ರೈತರು ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಕಲಬುರಗಿ: ಸಾವಯುವ ಗೊಬ್ಬರದ ವ್ಯಾಪಕ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ, ಕೃಷಿಕ ಸಮಾಜದ ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು. ಆಳಂದ ರಸ್ತೆಯ ಸುಂಟನೂರ ಕ್ರಾಸ್ ಸಮೀಪ ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ತೋಟದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ’ದ […]

Continue Reading

ವಾಡಿ: ಬಿಜೆಪಿಯವರ ಹೋಳಿ ಸಂಭ್ರಮಾಚರಣೆ

ವಾಡಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಶಕ್ತಿ ಆಂಜನೇಯ ಮಂದಿರದಲ್ಲಿ ಬಿಜೆಪಿ ಮುಖಂಡರು ಹೋಳಿ ಹಬ್ಬದ ಪ್ರಯುಕ್ತ ಪೂಜೆ ಸಲ್ಲಿಸಿ, ಪರಸ್ಪರ ಬಣ್ಣ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಅರ್ಜುನ ಕಾಳೆಕರ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಶರಣಮ್ಮ ಯಾದಗಿರಿ, ಮಲ್ಲಿಕಾರ್ಜುನ ಸಾತಖೇಡ, ಅನಿಲ ಕುಮಾರ ನಿರಡಗಿ, ಬಸವರಾಜ ಪಗಡಿಕರ್, ಅಂಬ್ರೇಷ ಕಡದಾಳ, ರಾಘವೇಂದ್ರ ಪಗಡಿಕರ್, ವಿಜಯ ಸುತ್ರಾವೆ ಸೇರಿದಂತೆ ಅನೇಕರು […]

Continue Reading

ಮಧುಮೇಹ ಔಷಧ ಬೆಲೆ ಶೇ.90 ಇಳಿಕೆ

ನವದೆಹಲಿ: ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತವಾಗಿದೆ. ಪೇಟೆಂಟ್‌ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್‌ನ ಬೆಲೆ 90% ರಷ್ಟು ಕುಸಿದಿದೆ. ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದೆ, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ. ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ […]

Continue Reading

ವ್ಯವಹಾರದ ಬಗ್ಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿವೆ

ಚಿತ್ತಾಪುರ: ಸಂಸ್ಥೆಯ ವ್ಯವಹಾರಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿವೆ, ಸದಸ್ಯರು ಅಂತಹ ವಿಚಾರಗಳ ಬಗ್ಗೆ ನಿರ್ಲಕ್ಷ್ಯವಹಿಸಿ. ಈ ಯೋಜನೆಯ ಪ್ರಯೋಜನ ಪಡೆದು ಕುಟುಂಬದ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ಕಾಶಿ ಹೇಳಿದರು. ಪಟ್ಟಣದ ವೆಂಕಟೇಶ್ವರ ನಗರದ ಅಮೃತ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಬ್ಯಾಂಕಿನಿಂದ […]

Continue Reading

ವಾಡಿ: ಬಿಜೆಪಿಯಿಂದ ವಿಶ್ವ ಮಹಿಳಾ ದಿನಾಚರಣೆ

ವಾಡಿ: ಪಟ್ಟಣದ ಅಂಬಾಭವಾನಿ ಮಂದಿರದ ಆವರಣದಲ್ಲಿ ತಾಲೂಕು ಬಿಜೆಪಿ ಮಂಡಲದ ಮಹಿಳಾ ಮೂರ್ಚಾದಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮಹಿಳಾ ಮೂರ್ಚಾದ ತಾಲೂಕು ಅಧ್ಯಕ್ಷ ನಾಗುಬಾಯಿ ಜಿತುರೆ ಮಾತನಾಡಿ, ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟ ನಡೆಸಿ ಗೆಲುವು ಪಡೆದ ದಿನವನ್ನೆ ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕಾಲವಿತ್ತು. ಮಾತ್ರವಲ್ಲದೆ ಮತದಾನ […]

