ಶರಣ ಸಾಹಿತ್ಯಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಅನನ್ಯ

ಕಲಬುರಗಿ: ಕರ್ನಾಟಕದ ಗಡಿ ಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೆಯಾದ ಅಮೂಲ್ಯವಾದ ಕೊಡುಗೆಯನ್ನು ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಆಧ್ಯಾತ್ಮ ಚಿಂತಕಿ, ಸಮಾಜ […]

Continue Reading

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರಕ್ಕೆರಲು ಸಾಧ್ಯ: ಡಾ.ಶಿವಶರಣಪ್ಪ ಗೌಡಪ್ಪ

ಚಿತ್ತಾಪುರ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಫಲವಾಗಿ ಜೀವನದಲ್ಲಿ ಸಾಧನೆಯ ಶಿಖರಕ್ಕೆರಲು ಸಾಧ್ಯ ಎಂದು ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಶಿವಶರಣಪ್ಪ ಗೌಡಪ್ಪ ಹೇಳಿದರು. ತಾಲೂಕಿನ ಭಾಗೋಡಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ಯುವ ಕೃಷಿ ವೈಭವದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ದೈರ್ಯ, ಆತ್ಮವಿಶ್ವಾಸ ಇರಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವುಮೂಡಿಸುವ ಕೆಲಸ ಮಾಡಬೇಕು, ಶಿಕ್ಷಕರು ಮಾರ್ಗದರ್ಶನ ಮಾಡಬೇಕು […]

Continue Reading

ದಾಳಿ ವೇಳೆ ಅರಣ್ಯ ಅಧಿಕಾರಿ ಮನೆಯಲ್ಲಿದ್ದ ಹಣ ಎಣಿಸಿ ಎಣಿಸಿ ಅಧಿಕಾರಿಗಳು ಸುಸ್ತು

ಭುವನೇಶ್ವರ: ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಮುಂದಾಗಿದ್ದು ಇದರ ಭಾಗವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮನೆಯ ಮೇಲೆ ಶುಕ್ರವಾರ(ಜು.25) ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಈ ವೇಳೆ ಅಧಿಕಾರಿಯ ಮನೆಯಲ್ಲಿ ಚಿನ್ನದ ನಾಣ್ಯ ಸೇರಿದಂತೆ ಕೋಟ್ಯಾಂತರ ಮೌಲ್ಯದ ನಗದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಶುಕ್ರವಾರ ಕೊರಾಪುಟ್ ಜಿಲ್ಲೆಯ ಜೆಪೋರ್ ಅರಣ್ಯ ವಿಭಾಗದ ಜೇಪೋರ್ ಅರಣ್ಯ ಶ್ರೇಣಿಯ ಉಪ ರೇಂಜರ್ ರಾಮ […]

Continue Reading

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಜೀವ ವಿಮೆಯ 2 ಲಕ್ಷ ರೂ ಹಸ್ತಾಂತರ

ಕಾಳಗಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪ್ರವೀಣಕುಮಾರ ಜೆ.ಎಚ್ 2 ಲಕ್ಷ ರೂ. ಚೆಕ್ ವಿತರಿಸಿದರು. ತಾಲೂಕಿನ ತೆಂಗಳಿ ಗ್ರಾಮದ ಅಣ್ಣೆಮ್ಮ ಅರುಣಕುಮಾರ್ ಕಡ್ಲಿ ಅಸುನಿಗಿದ ಕಾರಣ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ 2 ಲಕ್ಷ ರೂ. ಚೆಕ್ ವಿತರಿಸಲಾಯಿತು. ಬ್ಯಾಂಕ ಖಾತೆ ಹೊಂದಿರುವ ಗ್ರಾಹಕರು ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂಜೆಜೆಬಿವೈ 436 ರೂ. ಮತ್ತು […]

Continue Reading

ದೀರ್ಘಾವಧಿಗೆ ಪ್ರಧಾನಿ: ಇಂದಿರಾ ಗಾಂಧಿ ಹಿಂದಿಕ್ಕಿದ ನರೇಂದ್ರ ಮೋದಿ

ಹೊಸದಿಲ್ಲಿ: ಸತತ ಅವಧಿಗೆ ಪ್ರಧಾನಿಯಾಗಿ ಸುದೀರ್ಘ‌ ಸೇವೆ ಸಲ್ಲಿಸಿದ ಹೆಗ್ಗಳಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರಕ್ಕೆ ಇಂದಿರಾ ಗಾಂಧಿ ದಾಖಲೆ ಮುರಿಯಲಿದ್ದಾರೆ. ಶುಕ್ರವಾರಕ್ಕೆ ಪ್ರಧಾನಿಯಾಗಿ 4,078 ದಿನಗಳು ಪೂರೈಸಲಿದ್ದಾರೆ. ಈ ಮೂಲಕ ಇಂದಿರಾ ಅವರ 4,077 ದಿನಗಳ ದಾಖಲೆ ಮುರಿಯಲಿದ್ದಾರೆ. ಇಂದಿರಾ ಗಾಂಧಿ ಅವರು 1966 ಜನವರಿ 24ರಿಂದ 1977 ಮಾರ್ಚ್‌ 24ರ ವರೆಗೆ ಸತತ ಪ್ರಧಾನಿ ಹುದ್ದೆಯಲ್ಲಿದ್ದರು. ಆ ದಾಖಲೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ವರ್ಗಾವಣೆಯಾಗಲಿದೆ. ಅತಿ ದೀರ್ಘ‌ […]

