ಪಾಕಿಸ್ತಾನದಲ್ಲಿ ಕೇವಲ 20 ರೂ ಸಿಗುತ್ತೆ ಹೊಟೇಲ್‌ ರೂಂ, ಇದರ ಅವಸ್ಥೆ ಹೇಗಿದೆ ಗೊತ್ತಾ ?

ಸುದ್ದಿ ಸಂಗ್ರಹ

ನವದೆಹಲಿ: ಪಾಕಿಸ್ತಾನದಲ್ಲಿ ಸಾಕಷ್ಟು ವಿಚಾರದಲ್ಲಿ ಅವ್ಯವಸ್ಥೆ ಹೊಂದಿರುವ ವಿಚಾರಗಳು ನಮಗೆಲ್ಲ ತಿಳಿದೆ ಇದೆ. ಅಂತೆಯೇ ಇದೀಗ ಪಾಕಿಸ್ತಾನದ ಪೇಶಾವರದಲ್ಲಿರುವ ಹೊಟೇಲ್ ಒಂದರಲ್ಲಿ ವಿಶ್ವದಲ್ಲೆ ಅತಿ ಅಗ್ಗದ ದರದ ಸೇವೆ ನೀಡುತ್ತಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ರಾತ್ರಿ ಈ ಹೊಟೇಲ್’ನಲ್ಲಿ ತಂಗಲು ಕೇವಲ 20 ರೂ ದರ ನಿಗದಿ ಮಾಡಿದೆ. ಇಷ್ಟು ಕಡಿಮೆ ದರದಲ್ಲಿ ತಂಗುವ ವ್ಯವಸ್ಥೆ ಮಾಡಿದ್ದು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ನಮ್ಮ ದೇಶದಲ್ಲೇ ಅತಿ ಕಡಿಮೆಗೆ ಸ್ಟೇ ಮಾಡಲು ರೂಮ್ ಹುಡುಕುದಾದರೆ 500-800 ರೂ ತನಕ ಕನಿಷ್ಠ ದರ ಇದ್ದೆ ಇರುತ್ತದೆ. ಆದರೆ ಪಾಕಿಸ್ತಾನದ ಈ ಹೊಟೇಲ್’ನ ಬೆಲೆಯು ಕೇವಲ 20 ರೂ ಆಗಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದ ಹೊಟೇಲ್ ಸ್ಟೇ ಎಂದು ಹೇಳಲಾಗುತ್ತಿದೆ. ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರೂಂ ಹೇಗಿದೆ ?
ಪಾಕಿಸ್ತಾನದ ಪೇಶಾವರ್ ನಗರದ ಈ ಹೋಟೆಲ್’ನಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಕೇವಲ 63 ಪಾಕಿಸ್ತಾನಿ ರೂಪಾಯಿಗಳು ಅಂದರೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸರಿಸುಮಾರು 20 ರೂ. ಎನ್ನಬಹುದು. ಹಾಗೆಂದ ಮಾತ್ರಕ್ಕೆ ಈ ರೂಂಗಳು ದೊಡ್ಡ ಲಕ್ಶೂರಿ ತರನಾಗಿ ಇಲ್ಲ. ಬಹಳ ಸರಳವಾಗಿದ್ದು ನೋಡಲು ಕೂಡ ಅಷ್ಟಾಗಿ ಚೆನ್ನಾಗಿಲ್ಲ ಹಾಗಾಗಿಯೇ ದರ ಬಹಳ ಕಡಿಮೆ ಇದೆ. ಇಲ್ಲಿಗೆ ಪ್ರವಾಸಕ್ಕೆ ಬಂದ ಬ್ರಿಟಿಷ್ ವ್ಲಾಗರ್ ಡೇವಿಡ್ ಸಿಂಪ್ಸನ್ ಅವರು ಇಲ್ಲಿನ ವಿಡಿಯೋ ಅಪ್ಲೋಡ್ ಮಾಡಿದ್ದು ಸದ್ಯ ಆ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಇಲ್ಲಿ ತಂಗಿದ್ದ ಅವರು ಆ ವೀಡಿಯೊ ಹಂಚಿಕೊಂಡಿದ್ದಾರೆ. ಅವರು ಇಲ್ಲಿ ಉಳಿದುಕೊಂಡ ತಮ್ಮ ಅನುಭವವನ್ನು ಕೂಡ ತಿಳಿಸಿದ್ದಾರೆ. ನಾನು ಪಂಚತಾರಾ ಹೋಟೆಲ್‌’ಗಳಲ್ಲಿ ತಂಗಿದ್ದೆನೆ, ಆದರೆ ಇಲ್ಲಿ ನಾನು ಪಡೆದ ವಿಶೇಷ ಅನುಭವಕ್ಕೆ ಅದ್ಯಾವುದು ಸಾಟಿಯಿಲ್ಲ. ಈ ಮೂಲಕ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆ ಪಡೆಯಿತು.

