Chinni Love U… U Must Love Me: ಇನ್ಸ್‌ಪೆಕ್ಟರ್‌ಗೆ ಲವ್ ಲೆಟರ್ ಬರೆದ ಮಹಿಳೆ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಚಿನ್ನಿ ಲವ್ ಯು, ಯು ಮಸ್ಟ್ ಲವ್ ಮೀ ಎಂದು ರಕ್ತದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಮಹಿಳೆಯೊಬ್ಬರು ಲವ್ ಲೆಟರ್ ಬರೆದಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಇನ್ಸ್‌ಪೆಕ್ಟರ್‌ ಸತೀಶ್‌ಗೆ ರಾಮಮೂರ್ತಿ ನಗರದ ನಿವಾಸಿಯಾಗಿರುವ ವನಜಾ ಎನ್ನುವವರು ಪದೆ ಪದೆ ಮಸೇಜ್ ಮಾಡಿ ಪ್ರೀತಿಸುವಂತೆ ಮಸೇಜ್ ಮಾಡುತ್ತಿದ್ದರು. ಅಲ್ಲದೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಇಲ್ಲದಾಗ ಅವರ ಟೇಬಲ್ ಮೇಲೆ ಲವ್ ಲೆಟರ್ ಜೊತೆಗೆ ಕಜ್ಜಾಯದ ಡಬ್ಬಿ, ಹೂ ಬೊಕ್ಕೆ ಮತ್ತು ಎರಡು ಶೀಟ್‌ನಲ್ಲಿ ಇಪ್ಪತ್ತು ಮಾತ್ರೆಗಳನ್ನು ಇಟ್ಟು ಹೋಗಿದ್ದಾರೆ. ನೀವು, ನನ್ನ ಪ್ರೀತಿಯನ್ನು ಒಪ್ಪುತ್ತಿಲ್ಲ, ನಿಮಗೆ ತೊಂದರೆ ಕೊಡಲು ನನಗೆ ಇಷ್ಟ ಇಲ್ಲ. ನೀವು ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ತುತ್ತೆನೆ. ನನ್ನ ಸಾವಿಗೆ ನೀವೆ ಕಾರಣ ಎಂದು ಹಾರ್ಟ್ ಚಿತ್ರ ಬರೆದು ಅದರಲ್ಲಿ ಚಿನ್ನಿ ಲವ್ ಯು, ಯು ಮಸ್ಟ್ ಲವ್ ಮೀ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾಳೆ.

ಮಹಿಳೆ ಪತ್ರ ಬರೆಯುವ ಮುನ್ನ ಮೊಬೈಲ್‌ಗೆ ಸಾಕಷ್ಟು ಬಾರಿ ಮೆಸೇಜ್ ಮಾಡುತ್ತಿದ್ದಳು. ಇದರಿಂದ ಬೇಸತ್ತು ಇನ್ಸ್‌ಪೆಕ್ಟರ್‌ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ. ಒಂದಲ್ಲ, ಎರಡಲ್ಲ ಹತ್ತಕ್ಕೂ ಹೆಚ್ಚು ನಂಬರ್‌ಗಳಿಂದ ಮೆಸೆಜ್ ಮಾಡಿದ್ದರಿಂದ ಅಷ್ಟು ನಂಬರ್‌ಗಳನ್ನು ಇನ್ಸ್‌ಪೆಕ್ಟರ್‌ ಬ್ಲಾಕ್ ಮಾಡಿದ್ದಾರೆ. ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದಕ್ಕೆ ಇದೀಗ ಪತ್ರ ಬರೆದಿದ್ದಾಳೆ. ಮಹಿಳೆ ಕಾಟಕ್ಕೆ ಬೇಸತ್ತು, ಇನ್ಸ್‌ಪೆಕ್ಟರ್‌ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *