ಸುದ್ದಿ ಸಂಗ್ರಹ ಮೂಡಿಗೆರೆ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 512 ಎಕರೆ 21 ಗುಂಟೆ ಅರಣ್ಯ ಕಂದಾಯ ಭೂಮಿಯನ್ನು ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಮರೆಬೈಲ್ ಗ್ರಾಮದ ಮನ್ಮಥ (ನೇಮಣ್ಣಗೌಡ) ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.
512 ಎಕರೆ 21 ಗುಂಟೆ ತನ್ನ ಪೂರ್ವಜರಾದ ಈರೇಗೌಡರಿಗೆ 1974ರಲ್ಲಿ ಭೂಮಿ ಹಕ್ಕು ಮರು ವರ್ಗಾವಣೆಯಾಗಿದೆ ಎಂಬ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪಿ, ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸಹಿ ಹಾಗೂ ನಕ್ಷೆಯನ್ನು ಬಳಸಿದ್ದ ಎನ್ನಲಾಗಿದೆ.
ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಖಾತೆ ಮಾಡಿಕೊಳ್ಳುವ ಈತನ ಭಾರಿ ಹಗರಣ ಈಗ ಬಯಲಿಗೆ ಬಂದಿದೆ.
ಈ ಅಕ್ರಮದ ವಾಸನೆ ಅರಿತ ಎಸಿ ಸೂಚನೆಯಂತೆ ತಹಸೀಲ್ದಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.