚ್ಚ ಸುದೀಪ್ ಅವರು ಶೋ ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಆದರೆ ಕಳೆದ ಸೀಸನ್ ವೇಳೆ ಉಂಟಾದ ವಿವಾದದಿಂದ ಈ ಬಾರಿ ಸರ್ಕಾರದ ಅನುಮತಿ ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಬಿಗ್ ಬಾಸ್ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಅರಣ್ಯ, ಪರಿಸರ ಹಾಗೂ […]

Continue Reading

ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಅಕ್ಕಿಗೆ ಬ್ರೇಕ್

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಅಕ್ಕಿಗೆ ವಿತರಣೆಗೆ ಬ್ರೇಕ್ ಹಾಕಲಾಗಿದೆ. ಈ ತಿಂಗಳ ಪಡಿತರ ವಿತರಣೆ ಆಗುತ್ತಿಲ್ಲ. ರಾಜ್ಯ ಸರ್ಕಾರದಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ತಿಂಗಳು ಕೇಂದ್ರ ಸರ್ಕಾರದ ಪಾಲಿನ 4 ಕೆಜಿ ಅಕ್ಕಿ, 6 ಕೆಜಿ ರಾಗಿ ವಿತರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ ಯಾಕೆ ಅಕ್ಕಿ ವಿತರಣೆ ಎನ್ನುವುದು ಪ್ರಶ್ನೆ ಆಗಿದೆ. ಮಲ್ಲೇಶ್ವರಂನ ನ್ಯಾಯಬೆಲೆ ಅಂಗಡಿಯಲ್ಲಿ ಕೇಂದ್ರ ಸರ್ಕಾರದ ಪಾಲಿನ 4 ಕೆಜಿ […]

Continue Reading