2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬಳಿಕ ಅಲರ್ಟ್‌ ಆದ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ. 2-5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. ಅಲ್ಲದೆ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. […]

Continue Reading

ಅಭಿವೃದ್ಧಿ, ನಿರ್ಮಾಣ ಕ್ಷೇತ್ರಕ್ಕೆ ವಾಸ್ತುಶಿಲ್ಪಿಗಳ ಕೊಡುಗೆ ಅಪಾರ

ಕಲಬುರಗಿ: ಯೋಜನೆಯುತ ಕಾರ್ಯದಿಂದ ಯಶಸ್ಸು ಸಾಧ್ಯವಿದೆ. ಸೂಕ್ತ ವಿನ್ಯಾಸ, ಯೋಜನೆ ಮತ್ತು ಮೇಲ್ವಿಚಾರಣೆಯ ಕಾರ್ಯ ಮಾಡುವ ಮೂಲಕ ಯಾವುದೆ ರೀತಿಯ ಕಟ್ಟಡ, ನಿರ್ಮಾಣ ಕಾರ್ಯಗಳನ್ನು ಮಾಡುವ ವಾಸ್ತುಶಿಲ್ಪಿಗಳ ಕಾರ್ಯ ಪ್ರಮುಖವಾಗಿದೆ. ಇಂದು ನಾವು ಕಾಣುವ ಅದ್ಭುತವಾದ ಕಟ್ಟಡಗಳ ಹಿಂದೆ ಅವರ ಶ್ರಮ ಮರೆಯುವಂತಿಲ್ಲ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ ‘ವಿಶ್ವ ಆರ್ಕಿಟೆಕ್ಟ್ ದಿನಾಚರಣೆ’ […]

Continue Reading

ಜೋಡೆತ್ತು ಮಾಡ್ತಾ ನಮಗೂ ಜೋಡೆತ್ತು ಸಿಕ್ತು: ಮದ್ವೆ ಬಗ್ಗೆ ಚಿಕ್ಕಣ್ಣ ಫಸ್ಟ್ ರಿಯಾಕ್ಷನ್

ಹಾಸ್ಯ ನಟ ಚಿಕ್ಕಣ್ಣ ಸೀಕ್ರೆಟಾಗಿ ಮದ್ವೆ ನಿಶ್ಚಯ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಹೂ ಮುಡಿಸುವ ಶಾಸ್ತ್ರ ನಡೆದು ಫೋಟೋಗಳು ವೈರಲ್ ಆಗಿದ್ದವು. ʻಜೋಡೆತ್ತುʼ ಸಿನಿಮಾ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ಚಿಕ್ಕಣ್ಣ, ಮತ್ತೊಂದು ಕಡೆ ಮದ್ವೆ ತಯಾರಿ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನ್ನ ಮದ್ವೆ ಕೂಡ ಆಗಿರುತ್ತೆ ಎಂದು ಚಿಕ್ಕಣ್ಣ ಹೇಳಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾ ಅವರನ್ನು ಚಿಕ್ಕಣ್ಣ ವರಿಸಲಿದ್ದು, ಇದು ಅರೇಂಜ್‌ ಮ್ಯಾರೇಜ್ […]

Continue Reading

ಮುಳ್ಳು ಮುಳ್ಳಾಗಿರುವ ಈ ಒಂದು ಹಣ್ಣಿಗೆ ಕ್ಯಾನ್ಸರ್, ಹೃದಯಾಘಾತ ಬರದಂತೆ ತಡೆಯುವ ಶಕ್ತಿಯಿದೆ

ಪ್ರಕೃತಿಯು ನಮಗೆ ಹಲವು ರೀತಿಯ ರುಚಿಕರವಾದ ಆಹಾರಗಳನ್ನು ನೀಡುತ್ತದೆ. ಅದರಲ್ಲಿಯೂ ತರಕಾರಿ ಮತ್ತು ಹಣ್ಣುಗಳು ಯಥೇಚ್ಛವಾಗಿ ಲಭ್ಯವಿರುತ್ತದೆ. ಇವೆಲ್ಲವೂ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯ ಪ್ರಯೋಜನಗಳು ಕೂಡ ನೀಡುತ್ತದೆ ಎಂಬುದು ತಿಳಿದ ವಿಚಾರ. ಇಂತಹ ಒಂದು ಹಣ್ಣುಗಳಲ್ಲಿ ರಂಬುಟಾನ್ ಕೂಡ ಒಂದು. ಇದು ಲಿಚಿಯನ್ನು ಹೋಲುವ ಹಣ್ಣಾಗಿದ್ದು ಹೆಚ್ಚಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಂಡುಬರುತ್ತದೆ. ಲಿಚಿಯನ್ನು ಹೋಲುವ ಈ ಕೆಂಪು ಬಣ್ಣದ ಹಣ್ಣು ನೀವು ನಂಬಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಈ […]

Continue Reading

ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಸಾಧಕರಾಗಲು ಸಾಧ್ಯ

ಕಲಬುರಗಿ: ಸಾಧನೆಗೆ ಬಡತನ, ಸಿರಿತನ ಅಡ್ಡಿಯಾಗದು. ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರು ಸಾಧಕರಾಗಬಹುದು ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಸಕರಾತ್ಮಕ ಗುಣಗಳಿಂದ ಆದರ್ಶ ವ್ಯಕ್ತಿಯಾಗಲು ಸಾಧ್ಯ, ಸೋಮಾರಿತನ, ಆಲಸ್ಯ, ದುರವ್ಯಸನಗಳೇ ನಮ್ಮ ವೈರಿಗಳಾಗಿವೆ, ಜಗತ್ತಿನ ಸಾಧಕರ ಜೀವನ ಚರಿತ್ರೆ […]

