ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಶೋ ಆರಂಭವಾಗಲಿದೆ. ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಟೀಮ್ ಈ ಬಾರಿಯೂ ಕಿಚ್ಚ ಸುದೀಪ್ ಅವರೆ ನಿರೂಪಕರಾಗಿ ಬಿಗ್ ಬಾಸ್ ಮುನ್ನಡೆಸಲಿದ್ದಾರೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ.
ಇದರ ಬೆನ್ನಲ್ಲೇ ತೆರೆಮರೆಯಲ್ಲಿ ಬಿಗ್ ಬಾಸ್ 12 ಕೆಲಸಗಳು ಶುರುವಾಗಿದೆ. ಈಗಾಗಲೆ ಕೆಲ ಕಂಟೆಸ್ಟೆಂಟ್ಗಳ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗುವಾಗ ಶೋಗೆ ಸ್ಪರ್ಧಿಗಳನ್ನು ಯಾರು ಆಯ್ಕೆ ಮಾಡುತ್ತಾರೆ ? ಇದರ ಪ್ರೊಸೀಜರ್ ಹೇಗೆ ಇರುತ್ತದೆ ? ಎಂಬ ಕುತೂಹಲ ಸಾಮಾನ್ಯ ಜನರಲ್ಲಿ ಇದ್ದೆ ಇರುತ್ತದೆ. ಹೀಗಿರುವಾಗ ಬಿಗ್ ಬಾಸ್ ಮಾಜಿ ಕಂಟೆಸ್ಟೆಂಟ್ ಹಾಗೂ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅವರು ಬಿಗ್ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವವರು ಯಾರು ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಪ್ರಥಮ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬಿಗ್ ಬಾಸ್ ಕುರಿತಂತೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅವರಿಗೆ ಅನೇಕ ಜನರು ಕರೆ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಾಗಿ ಹೋಗಲು ನಮಗೊಂದು ಚಾನ್ಸ್ ಕೊಡಿಸಿ ಅಂತ ಕೇಳುತ್ತಿದ್ದಾರಂತೆ. ಆ ಕರೆಗಳಿಂದ ಕಿರಿಕಿರಿ ಅನುಭವಿಸಿರುವ ಪ್ರಥಮ್, ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಪೋಸ್ಟ್ ಮಾಡಿದ್ದಾರೆ.
“ಬಿಗ್ ಬಾಸ್ ಪ್ರೆಸ್ ಮೀಟ್ ಆದಮೇಲೆ ನೂರಾರು ಜನ ನಮ್ಮ ಆಫಿಸ್‌ಗೆ ಮತ್ತು ನನ್ನ ಆಪ್ತರ ಮೂಲಕ ಕಾಲ್ ಮಾಡ್ತಾನೇ ಇದ್ದಾರೆ. ಎಲ್ಲರಿಗೂ ಒಂದೆ ಮಾತು, ಯಾವ influence ಕೂಡ ನಡೆಯಲ್ಲ. ನಮ್ಮ ಕಲರ್ಸ್ ಕನ್ನಡ ಹೆಡ್ ಪ್ರಶಾಂತನಾಯಕ್ ಸರ್ ಮತ್ತು ಪ್ರಕಾಶ್ ಸರ್ ಅವರ ತಂಡವಿದೆ, ಅವರೆ ಕಾಂಟ್ಯಾಕ್ಟ್ ಮಾಡ್ತಾರೆ. ಯಾವ ಕಾಸ್ಟಿಂಗ್ ಮಾತು ನಡೆಯಲ್ಲ” ಎಂದು ಹೇಳಿದ್ದಾರೆ.
ದುಡ್ಡು ಕೊಟ್ಟು ಬಿಗ್ ಬಾಸ್‌ಗೆ ಹೋಗ್ತಿನಿ ಎನ್ನುವ ಭ್ರಮೆ ಬಿಡಿ. ಆಮೇಲೆ most important ಬಿಗ್ ಬಾಸ್ ಶೋಗೆ ಹೋಗೋಕೆ ಅಂತ ಮಾಡುವ ಆನ್‌ಲೈನ್ ಹುಚ್ಚಾಟಗಳನ್ನು ನಿಲ್ಲಿಸಿ. ಇದರಿಂದಲೇ ಸುದೀಪ್ ಸರ್ ಬೇಸರವಾಗೋದು, ಪ್ರಶಾಂತನಾಯಕ್ ಸರ್ ಮತ್ತು ಪ್ರಕಾಶ್ ಸರ್ ಬಿಟ್ಟು ಬೇರೆ ಯಾರು ಹೇಳಿದರೂ ಅದು ಫೇಕ್. ಯಾಮಾರಬೇಡಿ, ಆನ್‌ಲೈನ್ ಹುಚ್ಚಾಟ ನಿಲ್ಲಿಸಿ” ಎಂದು ಪ್ರಥಮ್ ಬರೆದುಕೊಂಡಿದ್ದಾರೆ.