ಕಲಬುರಗಿ: ಶರಣಸಿರಸಗಿ ಗ್ರಾಮವು ಪುರಾತನ ನಂದಿ ಬಸವಣ್ಣ, ಮಲ್ಲಿಕಾರ್ಜುನ, ಗಣೇಶ, ಹನುಮಾನ ದೇವಸ್ಥಾನ, ವೀರಗಲ್ಲುಗಳು ಹೊಂದಿವೆ, ಇಲ್ಲಿನ ಕಲೆ, ಪರಂಪರೆ ಪ್ರಮುಖವಾಗಿದೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಮೆಟ್ಟಿದ ಪವಿತ್ರ ಭೂಮಿ ಇದಾಗಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ-40ರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಈ ಗ್ರಾಮವು ಕಲೆ, ಸಾಹಿತ್ಯ, ಸಂಗೀತ, ಧರ್ಮ, ಆಧ್ಯಾತ್ಮಿಕತೆ, ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದೆ. ಜೈನ ತೀರ್ಥಂಕರ ಮೂರ್ತಿ, ಶಿವನ ವಿಗ್ರಹ, ವೀರಗಲ್ಲು ಸೇರಿದಂತೆ ಮುಂತಾದ ಐತಿಹಾಸಿಕ ಕುರುಹುಗಳು ನಾಡಿನ ಇತಿಹಾಸವನ್ನು ಸಾರುತ್ತವೆ. ಇವುಗಳ ಸಂರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಗ್ರಾಮಸ್ಥರಾದ ಗುರುಬಸಪ್ಪ ಅವರಾದ, ಜಗದೀಶ ಗುತ್ತೇದಾರ, ಶರಣು, ಮಾದೇಶ್, ಸಿದ್ದಾರೂಡ, ಶಿವು, ಜೈಪ್ರಕಾಶ ಸೇರಿದಂತೆ ಅನೇಕರು ಇದ್ದರು.