ವಾಡಿ: ಬಿಜೆಪಿ ಕಛೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿದ ವೀರರನ್ನು ಗೌರವಿಸಿ ಅವರಿಗೆ ಕೃತಜ್ಞರಾಗಿರುವುದೆ ಈ ನೆಲದ ಗುಣವಾಗಿದೆ ಎಂದರು. ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಜಮ್ಮು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಭಾರತೀಯರ ಮೇಲೆ ಪಹಲ್‌ಗಾಮ್‌ನಲ್ಲಿ ಪಾಕ್ ಉಗ್ರಗಾಮಿಗಳು ಹಾಡುಹಗಲೆ ಗುಂಡಿಟ್ಟು ಕೊಂದು ಭಾರತೀಯ ಹೆಣ್ಣು ಮಕ್ಕಳ ಹಣೆಯ ಕುಂಕುಮವನ್ನು ಅಳಿಸಿ ಹಾಕಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಉಗ್ರರಿಗೆ ತಕ್ಕ ಪ್ರತ್ಯುತ್ತರ […]

Continue Reading

ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಶರಣಾಂಜಲಿ

ಕಲಬುರಗಿ: ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಭಕ್ತಿಯ ಶರಣಾಂಜಲಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಪೂಜ್ಯ ಅಪ್ಪಾಜಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ, ದೇಶಕ್ಕೆ ಮಾದರಿಯಾದ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಕೋಟ್ಯಾಂತರ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅವರು ವಿದ್ಯಾ […]

Continue Reading

1 ಗಂಟೆ 43 ನಿಮಿಷ PM ಮೋದಿ ಭಾಷಣ, ದಾಖಲೆ: ಅತಿ ಕಡಿಮೆ ಸಮಯ ಭಾಷಣ ಮಾಡಿದ PM ಯಾರು ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನಿಸಿಕೊಂಡಿದ್ದಾರೆ. ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದಿದ್ದ ಮೋದಿ, ಈ ಬಾರಿ 103 ನಿಮಿಷಗಳ ಕಾಲ ಮಾತನಾಡುವ ಮೂಲಕ ತಮ್ಮದೆ ದಾಖಲೆ ಮುರಿದಿದ್ದಾರೆ. 2024ರ ಮೊದಲು ಮೋದಿ ಅವರ ದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಭಾಷಣ […]

Continue Reading

ಲಿಂಗೈಕ್ಕೆಕ್ಕೂ ಮುನ್ನ ತಮ್ಮ ಕೊನೆಯ ಆಸೆ ಈಡೇರಿಸಿಕೊಂಡ ಡಾ.ಶರಣಬಸಪ್ಪ ಅಪ್ಪ

ಕಲಬುರಗಿ: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪಾ (92) ಅವರು ಲಿಂಗೈಕ್ಯರಾಗಿದ್ದಾರೆ. ಡಾ. ಶರಣಬಸಪ್ಪ ಅಪ್ಪ ಅವರು ತಮ್ಮ ಅಂತಿಮ ಇಚ್ಛೆಯಂತೆ ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರು ಎಳೆದಿದ್ದಾರೆ. ಗೃಹ ಆರೈಕೆಗೆಂದು ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲು ಕುಟುಂಬಸ್ಥರು ನಿರ್ಧರಿಸಿದರು. ಅದರಂತೆ, ಡಾ. ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲಾಯಿತು. ಶರಣಬಸವೇಶ್ವರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ […]

Continue Reading

ಕರವೇ ತಾಲೂಕು ಗೌರವ ಅಧ್ಯಕ್ಷರಾಗಿ ಮಸ್ತಾನ್ ಸಾಬ್ ಕೊರವಿ ಆಯ್ಕೆ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾಳಗಿ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಮಸ್ತಾನ್ ಸಾಬ್ ತಂದೆ ಇಬ್ರಾಹಿಂ ಸಾಬ್ ಕೊರವಿ ಅವರನ್ನು ನೇಮಕ ಮಾಡಲಾಯಿತು. ನಗರದ ಒಕ್ಸ್ ಎಲೈಟ್ ಹೋಟೆಲ್’ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಾಸಿಕ ಸಭೆಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಕಾಶಿ ಮತ್ತು ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಅವರು ಕಾಳಗಿ ತಾಲೂಕು ಘಟಕದ ಗೌರವ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ತಾಲೂಕು […]

Continue Reading

ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಜನರು ಹುತಾತ್ಮರಾದರು

ಕಲಬುರಗಿ: ಎರಡು ಶತಮಾನಕ್ಕಿಂತ ಹೆಚ್ಚಿನ ಕಾಲ ಆಡಳಿತ ನಡೆಸಿದ ಬ್ರಿಟಿಷರ ಆಡಳಿತ ಕೊನೆಗಾಣಿಸಿ, ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಮಹನೀಯರು ಪ್ರಾಣ ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಭಾರತ ಸ್ವಾತಂತ್ರ್ಯದ ಯಶೋಗಾಥೆ’ ಎಂಬ ವಿಶೇಷ ಉಪನ್ಯಾಸ ನೀಡಿದ ಅವರು, ಹೋರಾಟದ ಪ್ರತಿಫಲವಾಗಿ ನಾವಿಂದು ಸ್ವಾತಂತ್ರ್ಯಯುತ ಜೀವನ ಸಾಗಿಸುತ್ತಿದ್ದು, […]

