ಹಾಸ್ಯ ನಟ ಚಿಕ್ಕಣ್ಣ ಸೀಕ್ರೆಟಾಗಿ ಮದ್ವೆ ನಿಶ್ಚಯ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಹೂ ಮುಡಿಸುವ ಶಾಸ್ತ್ರ ನಡೆದು ಫೋಟೋಗಳು ವೈರಲ್ ಆಗಿದ್ದವು.
ʻಜೋಡೆತ್ತುʼ ಸಿನಿಮಾ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ಚಿಕ್ಕಣ್ಣ, ಮತ್ತೊಂದು ಕಡೆ ಮದ್ವೆ ತಯಾರಿ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನ್ನ ಮದ್ವೆ ಕೂಡ ಆಗಿರುತ್ತೆ ಎಂದು ಚಿಕ್ಕಣ್ಣ ಹೇಳಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾ ಅವರನ್ನು ಚಿಕ್ಕಣ್ಣ ವರಿಸಲಿದ್ದು, ಇದು ಅರೇಂಜ್ ಮ್ಯಾರೇಜ್ ಎಂದಿದ್ದಾರೆ. ಶೀಘ್ರದಲ್ಲೇ ಮದುವೆಯ ದಿನಾಂಕ ಫಿಕ್ಸ್ ಆಗಲಿದೆ. ಜೋಡೆತ್ತು ನಿರ್ಮಾಪಕರ ಕಾಲ್ಗುಣದಿಂದ ನಮಗೂ ಜೋಡೆತ್ತು ಸಿಕ್ಕಿದೆ. ಡೈರೆಕ್ಟರ್ ಕೂಡ ಮದುವೆಯಾದರು. ಈಗ ನಾನು ಮದುವೆಯಾಗುತ್ತಿದ್ದೆನೆ. ಜೋಡೆತ್ತು ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನ್ನ ಮದುವೆ ಆಗಿರುತ್ತೆ ಎಂದಿದ್ದಾರೆ ಚಿಕ್ಕಣ್ಣ.
ಕಾಮಿಡಿ ಸ್ಟಾರ್ ಚಿಕ್ಕಣ್ಣ ಫುಲ್ ಫ್ಲೆಜ್ಡ್ ಹೀರೋ ಆಗಿ ಉಪಾಧ್ಯಕ್ಷ ಸಿನಿಮಾದ ಮೂಲಕ ಭಡ್ತಿ ಪಡೆದಿದ್ದರು. ಇದೀಗ ಇನ್ನೊಂದು ಹೊಸ ಚಿತ್ರ ಪ್ರಾರಂಭವಾಗಿದೆ. ಭೂಮಿ ಫಲ ಕೊಡಲು ಉಳುಮೆಗೆ ಜೋಡೆತ್ತು ಬೇಕು. ಬದುಕಿನ ಬಂಡಿ ಸಾಗಲು ಪತಿ-ಪತ್ನಿ ಜೋಡೆತ್ತಿನಂತೆ ಸಾಗಬೇಕು. ಹೀಗಾಗಿ ವೃತ್ತಿಯಲ್ಲೂ ವೈಯಕ್ತಿಕವಾಗಿ ಜೋಡೆತ್ತಿನ ಜೊತೆ ಪ್ರಯಾಣ ಮಾಡುತ್ತಿದ್ದಾರೆ ಚಿಕ್ಕಣ್ಣ.