ಹೊಟೇಲ್ ಹೆಸರೇನು ?
ಪೇಶಾವರದ ಈ ಹಳೆಯ ವಸತಿಗೃಹದ ಹೆಸರು ಕ್ಯಾರವಾನ್ಸೆರೈ ಎಂದಾಗಿದ್ದು ಒಂದು ಕಾಲದಲ್ಲಿ ಸಿಲ್ಕ್ ರೂಟ್‌ನಲ್ಲಿ ಪ್ರಯಾಣಿಸುವ ವ್ಯಾಪಾರಿಗಳಿಗೆ ಆಶ್ರಯ ನೀಡಿದ್ದ ಐತಿಹಾಸಿಕ ಹೋಟೆಲ್‌ ಎಂದೆ ಇದನ್ನು ಕರೆಯಲಾಗುತ್ತದೆ. ಆದರೆ ಇಲ್ಲಿ ಯಾವುದೆ ಕೊಠಡಿಗಳಿಲ್ಲ, ಹವಾ ನಿಯಂತ್ರಣ ವ್ಯವಸ್ಥೆ ಇಲ್ಲ, ರೂಮಿಗೆ ಅಲಂಕಾರಗಳಿಲ್ಲ. ಬದಲಾಗಿ ಅತಿಥಿಗಳು ಕಟ್ಟಡದ ಮೇಲ್ಛಾವಣಿಯ ಮೇಲೆ, ಕೆಳಗೆ ಹಾಕಲಾದ ಮಂಚಗಳ ಮೇಲೆ ಇಲ್ಲಿಗೆ ಬಂದ ಅತಿಥಿಗಳು ಮಲಗುತ್ತಾರೆ.

ಫ್ಯಾನ್, ಸ್ನಾನಗೃಹ ಯಾವುದೆ ಐಷಾರಾಮಿ ಇಲ್ಲವಾಗಿದೆ. ಹೋಟೆಲ್‌ನ ಮಾಲಕರು ಪ್ರತಿಯೊಬ್ಬ ಅತಿಥಿಯನ್ನು ಮಾತನಾಡಿಸಿ ಆ ಸ್ಥಳದ ಶತಮಾನಗಳ ಹಳೆಯ ಪರಂಪರೆಯ ಬಗ್ಗೆ ಕಥೆ ಹಂಚಿಕೊಳ್ಳುತ್ತಿರುವುದು ಕೂಡ ಈ ಹೊಟೇಲ್’ನ ಇನ್ನೊಂದು ವಿಶೇಷತೆಯಾಗಿದೆ. ಈ ಬಗ್ಗೆ ನಾನಾ ತರನಾಗಿ ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ. ಈಗಿನ ಕಾಲದಲ್ಲಿ 20 ರೂಪಾಯಿಗೆ ಚಾ ಕೂಡ ಬರೊಲ್ಲ ಅಂತದ್ದರಲ್ಲಿ ಒಂದು ದಿನ ಉಳಿಯಲು ಅವಕಾಶ ನೀಡುವ ಇಂತಹ ಹೊಟೇಲ್ ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಬಗ್ಗೆ ತಿಳಿಸಿ, ಇಲ್ಲಿ ಸೊಳ್ಳೆ, ರೋಗಾಣು ಇತ್ಯಾದಿ ಇರುವ ಸಾಧ್ಯತೆ ಇದೆ ಎಂದು ಕಾಮೆಂಟ್ ಹಾಕಿದ್ದಾರೆ.

Leave a Reply

Your email address will not be published. Required fields are marked *