Continue Reading

ಶರಣ ತತ್ವಕ್ಕೆ ಪೂಜ್ಯ ಡಾ.ಮಾತೆ ಮಹಾದೇವಿಯವರ ಕೊಡುಗೆ ಅನನ್ಯ

ಕಲಬುರಗಿ: ಸಾಮಾಜಿಕ ನ್ಯಾಯದ ಹರಿಕಾರರಾದ ಬಸವಣ್ಣನವರು ಮತ್ತು ಎಲ್ಲಾ ಶರಣರ ತತ್ವ ಹಾಗೂ ಕೊಡುಗೆಯನ್ನು ದೇಶದುದ್ದಕ್ಕೂ ಪ್ರಚಾರ ಮಾಡಿ, ಎಲ್ಲರಿಗೂ ವಚನಗಳ ಸಾರವನ್ನು ಉಣಬಡಿಸುವ ಮೂಲಕ ಮಾತೆ ಮಹಾದೇವಿಯವರು ಶರಣ ತತ್ವದ ಪ್ರಸಾರಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ಪರಮ ಪೂಜ್ಯ ಡಾ.ಮಾತೆ ಮಹಾದೇವಿ ಅವರ 79ನೇ […]

Continue Reading

ದುಷ್ಟತೆ ನಾಶದ ಮೇರು ಸಂದೇಶದ ಹೋಳಿ: ಎಚ್.ಬಿ ಪಾಟೀಲ

ಕಲಬುರಗಿ: ಸಂಸ್ಕೃತ ಶಬ್ದವಾದ ‘ಹೋಳಿ’ ಎಂದರೆ ‘ಸುಡು’ ಎಂದರ್ಥ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮದ, ಮೋಹ, ಮತ್ಸರದಂತಹ ಅರಿಷಡ್ವರ್ಗಗಳು, ಕೆಟ್ಟ ಗುಣಗಳನ್ನು ನಾಶಪಡಿಸಿ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಶಾಂತಿ, ಸೌಹಾರ್ದತೆಯ ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ಹೋಳಿ ಹಬ್ಬ ಹೊಂದಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಹೋಳಿ ಹಬ್ಬದ […]

Continue Reading

ಮುಂಜಾಗ್ರತೆ ವಹಿಸಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಮಾನವನ ದೇಹದ ಪ್ರಮುಖ ಭಾಗವಾದ ಕಿಡ್ನಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತದೆ. ನಿರಂತರ ಆಯಾಸ, ನಿದ್ರೆಯ ತೊಂದರೆ, ಒಣಗಿದ ಚರ್ಮ, ಮೂತ್ರದಲ್ಲಿ ಉರಿಯೂತ ಮತ್ತು ರಕ್ತಪಾತ, ಸ್ನಾಯು ಸೆಳೆತದಂತಹ ಲಕ್ಷಣಗಳು ಕಿಡ್ನಿಯ ತೊಂದರೆಯನ್ನು ಸೂಚಿಸುತ್ತವೆ. ಆಗ ನಿರ್ಲಕ್ಷ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕಿಡ್ನಿಯನ್ನು ರಕ್ಷಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಸಲಹೆ ನೀಡಿದರು. ಶೇಖರೋಜಾ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ […]

Continue Reading

ಶಹಾಬಾದ ಹೋಳಿ ಹಬ್ಬ ಮಾದರಿಯಾಗಲಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಶಹಾಬಾದ: ಹೋಳಿ ಹಬ್ಬದಲ್ಲಿ ಕಾಮದಹನ ಮಾಡುವಾಗ ವಿದ್ಯುತ್ ತಂತಿ, ಕೇಬಲ್, ವಿದ್ಯುತ್ ಟಿಸಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ದಿನದಂದು ಒತ್ತಾಯಪೂರ್ವಕವಾಗಿ ಬಣ್ಣ ಎರಚುವುದು ಅಥವಾ ಶಾಂತಿ ಕದಡುವ ಕೆಲಸ ಮಾಡಬಾರದು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬ ಅಚರಿಸಿ ಮಾದರಿಯಾಗಲಿ ಎಂದರು. […]

Continue Reading

ತೆಂಗಳಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

ತೆಂಗಳಿ: ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಸಾಲಿಮಠ ಮಾತನಾಡಿ, ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಮಹತ್ವ ಸಾರಿ ಮಾನವ ಧರ್ಮಕ್ಕೆ ಜಯವಾಗಲಿ ಎಂದರು. ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಸಾರಿದ ಅವರು ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ, ಸಮಾಜದಲ್ಲಿ ಮಾನವೀಯತೆಯ ಬೀಜ ಬಿತ್ತಿ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ […]

Continue Reading