Continue Reading

ಎಲ್‌ಪಿಜಿ ಸಿಲಿಂಡರ್ ಡೆಲಿವರಿಗಾಗಿ ಬರಲಿದೆ ಹೊಸ ವ್ಯವಸ್ಥೆ: ಇದು ಗ್ರಾಹಕರಿಗೆ ಖುಷಿ ಕೊಡುವ ವಿಚಾರ

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ ವಿತರಣೆಯಲ್ಲಿ ವಿಳಂಬವನ್ನು ತಪ್ಪಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ನಡುವೆ ಏಕೀಕೃತ ವಿತರಣಾ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು ಹೊಸ ‘ಎಲ್‌ಪಿಜಿ ಇಂಟರ್‌- ಆಪರೆಬಲ್‌ ಸರ್ವೀಸ್ ಡೆಲಿವರಿ ಫ್ರೇಮ್‌ವರ್ಕ್’ ಪರಿಕಲ್ಪನೆಯಡಿ ಈ ಉಪಕ್ರಮ ಜಾರಿಗೊಳಿಸಲು ಮುಂದಾಗಿದ್ದು, ಇದರ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಪ್ರಸ್ತಾವಿತ ನೀತಿಯ ಅಡಿಯಲ್ಲಿ, ಮೂರು ಸರಕಾರಿ ಸ್ವಾಮ್ಯದ ಕಂಪನಿಗಳಾದ ಇಂಡೇನ್‌, ಭಾರತ್‌ ಗ್ಯಾಸ್‌ […]

Continue Reading

ನಾಡಿಗೆ ಹುಯಿಲಗೋಳ್ ನಾರಾಯಣರಾಯರ ಕೊಡುಗೆ ಅಪಾರ

ಕಲಬುರಗಿ: ಹುಯಿಲಗೋಳ್ ನಾರಾಯಣರಾಯರು ಆಧುನಿಕ ಕನ್ನಡ ಸಾಹಿತ್ಯದ ನಾಟಕಕಾರ ಮತ್ತು ಸ್ವಾತಂತ್ರ್ಯ ಹೋರಾಟಗಾರ. ರಾಜ್ಯದ ಉದಯಕ್ಕೆ ಸ್ಪೂರ್ತಿ ನೀಡಿದ  “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡ” ಅಂದಿನ ರಾಜ್ಯ ಗೀತೆಯನ್ನು ರಚಿಸಿದ ಪ್ರಸಿದ್ಧ ಕವಿಯಾಗಿದ್ದಾರೆ. ನಾಡಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಜೆ‌.ಆರ್ ನಗರದ ಖಾದ್ರಿ ಚೌಕ್ ನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸ‌ಮಾಜ ಸೇವಾ ಬಳಗದ ವತಿಯಿಂದ ಜರುಗಿದ ಹುಯಿಲಗೋಳ ನಾರಾಯಣರಾಯರ್ 140ನೇ […]

Continue Reading

ಅಳಿವಿನಂಚಿನ ವನ್ಯಜೀವಿಗಳ ಉಳಿಸುವ ಕಾರ್ಯವಾಗಲಿ

ಕಲಬುರಗಿ: ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ವನ್ಯಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವಿನಂಚಿನಲ್ಲಿವೆ. ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ರಕ್ಷಣೆ ಅಗತ್ಯವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ನಾಗೇಶ್ ಹೇಳಿದರು. ನಗರದ ಪಬ್ಲಿಕ್ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘71ನೇ ವಿಶ್ವ ವನ್ಯಜೀವಿ ಸಪ್ತಾಹ’ […]

Continue Reading

ನಾಡಿನ ಕಲೆ, ಪರಂಪರೆಗೆ ಶರಣಸಿರಸಗಿ ಕೊಡುಗೆ ಅಪಾರ

ಕಲಬುರಗಿ: ಶರಣಸಿರಸಗಿ ಗ್ರಾಮವು ಪುರಾತನ ನಂದಿ ಬಸವಣ್ಣ, ಮಲ್ಲಿಕಾರ್ಜುನ, ಗಣೇಶ, ಹನುಮಾನ ದೇವಸ್ಥಾನ, ವೀರಗಲ್ಲುಗಳು ಹೊಂದಿವೆ, ಇಲ್ಲಿನ ಕಲೆ, ಪರಂಪರೆ ಪ್ರಮುಖವಾಗಿದೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಮೆಟ್ಟಿದ ಪವಿತ್ರ ಭೂಮಿ ಇದಾಗಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ-40ರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಈ ಗ್ರಾಮವು ಕಲೆ, ಸಾಹಿತ್ಯ, ಸಂಗೀತ, […]

Continue Reading

ನ.15 ರಿಂದ ಹೊಸ ಟೋಲ್ ನಿಯಮ: ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರಿ ರಿಯಾಯಿತಿ

ನವದೆಹಲಿ: ಟೋಲ್ ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ ಹೊಂದದಿರುವ ವಾಹನಗಳು ನವೆಂಬರ್ 15ರಿಂದ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದರೆ ಅವು ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದರೆ ಯುಪಿಐ ರೂಪದಲ್ಲಿ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ […]

Continue Reading