ಕಾಗಿಣಾ- ಭೀಮಾ ನದಿಗಳ ಸಂಗಮವು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಪ್ರೇರಣೆ: ಮುಡುಬಿ ಗುಂಡೇರಾವ

ತಾಲೂಕು

ಚಿತ್ತಾಪುರ: ಕಾಗಿಣಾ- ಭೀಮಾ ನದಿಗಳ ಸಂಗಮವು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಪ್ರೇರಣೆ ನೀಡಿದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತ ಪಡಿಸಿದರು.

ತಾಲೂಕಿನ ಕುಂದನೂರು- ಹೊನಗುಂಟಿ ಸಮೀಪದ ಕೂಡಲ ಸಂಗಮನಾಥ ದೇವಾಲಯದಲ್ಲಿ ಗ್ರಾಮದ ಬಸವೇಶ್ವರ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-35ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕೊಂದನೂರು, ಹೊನಗುಂಟಾ, ಶಹಬಾದ, ಭಂಕೂರ, ಮರತೂರ, ಮಾಲಗತ್ತಿ ಮುಂತಾದ ಗ್ರಾಮಗಳು ಪ್ರಾಚೀನ ಕಾಲದಲ್ಲಿ ಪ್ರಸಿದ್ದಿ ಹೊಂದಿದ್ದವು. ಧರ್ಮ, ಆಧ್ಯಾತ್ಮ, ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಲ್ಲಿ ಅದ್ವಿತಿಯ ಸಾಧನೆ ಮಾಡಿವೆ, ಕನ್ನಡ ಸಂಸ್ಕೃತಿ ಅರಳಿದ ಈ ನೆಲವು ಪುಣ್ಯಕ್ಷೇತ್ರಗಳಾಗಿವೆ. ಕೂಡಲಸಂಗಮ ದೇವಾಲಯದಲ್ಲಿ ದೊರೆತ ಎರಡು ಶಾಸನಗಳ ಪ್ರಕಾರ ಕಲ್ಯಾಣ ಚಾಲುಖ್ಯರು, ಕಳಚೂರರು, ಮಾಂಡಳಿಕ ಅರಸರು ದೇವಾಲಯಲ್ಲಿ ನಡೆಯುವ ಪೂಜೆ, ಪುನಸ್ಕಾರ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಉದಾರ ದೇಣಿಗೆ ನೀಡಿದ್ದರು ಎಂಬುದು ತೀಲಿದು ಬರುತ್ತದೆ. ತುಂಬಾ ಕಲಾತ್ಮಕವಾದ ದೇವಾಲದಲ್ಲಿ ಹಲವಾರು ಸ್ಮಾರಕಗಳು, ಕುರುಹುಗಳು ನಾಡಿನ ಇತಿಹಾಸದ ಪುಟ ತೆರೆಯುತ್ತವೆ ಎಂದರು.

ಕೂಡಲಸಂಗಮವು ಪುರಾಣ ಕಾಲದಿಂದಲೂ ಪವಿತ್ರ ಕ್ಷೇತ್ರವಾಗಿ ಮೆರೆದಿದೆ. ಅಗಸ್ತ ಮುನಿಗಳು ತಪಸ್ಸುಗೈದ ಪವಿತ್ರ ಕ್ಷೇತ್ರವಾಗಿದೆ ಎಂದರು.

ಬಳಗದ ಅಧ್ಯಕ್ಷ ಪ್ರೊ. ಎಚ್.ಬಿ ಪಾಟೀಲ ಮಾತನಾಡಿ, ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕಡ್ಡಳ್ಳಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಇತಿಹಾಸ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು.

ಶಹಾಬಾದ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿ, ನಮ್ಮ ಇತಿಹಾಸ, ಭವ್ಯ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು ಎಂದರು.

ಕುಂದನೂರು- ಹೊನಗುಂಟಾ ಪರಿಸರದ ಭೀಮಾ ಮತ್ತು ಕಾಗಿಣಾ ನದಿ ಸಂಗಮ ಸ್ಥಳವು ಕೂಡಲಸಂಗಮ ಪ್ರಾಚೀನ ಕಾಲದಿಂದಲೂ ಧರ್ಮ, ಆಧ್ಯಾತ್ಮ ಕ್ಷೇತ್ರಗಳಿಗೆ ಮುನ್ನುಡಿ ಬರೆದ ಪವಿತ್ರ ಕ್ಷೇತ್ರವಾಗಿದೆ. ಅಗಸ್ತ ಮುನಿಗಳು ತಪಸ್ಸುಗೈದ ಈ ಕ್ಷೇತ್ರ ಪುರಣಾ ಪ್ರಸಿದ್ದವಾಗಿದೆ. ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಅರಸರು ಈ ಕ್ಷೇತ್ರಕ್ಕೆ ಬಂದು ದರ್ಶನ ಪಡೆಯುತ್ತಿದ್ದರು ಎಂಬದು ದಾಖಲೆಗಳಿಂದ ತಿಳಿದುಬರುತ್ತದೆ.

ಮುಡುಬಿ ಗುಂಡೇರಾವ
ಸಂಶೋಧಕ- ಸಾಹಿತಿಗಳು

ಈ ಸಂದರ್ಭದಲ್ಲಿ ಅರ್ಚಕ ಮಲ್ಲೇಶಪ್ಪ ಹೂಗಾರ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಮಹಾದೇವಪ್ಪ ಬಿರಾದಾರ, ಅಶೋಕ ಹೂಗಾರ, ಶರಣಪ್ಪ ಪೂಜಾರಿ, ಸಚಿನಕುಮಾರ, ಪ್ರವೀಣಕುಮಾರ ಮುಂತಾದವರಿದ್ದರು.

Leave a Reply

Your email address will not be published. Required fields are marked *