Continue Reading

ಬರವಣಿಗೆಯಿಂದ ಸಮಾಜಪರ ಕೆಲಸ ಮಾಡಿದ್ದರು

ಚಿತ್ತಾಪುರ: ದಿ.ನಾಗಯ್ಯಸ್ವಾಮಿ ಅಲ್ಲೂರ ಅವರು ಪತ್ರಕರ್ತರಾಗಿ ಬರವಣಿಗೆಯಿಂದ ಸಮಾಜಪರ ಕೆಲಸ ಮಾಡಿದ್ದರು ಎಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ಹೊಟ್ಟಿ ಹೇಳಿದರು. ತಾಲೂಕಿನ ಅಳ್ಳೊಳ್ಳಿ ಗ್ರಾಮದ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ, ಸಾಮರಸ್ಯ, ಪ್ರತಿಭೆಗೆ ಪ್ರೋತ್ಸಾಹಿಸುವ ಮನಸ್ಸು ದಿ.ನಾಗಯ್ಯಸ್ವಾಮಿ ಅಲ್ಲೂರ ಅವರಿಗೆ ಇತ್ತು ಎಂದರು. ಕಾರ್ಯಕ್ರಮದ ಮೂಲಕ ದಿ.ನಾಗಯ್ಯಸ್ವಾಮಿ ಅಲ್ಲೂರ’ರವರ ಸಾಧನೆಗಳನ್ನು ಸ್ಮರಿಸಿ, […]

Continue Reading

ರಾಷ್ಟ್ರದ ಅಭಿವೃದ್ಧಿಗೆ ತೆರಿಗೆಗಳು ಪೂರಕ: ಎಚ್.ಬಿ ಪಾಟೀಲ್

ಕಲಬುರಗಿ: ತೆರಿಗೆ ಪಾವತಿ ಶಿಕ್ಷೆಯಲ್ಲ, ಬದಲಿಗೆ ದೇಶದ ನಾಗರಿಕರ ಜವಾಬ್ದಾರಿಯಾಗಿದೆ. ಸರ್ಕಾರಗಳು ತೆರಿಗೆಗಳಿಂದ ಬರುವ ಆದಾಯದಿಂದ ಮೂಲಭೂತ ಸೌಕರ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಲಾಗುತ್ತದೆ. ರಾಷ್ಟ್ರದ ಅಭಿವೃದ್ಧಿಗೆ ತೆರಿಗೆಗಳು ಪೂರಕವಾಗಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “166ನೇ ರಾಷ್ಟ್ರೀಯ ಆದಾಯ ತೆರಿಗೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ‘ಜುಲೈ-24’ ರಂದು ‘ರಾಷ್ಟ್ರೀಯ ಆದಾಯ […]

Continue Reading

ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸಚಿವರ ಭರವಸೆ

ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದ ತ್ವರಿತ ಕಾಮಗಾರಿಗೆ ಮತ್ತು ಅಭಿವೃದ್ಧಿಗೆ ಭರವಸೆ ವ್ಯಕ್ತಪಡಿಸಿದ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರಿಗೆ ಪತ್ರ ಕಳಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಕಲಬುರಗಿ ನಗರಕ್ಕೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವರನ್ನು ಲೋಕ ಸಭೆಯ ಮಾಜಿ ಸದಸ್ಯ ಡಾ.ಉಮೇಶ ಜಾಧವ ಅವರೊಂದಿಗೆ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಹಾಗೂ ಮುಖಂಡ ಸುಭಾಷ್ ವರ್ಮಾ ಅವರೊಂದಿಗೆ ವಾಡಿ ಮಹಾಶಕ್ತಿ ಕೇಂದ್ರದ […]

Continue Reading

ತಿಲಕ್, ಆಜಾದರು ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರರು

ಕಲಬುರಗಿ: ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ‍್ಯದ ಅಪ್ರತಿಮ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ತಿಲಕ್‌ರು ಸ್ವರಾಜ್ಯದ ಪ್ರಮುಖ ಪ್ರತಿಪಾದಕರು. ಆಜಾದ್‌ರು ಕ್ರಾಂತಿಕಾರಕ ಸ್ವಾತಂತ್ರ ಹೋರಾಟಗಾರರು. ಇರ್ವ ಮಹನೀಯರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್’ರ ಜನುಮ […]

Continue Reading

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಆತ್ಮವಿಶ್ವಾಸಕ್ಕೆ ಕೊರತೆಯಿದೆ: ಶಿವಾನಂದ ಖಜುರ್ಗಿ

ಚಿತ್ತಾಪುರ: ಬಹಳಷ್ಟು ಸಾಧಕರು, ಪ್ರತಿಭೆಗಳು ಗ್ರಾಮೀಣ ಭಾಗದಿಂದ ಬಂದಿದ್ದಾರೆ, ಅದರಲ್ಲೂ ಬಡತನದಿಂದ ಬಂದಿದ್ದಾರೆ ಎಂದು ದಿಶಾ ಪದವಿಪೂರ್ವ ಕಾಲೇಜಿನ ಚೇರ್ಮನ್ ಶಿವಾನಂದ ಖಜುರ್ಗಿ ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣದ ನಾಡಿನಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಆದರೆ ಆತ್ಮವಿಶ್ವಾಸದ ಕೊರತೆಯಿದೆ, ಹಿಂಜರಿಕೆಯಿದೆ, ಕೀಳರಿಮೆಯಿದೆ, ಈ ಮನಸ್ಥಿತಿಯಿಂದ ಹೊರಬಂದರೆ ಖಂಡಿತ ನಮ್ಮ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸಿಲ್ಲದ […]

Continue Reading