Continue Reading

ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

ಕಲಬುರಗಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ (92) ಅವರಿಂದು ಲಿಂಗೈಕ್ಯರಾಗಿದ್ದಾರೆ. ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿಯಾಗಿರುವ ಶರಣಬಸಪ್ಪ ಅಪ್ಪ ಅವರು ದಾಸೋಹ ಮಹಾ ಮನೆಯಲ್ಲಿ ಲಿಂಗೈಕ್ಯರಾಗಿದ್ದು, ಕುಟುಂಬಸ್ಥರು, ಅಪಾರ ಬಂಧು ಬಳಗ ಹಾಗೂ ಅನುಯಾಯಿಗಳನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ಶರಣಬಸಪ್ಪ ಅಪ್ಪ ಅವರನ್ನು ಖಾಸಗಿ ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್‌ ಮಾಡಲಾಗಿತ್ತು. ಮಠದಲ್ಲೇ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ಕೆಲ ದಿನಗಳಿಂದೀಚೆಗೆ ಮಠದಲ್ಲೇ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು […]

Continue Reading

ದಂಡೋತಿ ಸೇತುವೆ ಮುಳುಗಡೆ: ಸಂಚಾರ ಸ್ತಬ್ಧ

ಚಿತ್ತಾಪುರ: ಬುಧವಾರ ರಾತ್ರಿ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ. ಗುರುವಾರ ಬೆಳಿಗ್ಗೆ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದು ತಾಲೂಕಿನ ದಂಡೋತಿ ಸಮೀಪದ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕಾಗಿಣಾ ನದಿಯ ಮೇಲ್ಭಾಗದ ಸೇಡಂ, ಕಾಳಗಿ, ಚಿಂಚೋಳಿ ತಾಲೂಕುಗಳಲ್ಲಿ ಮಳೆಯಾಗಿದ್ದರಿಂದ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಬೆಣ್ಣೆತೊರಾ ಜಲಾಶಯದಿಂದ ನೀರು ಹೊರಗೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಏರುಗತಿಯಲ್ಲಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಆಚೆಗಿರುವ ಗ್ರಾಮಗಳ ವಿದ್ಯಾರ್ಥಿಗಳು ಬೆಳಿಗ್ಗೆ ಪಟ್ಟಣದ ವಿವಿಧ […]

Continue Reading

ಕಾರಲ್ಲಿ ಇಬ್ಬರು ಬಾಲಕಿಯರಿದ್ದರು, ಕಣ್ಣೀರಿಡುತ್ತಾ ಓಡಿ ಬಂದ ವಿದ್ಯಾರ್ಥಿನಿ: ಕಿಡ್ನ್ಯಾಪ್‌ಗೆ ನಡೆಯಿತಾ ಯತ್ನ ?

ಹಾಸನ: ಕಾರಲ್ಲಿ ಇಬ್ಬರು ಬಾಲಕಿಯರಿದ್ದರು, ಕಾರಲ್ಲಿದ್ದವರು ನನ್ನನ್ನೂ ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ದರು ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಅಳುತ್ತ ಓಡಿ ಶಾಲೆಗೆ ಬಂದ ಪ್ರಸಂಗ ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ನಡೆದಿದೆ. ಶಾಲೆಗೆ ಓಡಿ ಬಂದ ವಿದ್ಯಾರ್ಥಿನಿ, ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿ ಬಂದವರು ಅಪಹರಣಕ್ಕೆ ಯತ್ನಿಸಿದ್ದರು, ಕಾರಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರು ಇದ್ದರು ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ಗಾಬರಿಯಿಂದ ಬಾಲಕಿ ಬ್ಯಾಗ್‌ ಸಹ ಎಸೆದು ಬಂದಿದ್ದಾಳೆ. ಈ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ […]

Continue Reading

ಅರಜಂಬಗಾ: ಕರವೇ ಗ್ರಾಮ ಘಟಕದ ಅಧ್ಯಕ್ಷರಾಗಿ ಲಾಲ್ ಪಟೇಲ್ ಆಯ್ಕೆ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಅರಜಂಬಗಾ ಗ್ರಾಮ ಘಟಕದ ಅಧ್ಯಕ್ಷರಾಗಿ ಲಾಲ್ ಪಟೇಲ್ ತಂದೆ ಮಕಬೂಲ್ ಪಟೇಲ್ ಅವರನ್ನು ನೇಮಕ ಮಾಡಲಾಯಿತು. ನಗರದ ಒಕ್ಸ್ ಎಲೈಟ್ ಹೋಟೆಲ್’ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಾಸಿಕ ಸಭೆಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಕಾಶಿ ಮತ್ತು ಕರವೇ ಜಿಲ್ಲಾಧ್ಯಕ್ಷ ಆನಂದ್ ದೊಡ್ಮನಿ ಅವರು ಕಾಳಗಿ ತಾಲೂಕಿನ ಅರಂಬಗಾ ಗ್ರಾಮ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ತಾಲೂಕು ಅಧ್ಯಕ್ಷರು, […]

Continue Reading